ನವದೆಹಲಿ: ಲೋಕಸಭೆಯಲ್ಲಿ ಬಹು ನಿರೀಕ್ಷಿತ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಆಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಯವ್ಯಯವನ್ನ ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್ ಮೇಲೆ ಹಲವು ನಿರೀಕ್ಷೆಗಳಿದ್ದು, ಈ ಮೂಲಕ ಸತತ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ನಿರ್ಮಲಾ ಸೀತಾರಾಮನ್ ದಾಖಲೆ ಬರೆದಿದ್ದಾರೆ.
ಕೇಂದ್ರ ಬಜೆಟ್‌ಗೆ ಸಂಬಂಧಿಸಿದ ಕ್ಷಣ ಕ್ಷಣದ ಅಪ್ಡೇಟ್ಸ್ ಇಲ್ಲಿದೆ.
Feb 01, 2026, 12:27 : 7 ಅಪರೂಪದ ಕಾಯಿಲೆಗಳ ಔಷಧಗಳ ಬೆಲೆ ಇಳಿಕೆ. ಕ್ಯಾನ್ಸರ್‌ಗೆ ಸಂಬಂಧಿಸಿದ 17 ಪ್ರಮುಖ ಔಷಧಗಳ ಮೇಲಿನ ತೆರಿಗೆ ಕಡಿತ:ನಿರ್ಮಲಾ ಸೀತಾರಾಮನ್
Feb 01, 2026, 12:26: ಸಿಗರೇಟು ಮೇಲೆ ತೆರಿಗೆ ಹೆಚ್ಚಿಸಿದ ಕೇಂದ್ರ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Feb 01, 2026, 12:23: ಜಾಮ್‌ನಗರದಲ್ಲಿ ಆಯುಷ್ ಔಷಧಾಯಲಗಳು, ಔಷಧ ಪರೀಕ್ಷಾ ಪ್ರಯೋಗಾಲಯಗಳು, ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಹಣಕಾಸು ಸಚಿವೆ ಪ್ರಸ್ತಾಪ
Feb 01, 2026, 12:23: ಭಾರತದ ಹೊರಗಡೆ ನೆಲೆಸಿರುವ ವ್ಯಕ್ತಿಗಳಿಗೆ ಪಟ್ಟಿ ಮಾಡಲಾದ ದೇಶದ ಕಂಪನಿಗಳಲ್ಲಿ ಹೂಡಿಕೆ ಮಾಡಲು ಅನುಮತಿ
Feb 01, 2026, 12:23: 2026-27ನೇ ಸಾಲಿನಲ್ಲಿ ವಿತ್ತೀಯ ಕೊರಜೆ ಜಿಡಿಪಿಯ 4.4ರಷ್ಟಿತ್ತು. 2027ನೇ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯು 4.3ರಷ್ಟಿರಲಿದೆ.
Feb 01, 2026, 12:23, : ಮದ್ಯದ ಬೆಲೆ ಏರಿಕೆ
Feb 01, 2026, 12:22 : ಆದಾಯ ತೆರಿಗೆ ವಿಳಂಬ ಪಾವತಿಗೆ ಶೇ 10ರಷ್ಟು ದಂಡ ಸಾಧ್ಯತೆ
Feb 01, 2026, 12:22 ; ಒಟ್ಟು ಮಾರುಕಟ್ಟೆ ಸಾಲ ₹ 17.2 ಲಕ್ಷ ಕೋಟಿ: ನಿರ್ಮಲಾ
Feb 01, 2026, 12:15 ; ಕ್ರೀಡಾ ಕ್ಷೇತ್ರದಲ್ಲಿ ಬದಲಾವಣೆ ತರಲು ‘ಖೇಲೋ ಇಂಡಿಯಾ’ ಮಿಷನ್ ಅನ್ನು ಪ್ರಾರಂಭಿಸುವುದಾಗಿ ಹಣಕಾಸು ಸಚಿವರು ಘೋಷಿಸಿದ್ದಾರೆ.
Feb 01, 2026, 12:12 ; ಲೋಥಾಲ್, ಹಸ್ತಿನಾಪುರ ಸೇರಿದಂತೆ 15 ಪುರಾತತ್ವ ಸ್ಥಳಗಳ ಅಭಿವೃದ್ಧಿಗೆ ಪ್ರಸ್ತಾಪ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Feb 01, 2026, 12:10 ;ವಿದೇಶ ಯಾತ್ರೆ ಕೈಗೊಳ್ಳುವವರಿಗಾಗಿ ಈವರೆಗೂ ಇದ್ದ ಟಿಡಿಎಸ್ ಮೊತ್ತ ಶೇ 2ಕ್ಕೆ ಇಳಿಕೆ. ಅನಿವಾಸಿ ಭಾರತೀಯರ ಆಸ್ತಿ ಮಾರಾಟದ ಮೇಲಿನ ಟಿಡಿಎಸ್ ಕಡಿತ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Feb 01, 2026, 12:08 ; ವೈದ್ಯಕೀಯ ಪ್ರವಾಸೋದ್ಯಮಕ್ಕಾಗಿ ಐದು ಕೇಂದ್ರ ಸ್ಥಾಪನೆಗಾಗಿ ರಾಜ್ಯಗಳಿಗೆ ನೆರವು: ನಿರ್ಮಲಾ ಸೀತಾರಾಮನ್
Feb 01, 2026, 12:07 ; ವಿದೇಶಗಳಲ್ಲಿ ಆಸ್ತಿ ಘೋಷಣೆಗೆ 6 ತಿಂಗಳ ಅವಕಾಶ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Feb 01, 2026, 12:05 ; ಹೊಸ ತೆರಿಗೆ ಪದ್ಧತಿ 2026ರ ಏಪ್ರಿಲ್‌ನಿಂದ ಜಾರಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Feb 01, 2026, 12:03 ; ಮೋಟಾರ್ ಆಕ್ಸಿಡೆಂಟ್ ಕ್ಷೇಮುಗಳಿಗೆ ತೆರಿಗೆ ಇಲ್ಲ
Feb 01, 2026, 12:01 ; ಹೊಸ ಆದಾಯ ತೆರಿಗೆ 2025ರ ಜುಲೈನಲ್ಲಿ ಮಂಡನೆ, ಸರಳೀಕೃತ ಆದಾಯ ತೆರಿಗೆ ಅಧಿಸೂಚನೆ ಶೀಘ್ರದಲ್ಲಿ ಪ್ರಕಟ: ನಿರ್ಮಲಾ ಸೀತಾರಾಮನ್
Feb 01, 2026, 12:00 : ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ ₹1.43 ಲಕ್ಷ ಕೋಟಿ: ಸಚಿವೆ ನಿರ್ಮಲಾ ಸೀತಾರಾಮನ್
Feb 01, 2026, 11:59 : 2027ರ ಆರ್ಥಿಕ ಸಾಲಿನಲ್ಲಿ ಎಂಎಸ್‌ಎಂಇಗಳ ಉತ್ತೇಜನಕ್ಕಾಗಿ ಸ್ವಾವಲಂಬಿ ಭಾರತ ನಿಧಿ ಅಡಿಯಲ್ಲಿ ₹4000 ಕೋಟಿ: ನಿರ್ಮಲಾ ಸೀತಾರಾಮನ್
Feb 01, 2026, 11:59 : ಈಶಾನ್ಯ ಭಾರತ- ಬುದ್ಧ ಸರ್ಕೀಟ್, ಅರುಣಾಚಲ, ಸಿಕ್ಕಿಂ, ಮೀಜೋರಾಂ, ತ್ರಿಪುರ, ಅಸ್ಸಾಂನಲ್ಲಿ
Feb 01, 2026, 11:58 : ಪೂರ್ವೋದಯ ಪೂರ್ವ ಕರಾವಳಿಯಲ್ಲಿ ಕೈಗಾರಿಕಾ ಕಾರಿಡಾರ್: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Feb 01, 2026, 11:58 : ಮಾನಸಿಕ ಆರೋಗ್ಯಕ್ಕೆ ನಿಮ್ಹಾನ್ಸ್-2 ರಾಂಚಿಯಲ್ಲಿ ಸ್ಥಾಪನೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Feb 01, 2026, 11:57 : ದಿವ್ಯಾಂಜನ್ ಯೋಜನೆ ಮೂಲಕ ಕೃತಕ ಕಾಲು ತಯಾರಿಕಾ ಘಟಕಗಳಿಗೆ ತಂತ್ರಜ್ಞಾನ ನೆರವು ಮೂಲಕ ಅವುಗಳನ್ನು ಮೇಲ್ದರ್ಜೆಗೆ ಏರಿಸುವ ಯೋಜನೆ
Feb 01, 2026, 11:56 : ‘ಬ್ಯಾಂಕಿಂಗ್ ಫಾರ್ ವಿಕಸಿತ ಭಾರತ’ಕ್ಕಾಗಿ ಹೈ-ಲೆವೆಲ್ ಸಮಿತಿ ರಚನೆ. ಅಭಿವೃದ್ಧಿ ಸಂಪರ್ಕಕ್ಕಾಗಿ ನಗರಗಳ ಮಧ್ಯೆ 7 ಹೈ ಸ್ಪೀಡ್ ಕಾರಿಡಾರ್
Feb 01, 2026, 11:55 : ಮಾನಸಿಕ ಆರೋಗ್ಯಕ್ಕೆ ನಿಮ್ಹಾನ್ಸ್-2 ರಾಂಚಿಯಲ್ಲಿ ಸ್ಥಾಪನೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Feb 01, 2026, 11:54 : ದಿವ್ಯಾಂಜನ್ ಯೋಜನೆ ಮೂಲಕ ಕೃತಕ ಕಾಲು ತಯಾರಿಕಾ ಘಟಕಗಳಿಗೆ ತಂತ್ರಜ್ಞಾನ ನೆರವು ಮೂಲಕ ಅವುಗಳನ್ನು ಮೇಲ್ದರ್ಜೆಗೆ ಏರಿಸಲು ಯೋಜನೆ
Feb 01, 2026, 11:53 : ಮಹಿಳೆಯರಿಗೆ ಲಕ್‌ಪತಿ ದೀದಿ ಯೋಜನೆಗೆ ಇನ್ನಷ್ಟು ಉತ್ತೇಜನ: ನಿರ್ಮಲಾ ಸೀತಾರಾಮನ್
Feb 01, 2026, 11:52 : 25 ಕೋಟಿ ಜನ ಬಡತನದಿಂದ ಮುಕ್ತ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Feb 01, 2026, 11:51 : ಭಾರತ್ ವಿಸ್ತಾ ಬಹುಭಾಷಾ ಎಐ ಟೂಲ್ ಮೂಲಕ ಕೃಷಿ ಹಾಗೂ ಇನ್ನಿತರ ಕ್ಷೇತ್ರಗಳಿಗೆ ನೆರವು
Feb 01, 2026, 11:51 : 2030ರ ಹೊತ್ತಿಗೆ ಜಾಗತಿಕ ಉತ್ಪನ್ನಗಳಲ್ಲಿ ಭಾರತದ ಗೇರು ಮತ್ತು ಕೋಕೊ
Feb 01, 2026, 11:50 : ಕೃಷಿ: ಕರಾವಳಿಯಲ್ಲಿ ತೆಂಗು, ಗಂಧ, ಗೇರು ಬೆಳೆ ಉತ್ತೇಜನ: ನಿರ್ಮಲಾ ಸೀತಾರಾಮನ್
Feb 01, 2026, 11:49 : ಉದ್ಯೋಗ ಹೆಚ್ಚಿಸಲು ಪಶುಸಂಗೋಪನಾ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Feb 01, 2026, 11:48 : ಹತ್ತಿ ಮತ್ತು ಕೈಮಗ್ಗಕ್ಕೆ ಉತ್ತೇಜನ ನೀಡಲು ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಉಪಕ್ರಮ: ನಿರ್ಮಲಾ ಸೀತಾರಾಮನ್
Feb 01, 2026, 11:47 : ದೇಶದಲ್ಲಿ ಹೊಸ ಕ್ರೀಡಾ ಸಂಕೀರ್ಣಗಳ ನಿರ್ಮಾಣ ಘೋಷಣೆ: ನಿರ್ಮಲಾ ಸೀತಾರಾಮನ್
Feb 01, 2026, 11:46 : ದೇಶದ 5 ನಗರಗಳಲ್ಲಿ ವಿಶ್ವವಿದ್ಯಾಲಯ ಟೌನ್‌ಶಿಪ್ ನಿರ್ಮಾಣ
Feb 01, 2026, 11:45 : ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕಚೇರಿ
Feb 01, 2026, 11:44 : 2026-27ನೇ ಸಾಲಿನಲ್ಲಿ ಬಂಡವಾಳ ವೆಚ್ಚಕ್ಕೆ ₹ 12.12 ಕೋಟಿ ಖರ್ಚು ಮಾಡಲು ಉದ್ದೇಶಿಸಲಾಗಿದೆ.
Feb 01, 2026, 11:43 : ವಿಶ್ವದರ್ಜೆಯ ಟ್ರೆಕಿಂಗ್: ಕರ್ನಾಟಕದ ಕರಾವಳಿಯಲ್ಲಿ ಟ್ರೆಕಿಂಗ್ ಮಾರ್ಗ ಅಭಿವೃದ್ಧಿ ಯೋಜನೆ
Feb 01, 2026, 11:42 : 20 ಸಾವಿರ ಪ್ರವಾಸಿ ತಾಣಗಳಲ್ಲಿ ಮಾಹಿತಿ ನೀಡಲು 10 ಸಾವಿರ ಗೈಡ್‌ಗಳಿಗೆ ತರಬೇತಿ
Feb 01, 2026, 11:40 : ಪೂರ್ವ ಭಾರತಕ್ಕೆ ವಿನ್ಯಾಸ ಶಿಕ್ಷಣ ಕ್ಷೇತ್ರ- ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಘೋಷಣೆ
Feb 01, 2026, 11:39 : ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Feb 01, 2026, 11:38 : ಇಂಧನ ಹಣಕಾಸು ನಿಗಮ (PFC) ಹಾಗೂ ಗ್ರಾಮೀಣ ವಿದ್ಯುತೀಕರಣ ನಿಗಮ (REC) ಪುನರ್‌ರಚನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.
Feb 01, 2026, 11:36 : ರೇಷ್ಮೆ, ಸೆಣಬು ಮತ್ತು ಉಣ್ಣೆಗಾಗಿ ರಾಷ್ಟ್ರೀಯ ನಾರು ಯೋಜನೆಯನ್ನು ಹಣಕಾಸು ಸಚಿವೆ ಘೋಷಿಸಿದರು.
Feb 01, 2026, 11:35 : ಒಡಿಶಾ, ಕೇರಳ ಮತ್ತು ಛತ್ತೀಸ್‌ಗಢದಲ್ಲಿ ಗಣಿಗಾರಿಕೆ ಕಾರಿಡಾರ್‌ಗಳನ್ನು ನಿರ್ಮಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದಾರೆ.
Feb 01, 2026, 11:33 : ದೇಶದಲ್ಲಿ 22 ಹೊಸ ಜಲಮಾರ್ಗಗಳನ್ನು ನಿರ್ಮಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
Feb 01, 2026, 11:31 ; ದೇಶದಲ್ಲಿ ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳು ಅಗ್ಗವಾಗಲಿವೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
Feb 01, 2026, 11:30 ; ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿದರು
Feb 01, 2026, 11:29 ; ಬೆಂಗಳೂರು ಸೇರಿ ಏಳು ಹೈ ಸ್ಪೀಡ್ ರೈಲು ಯೋಜನೆ ಘೋಷಣೆ ಮುಂಬೈ-ಪುಣೆ, ಪುಣೆ-ಹೈದರಾಬಾದ್, ಹೈದರಾಬಾದ್-ಚೆನ್ನೈ, ಬೆಂಗಳೂರು-ಚೆನ್ನೈ, ದೆಹಲಿ-ವಾರಣಾಸಿ, ವಾರಣಾಸಿ-ಸಿಲಿಗುರಿ. ಈ ಯೋಜನೆ ಮೂಲಕ ಪ್ರಯಾಣ ಸಮಯ ಕಡಿಮೆ ಮಾಡುವ ಯೋಜನೆ.
Feb 01, 2026, 11:28 ; ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಅಪರೂಪದ ಭೂಮಿಯ ಖನಿಜಗಳ ಕಾರಿಡಾರ್‌ಗಳನ್ನು ನಿರ್ಮಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು.
Feb 01, 2026, 11:27; ಅಭಿವೃದ್ಧಿಯ ಹಾದಿಯಲ್ಲಿ MSMEಗಳು ನಿರ್ಣಾಯಕ ಪಾಲುದಾರರು. ಅವರ ಬೆಳವಣಿಗೆಯನ್ನು ಸಾಧಿಸಲು ಬಯಸುತ್ತೇವೆ. ಉದ್ಯಮಿಗಳಿಗೆ ಪ್ರಯೋಜನವಾಗುವಂತೆ ನಾವು ಈ ಉದ್ದೇಶಕ್ಕಾಗಿ ₹10,000 ಕೋಟಿಗಳನ್ನು ನೀಡುತ್ತಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Feb 01, 2026, 11:25; ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಉಪಕ್ರಮವನ್ನು ಪ್ರಸ್ತಾಪಿಸುತ್ತಿದ್ದಾರೆ. ಇದು ನೇಕಾರರು ಮತ್ತು ಗುಡಿ ಕೈಗಾರಿಕೆಗಳಿಗೆ ಪ್ರಯೋಜನ ನೀಡುತ್ತದೆ. ಬಡ ಗ್ರಾಮೀಣ ಯುವಕರಿಗೆ ಪ್ರಯೋಜನವಾಗುತ್ತದೆ. ಭಾರತವು ಕ್ರೀಡೆಗೆ ಸಂಬಂಧಿಸಿದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
Feb 01, 2026, 11:24; ಭಾರತವನ್ನು ಜಾಗತಿಕ ಬಯೋ-ಫಾರ್ಮಾ ಉತ್ಪಾದನಾ ಕೇಂದ್ರವಾಗಿ ಮಾರ್ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ ₹10 ಸಾವಿರ ಕೋಟಿ ಬಯೋ ಫಾರ್ಮಾ ಶಕ್ತಿ ಅನ್ನು ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿದ್ದಾರೆ.
Feb 01, 2026, 11:21; ಭಾರತವನ್ನು ಸೆಮಿಕಂಡಕ್ಟರ್ ಹಬ್ ಮಾಡಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಸೆಮಿಕಂಡಕ್ಟರ್ ಅಭಿವೃದ್ಧಿಗೆ 40,000 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ.
Feb 01, 2026, 11:18; ಸುಸ್ಥಿರ ಬೆಳವಣಿಗೆ ಜೊತೆಗೆ ಜನರ ಆಕಾಂಕ್ಷೆಗಳನ್ನು ಈಡೇರಿಸುವುದು ನಮ್ಮ ಧೈಯವಾಗಿದೆ ಎಂದು ಲೋಕಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
Feb 01, 2026, 11:16; 12 ವರ್ಷಗಳ ಅಧಿಕಾರದಿಂದ ದೇಶದ ಆರ್ಥಿಕತೆ ಸ್ಥಿರತೆ ಕಂಡಿದ್ದು, ಹಣಕಾಸಿನ ಶಿಸ್ತು ಹಾಗೂ ನಿರಂತರ ಪ್ರಗತಿ ಸಾಧಿಸಿದೆ. ಅನಿಶ್ಚಿತತೆಗಳ ನಡುವೆಯೂ ಪ್ರಗತಿ ಸಾಧಿಸಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
Feb 01, 2026, 11:12: ದೇಶದ ಪ್ರತಿಯೊಬ್ಬ ನಾಗರಿಕರು, ರೈತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಯುವಜನರಿಗೆ ವೃದ್ಧಿಯನ್ನು ಖಾತ್ರಿಪಡಿಸಲಿದ್ದೇವೆ ಎಂದು ಬಜೆಟ್ ಭಾಷಣದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
Feb 01, 2026, 11:11: ವಿಕಸಿತ ಭಾರತದತ್ತ ಹೆಜ್ಜೆ ಇಡುವುದು ಮುಂದುವರಿಯಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದರು.
Feb 01, 2026, 11:07 ; ಕೇಂದ್ರ ಬಜೆಟ್‌ನಲ್ಲಿ ಮೂರು ಕರ್ತವ್ಯಗಳ ಬಗ್ಗೆ ನಿರ್ಮಲಾ ಸೀತಾರಾಮನ್ ಅವರು ಉಲ್ಲೇಖಿಸಿದರು. ಮೊದಲನೇಯದು ಆರ್ಥಿಕ ಪ್ರಗತಿ, ಎರಡನೇಯದು ಜನರ ನಿರೀಕ್ಷೆ ಈಡೇರಿಸುವುದು, ಮೂನೇಯದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳಿದರು.
Feb 01, 2026, 11:06 ; ಲೋಕಸಭೆಯಲ್ಲಿ ಸತತ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Feb 01, 2026, 11:02 ; ಲೋಕಸಭೆಯಲ್ಲಿ ಬಜೆಟ್ ಭಾಷಣ ಆರಂಭಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ
Feb 01, 2026, 11:01 ; ಸಂಸತ್ತಿನಲ್ಲಿ ಬಜೆಟ್ ಕಲಾಪ ಆರಂಭ
Feb 01, 2026, 10: 40; ಕೇಂದ್ರ ಸಚಿವ ಸಂಪುಟ ಬಜೆಟ್‌ಗೆ ಅನುಮೋದನೆ ನೀಡಿದೆ. ಕೇಂದ್ರ ಬಜೆಟ್ ಮಂಡನೆಗೂ ಮುನ್ನ ನಡೆದ ಸಚಿವ ಸಂಪುಟ ಸಭೆಯು ಬಜೆಟ್‌ಗೆ ಅನುಮೋದನೆ ಸಿಕ್ಕಿದೆ. ಈಗ, ಹಣಕಾಸು ಸಚಿವರು ಲೋಕಸಭೆಯಲ್ಲಿ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ.
Feb 01, 2026, 10:22 : ಬಜೆಟ್ ಮಂಡನೆ ಹಿನ್ನೆಲೆ ಸಂಸತ್ತಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ
Feb 01, 2026, 10:17 : ಸಾಂಪ್ರದಾಯದಂತೆ ಕೇಂದ್ರ ಬಜೆಟ್‌ಗೂ ಮುನ್ನ ನಿರ್ಮಲಾ ಸೀತಾರಾಮನ್ ಅವರಿಗೆ ಸಿಹಿ ತಿನಿಸಿದ ರಾಷ್ಟ್ರಪತಿ ದೌಪತಿ ಮುರ್ಮು
Feb 01, 2026, 10:14: ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಸಚಿವ ಸಂಪುಟದಲ್ಲಿ ಭಾಗವಹಿಸಲು ಸಂಸತ್ ಭವನಕ್ಕೆ ಆಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Feb 01, 2026, 09:34 : ರಾಷ್ಟ್ರಪತಿ ದೌಪದಿ ಮುರ್ಮು ಅವರನ್ನು ಭೇಟಿಯಾದ ನಿರ್ಮಲಾ ಸೀತಾರಾಮನ್
Feb 01, 2026, 09:27 : ಬಜೆಟ್ ದಾಖಲೆಗಳನ್ನು ಹೊಂದಿದ ಟ್ಯಾಬ್ಲೆಟ್ ಪ್ರದರ್ಶಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಬಜೆಟ್ ತಂಡದ ಸದಸ್ಯರು.
Feb 01, 2026, 8: 46: ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೆಹಲಿಯ ಸಂಸತ್ ಭವನದ ಆವರಣದಲ್ಲಿರುವ ಕರ್ತವ್ಯ ಭವನಕ್ಕೆ ಆಗಮಿಸಿದರು.
ಸಂಪ್ರದಾಯದಂತೆ, ಬಜೆಟ್ ಮಂಡನೆಗೂ ಮೊದಲು ಕ್ಯಾಬಿನೆಟ್ ಸಭೆ ನಡೆಯಲಿದ್ದು, ಸಚಿವ ಸಂಪುಟದಿಂದ ಅನುಮೋದನೆ ಪಡೆದ ಬಳಿಕ ಬಜೆಟ್ ದಾಖಲೆಗಳನ್ನು ಸಂಸತ್‌ಗೆ ಸಲ್ಲಿಸಲಾಗುತ್ತದೆ.
ಈ ಬಜೆಟ್‌ನಿಂದ ಮಧ್ಯಮ ವರ್ಗ, ರೈತರು, ಮಹಿಳೆಯರು, ಯುವಕರು ಹಾಗೂ ಸಣ್ಣ-ಮಧ್ಯಮ ಉದ್ಯಮಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದಾಯ ತೆರಿಗೆ ವಿನಾಯಿತಿ ಮಿತಿಯಲ್ಲಿ ಬದಲಾವಣೆ, ತೆರಿಗೆ ದರಗಳ ಸರಳೀಕರಣ, ಗೃಹ ಸಾಲ ಬಡ್ಡಿ ವಿನಾಯಿತಿಯಲ್ಲಿ ಹೆಚ್ಚಳದ ನಿರೀಕ್ಷೆ ಇದೆ. ಜೊತೆಗೆ ಬೆಲೆ ಏರಿಕೆ, ಉದ್ಯೋಗ ಸೃಷ್ಟಿ ಹಾಗೂ ಜೀವನ ವೆಚ್ಚದ ಒತ್ತಡ ಕಡಿಮೆ ಮಾಡುವ ಕ್ರಮಗಳ ಬಗ್ಗೆ ಜನತೆ ಕಾದು ನೋಡುತ್ತಿದೆ.
