ತಮಿಳುನಾಡಿನಲ್ಲಿ 75 ಕ್ಷೇತ್ರಗಳಲ್ಲಿ ಟಿವಿಕೆ ಮುನ್ನಡೆ

ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು (ಮೇ 4) ಅತ್ಯಂತ ರೋಚಕ ತಿರುವು ಪಡೆದುಕೊಂಡಿದೆ. ರಾಜ್ಯದ ಸಾಂಪ್ರದಾಯಿಕ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯನ್ನು ಬೆಚ್ಚಿಬೀಳಿಸುವಂತೆ ನಟ ವಿಜಯ್ ಅವರ ‘ತಮಿಳಗ ವೆಟ್ಟ್ರಿ ಕಳಗಂ’ (TVK) ಭರ್ಜರಿ ಎಂಟ್ರಿ ನೀಡಿದೆ. ಆರಂಭಿಕ ಟ್ರೆಂಡ್‌ಗಳಲ್ಲಿ ವಿಜಯ್ ಪಡೆ ಬರೋಬ್ಬರಿ 75 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಹೊಸ ರಾಜಕೀಯ ಕ್ರಾಂತಿಯ ಮುನ್ಸೂಚನೆ ನೀಡಿದೆ.

ದ್ರಾವಿಡ ಕೋಟೆಯಲ್ಲಿ ವಿಜಯ್ ಅಬ್ಬರ:

ದಶಕಗಳಿಂದ ತಮಿಳುನಾಡನ್ನು ಆಳುತ್ತಿರುವ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿಕೂಟಗಳಿಗೆ ಟಿವಿಕೆ ಪಕ್ಷವು ಪ್ರಬಲ ಪೈಪೋಟಿ ನೀಡುತ್ತಿದೆ. ಅಂಚೆ ಮತಗಳ ಎಣಿಕೆ ಮುಗಿಯುತ್ತಿದ್ದಂತೆ ಲಭ್ಯವಾದ ಮಾಹಿತಿಯಂತೆ, ವಿಜಯ್ ಅವರ ಪಕ್ಷವು 75 ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಯುವ ಮತದಾರರು ಮತ್ತು ಮಹಿಳಾ ಮತದಾರರ ಬೆಂಬಲವು ವಿಜಯ್ ಪರವಾಗಿ ಸುನಾಮಿಯಂತೆ ಅಪ್ಪಳಿಸುತ್ತಿದೆ.

ಮುಖ್ಯಾಂಶಗಳು:

ಆತಂಕದಲ್ಲಿ ಪ್ರಮುಖ ಪಕ್ಷಗಳು :

ಸ್ಟಾಲಿನ್ ನೇತೃತ್ವದ ಡಿಎಂಕೆ ಸದ್ಯಕ್ಕೆ ಎರಡನೇ ಸ್ಥಾನಕ್ಕೆ ಕುಸಿಯುವ ಭೀತಿಯಲ್ಲಿದ್ದರೆ, ಎಐಎಡಿಎಂಕೆ ಕೂಡ ಹಲವು ಭದ್ರಕೋಟೆಗಳನ್ನು ಕಳೆದುಕೊಳ್ಳುತ್ತಿದೆ. ಮಧ್ಯಾಹ್ನದ ಹೊತ್ತಿಗೆ ಮತ ಎಣಿಕೆಯ ಪೂರ್ಣ ಚಿತ್ರಣ ಸಿಗಲಿದ್ದು, ತಮಿಳುನಾಡಿನ ಗದ್ದುಗೆ ‘ದಳಪತಿ’ ಪಾಲಾಗುತ್ತಾ ಎನ್ನುವುದೇ ಸದ್ಯದ ದೊಡ್ಡ ಕುತೂಹಲ.

Exit mobile version