ಇಡೀ ಭೂಮಿಗೇ ಕಂಟಕವಾಗುತ್ತಾ ಸೂಪರ್ ಎಲ್ ನಿನೋ..?

Untitled design 2026 05 18T130108.060

2026ರ ಆರ್ಥಿಕ ವರ್ಷವು ಇಡೀ ವಿಶ್ವದ ಹವಾಮಾನ, ಕೃಷಿ ಮತ್ತು ಆರ್ಥಿಕತೆಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಸೂಪರ್ ಎಲ್ ನಿನೋ ಎಂಬ ಹವಾಮಾನ ವೈಪರೀತ್ಯವು ಭೂಮಿಯನ್ನೇ ಅಸ್ತವ್ಯಸ್ತಗೊಳಿಸುವಷ್ಟು ಶಕ್ತಿಶಾಲಿಯಾಗಿದೆ. ವಿಶ್ವದ ವಿವಿಧ ಭಾಗಗಳಲ್ಲಿ ತೀವ್ರ ಬಿಸಿಲು, ಅತಿವೃಷ್ಟಿ, ಅನಾವೃಷ್ಟಿ ಮತ್ತು ಆರ್ಥಿಕ ನಷ್ಟವನ್ನು ಇದು ಎಬ್ಬಿಸಬಹುದು ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ಭಾರತಕ್ಕೂ ಈ ಸೂಪರ್ ಎಲ್ ನಿನೋ ಇನ್ನಿಲ್ಲದಂತಹ ಭೀತಿ ತಂದೊಡ್ಡುವ ಸಾಧ್ಯತೆಯಿದೆ. ವಿಶೇಷವಾಗಿ ಮುಂಗಾರು ಮಳೆಯನ್ನೇ ದುರ್ಬಲಗೊಳಿಸುವ ಸಂಭವವಿದೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ಈ ವರ್ಷ ಭಾರತದಲ್ಲಿ ಮುಂಗಾರು ಮಳೆ ಪ್ರಮಾಣ ಸರಾಸರಿ ಶೇ. 92ಕ್ಕೆ ಕುಸಿತ ಕಾಣಬಹುದು. ಅಂದರೆ ಸಾಮಾನ್ಯಕ್ಕಿಂತ ಶೇ. 8ರಷ್ಟು ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಆದರೆ ಇನ್ನೂ ಕೆಲವು ಅಂದಾಜುಗಳ ಪ್ರಕಾರ ದೇಶದಲ್ಲಿ ಶೇ. 35ರಷ್ಟು ಮಳೆ ಕೊರತೆ ಉಂಟಾಗಬಹುದು.

ಮಳೆ ಕೊರತೆಯ ಅಂಕಿ-ಅಂಶಗಳು

ದೇಶಾದ್ಯಂತ ಸರಾಸರಿ 800 ಮಿ. ಮೀ. ಮಳೆ ಕೊರತೆ ಎದುರಾಗುವ ಅಂದಾಜು ವ್ಯಕ್ತವಾಗಿದೆ. ಐತಿಹಾಸಿಕವಾಗಿ ಎಲ್ ನಿನೋ ಪರಿಣಾಮದಿಂದ ಸರಾಸರಿ ಶೇ. 16ರಷ್ಟು ಮಳೆ ಕೊರತೆ ಎದುರಾಗುತ್ತಿತ್ತು. ಆದರೆ 2026ರ ಸೂಪರ್ ಎಲ್ ನಿನೋ ಆ ಮಾನದಂಡವನ್ನೇ ಮೀರುವ ಭೀಕರತೆಯನ್ನು ಹೊಂದಿದೆ. ಇದರಿಂದಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಒಣ ಹವೆ ಏರ್ಪಡುವ ಸಾಧ್ಯತೆ ಹೆಚ್ಚಿದೆ.

ಸೂಪರ್ ಎಲ್ ನಿನೋದ ಪ್ರಭಾವದಿಂದ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಬಿಸಿ ಗಾಳಿ ದಾಳಿ ನಡೆಸುವ ಸಾಧ್ಯತೆಯಿದೆ. ತಾಪಮಾನವು ಸಾಮಾನ್ಯಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್ ಏರಬಹುದು ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಎದುರಾಗುವ ಭೀತಿ ಇದೆ.

ಮಳೆ ಕೊರತೆಯು ನೇರವಾಗಿ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ. ಭತ್ತ, ಮೆಕ್ಕೆಜೋಳ, ಕಬ್ಬು, ಹತ್ತಿ, ಸೋಯಾಬೀನ್ ಮುಂತಾದ ಬೆಳೆಗಳ ಇಳುವರಿ ಕುಸಿಯುವ ಸಾಧ್ಯತೆಯಿದೆ. 

Exit mobile version