ಬಾಹ್ಯಾಕಾಶಯಾನ ಮುಗಿಸಿ ಬಂದ ಶುಭಾಂಶು ಶುಕ್ಲಾ ಆರೋಗ್ಯ ಈಗ ಹೇಗಿದೆ?: ಇಲ್ಲಿದೆ ಅಪ್ಡೇಟ್

111222 (7)

ವಾಷಿಂಗ್ಟನ್: ಭಾರತದ ಪ್ರಥಮ ಗಗನಯಾತ್ರಿಯಾಗಿ ಇತಿಹಾಸ ಸೃಷ್ಟಿಸಿದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ತೆರಳಿ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಆಕ್ಸಿಯಮ್-4 (Axiom Mission 4) ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯಲ್ಲಿ ಡ್ರಾಗನ್ ಕ್ಯಾಪ್ಸುಲ್ ಯಶಸ್ವಿಯಾಗಿ ಸ್ಪಾಶ್‌ಡೌನ್ ಆಗಿದೆ.

ಭಾರತೀಯ ವಾಯುಪಡೆಯ (IAF) ವೈದ್ಯರ ಪ್ರಕಾರ, “ಶುಭಾಂಶು ಶುಕ್ಲಾ ಸದ್ಯ ಆರೋಗ್ಯವಾಗಿದ್ದಾರೆ ಮತ್ತು ಭೂಮಿಯ ಗುರುತ್ವಾಕರ್ಷಣೆಗೆ ತ್ವರಿತವಾಗಿ ಹೊಂದಿಕೊಳ್ಳಲು ಶುಕ್ಲಾ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸಿದರೂ ಉತ್ತಮ ಆರೋಗ್ಯವನ್ನು ಕಾಯ್ದುಕೊಂಡಿದ್ದಾರೆ.” ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರಕಾರ, “ಬಾಹ್ಯಾಕಾಶದ ಸೂಕ್ಷ್ಮ ಗುರುತ್ವಾಕರ್ಷಣೆಗೆ ಹೊಂದಿಕೊಂಡಿದ್ದ ಶುಕ್ಲಾ, ಭೂಮಿಗೆ ಮರಳಿದ ನಂತರ ಚೇತರಿಕೆಯ ಹಾದಿಯಲ್ಲಿದ್ದಾರೆ.”

ಬಾಹ್ಯಾಕಾಶದಲ್ಲಿ 18 ದಿನಗಳ ಕಾಲ ಕಳೆದ ಶುಕ್ಲಾ, 60ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ್ದಾರೆ. ಇವರ ತಂಡದಲ್ಲಿ ಅಮೆರಿಕದ ಪೆಗ್ಗಿ ವಿಟ್ಸನ್, ಹಂಗೇರಿಯ ಟಿಬೋರ್ ಕಾಪು, ಮತ್ತು ಪೋಲೆಂಡ್‌ನ ಸ್ಲಾವೋಸ್ಟ್ ಉಜ್ಞಾನ್ ಇದ್ದರು. ಶುಕ್ಲಾ ಏಳು ಸಂಶೋಧನೆಗಳನ್ನು ನಡೆಸಿದ್ದು, ಸ್ಟೆಮ್ ಸೆಲ್, ಮೂಳೆ ಸವೆತ, ಸಸ್ಯ ಬೆಳವಣಿಗೆ, ಮತ್ತು ಪಾಚಿಗಳ ಅಧ್ಯಯನ ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಂಡಿವೆ.

ಶುಕ್ಲಾ ಅವರು ISSನಲ್ಲಿ ಹೆಸರುಕಾಳು ಮತ್ತು ಮೆಂತ್ಯೆ ಬೀಜಗಳನ್ನು ಮೊಳಕೆಯೊಡೆದಿದ್ದು, ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಣಾಮವನ್ನು ಅಧ್ಯಯನ ಮಾಡಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಐಐಟಿ ವಿಜ್ಞಾನಿಗಳ ಸಹಯೋಗದೊಂದಿಗೆ ಈ ಪ್ರಯೋಗ ನಡೆದಿದೆ.

ಶುಕ್ಲಾ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, “ಮೊದಲ ಎರಡು ದಿನಗಳು ಸವಾಲಿನದಾಗಿದ್ದವು. ಆದರೆ ನಾನು ತ್ವರಿತವಾಗಿ ಹೊಂದಿಕೊಂಡೆ. ಎಲ್ಲವೂ ಸಾಮಾನ್ಯವಾಯಿತು,” ಎಂದು ಹೇಳಿದ್ದಾರೆ. ಭೂಮಿಗೆ ಮರಳಿದಾಗ ಲಕ್ಕೋ ನಗರದ ಜನರು ಭಾರತದ ಬಾವುಟವನ್ನೇರಿಸಿ, ಚಪ್ಪಾಳೆ ತಟ್ಟಿ, ಸಿಹಿಹಂಚಿ ಸಂಭ್ರಮಿಸಿದರು. ಶುಕ್ಲಾ ಅವರ ತಾಯಿ ತಮ್ಮ ಮಗನ ಮರಳುವಿಕೆಯನ್ನು ಕಂಡು ಭಾವುಕರಾದರು.

ಈ ಯಶಸ್ವಿ ಕಾರ್ಯಾಚರಣೆ ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

Exit mobile version