ಪಿಯುಸಿ ಹುಡುಗನೊಂದಿಗೆ ಮೂರು ಮಕ್ಕಳ ತಾಯಿಯ ಮದುವೆ

Untitled design 2025 04 09t224113.349

ಉತ್ತರ ಪ್ರದೇಶದ ಅಘೋಹಾ ಜಿಲ್ಲೆಯಲ್ಲಿ ಅಪರೂಪದ ಘಟನೆ ಎಲ್ಲರ ಗಮನ ಸೆಳೆದಿದೆ. 30 ವರ್ಷದ ಮಹಿಳೆ ಹಿಂದೂ ಧರ್ಮಕ್ಕೆ ಮತಾಂತರಗೊಂಡು, 12ನೇ ತರಗತಿಯ ವಿದ್ಯಾರ್ಥಿಯನ್ನು (ಸುಮಾರು 18 ವರ್ಷ) ವಿವಾಹವಾಗಿದ್ದಾರೆ. 

30 ವರ್ಷದ ಶಿವಾನಿ (ಹಿಂದಿನ ಹೆಸರು ಶಬ್ದಮ್) ಎಂಬ ಮಹಿಳೆಗೆ ಪೋಷಕರು ಇಲ್ಲವೆಂದು ತಿಳಿದುಬಂದಿದೆ. ಹಸನ್‌ಪುರ ವೃತ್ತದ ಪೊಲೀಸ್ ಅಧಿಕಾರಿ ದೀಪ್ ಕುಮಾರ್ ಪಂತ್ ಅವರ ಪ್ರಕಾರ, ಶಿವಾನಿ ಇದಕ್ಕೂ ಮುನ್ನ ಎರಡು ವಿವಾಹವಾಗಿದ್ದಾರೆ ಎನ್ನಲಾಗಿದೆ. ಈ ಮಹಿಳೆ ಮೊದಲು ಮೀರತ್‌ನ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದು, ಆ ಮದುವೆ ವಿಚ್ಛೇದನದಲ್ಲಿ ಅಂತ್ಯವಾಗುತ್ತದೆ. ಬಳಿಕ, 2011ರಲ್ಲಿ ರಸ್ತೆ ಅಪಘಾತದ ಪರಿಣಾಮ ಅಂಗವಿಕಲರಾಗಿದ್ದ ತೌಫಿಕ್ ಎಂಬುವರನ್ನು ಮದುವೆಯಾಗುತ್ತಾರೆ. ಈ ಮದುವೆಯಿಂದ ಅವರಿಗೆ ಮೂರು ಮಕ್ಕಳು ಇದ್ದಾರೆ.

ಅದೇ ವೇಳೆ, ಇತ್ತೀಚೆಗಷ್ಟೆ ಅವರು ತಮ್ಮ ಪತಿ ತೌಫಿಕ್‌ನಿಂದ ದೂರವಾಗಿ, 12ನೇ ತರಗತಿ ಓದುತ್ತಿರುವ ಸುಮಾರು 18 ವರ್ಷ ವಯಸ್ಸಿನ ಹುಡುಗನೊಂದಿಗೆ ಸಂಬಂಧ ಬೆಳೆಸಿದ್ದಾರೆ. ನಂತರ, ಶುಕ್ರವಾರದಂದು ತಮ್ಮ ಎರಡನೇ ಪತಿ ತೌಫಿಕ್‌ನಿಂದ ವಿಚ್ಛೇದನ ಪಡೆದ್ದಾಳೆ. ವಿಚ್ಛೇದನದ ನಂತರ ಹಿಂದೂ ಧರ್ಮಕ್ಕೆ ಮತಾಂತರಗೊಂಡು ‘ಶಿವಾನಿ’ ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡು ಯುವಕನನ್ನು ವಿವಾಹವಾಗಿದ್ದಾಳೆ.

ಉತ್ತರ ಪ್ರದೇಶದಲ್ಲಿ ‘ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ, 2021’ ಜಾರಿಗೆ ಬಂದಿದೆ. ಈ ಕಾಯ್ದೆಯು ಬಲವಂತ, ಮೋಸ ಅಥವಾ ಮಾಯಾಜಾಲದ ಮೂಲಕ ಧರ್ಮಾಂತರಗೊಳ್ಳುವುದನ್ನು ಅಥವಾ ಇತರರನ್ನು ಧರ್ಮಾಂತರಗೊಳಿಸುವುದನ್ನು ನಿಷೇಧಿಸುತ್ತದೆ. ಈ ಹಿನ್ನೆಲೆಯಲ್ಲಿ ಈ ವಿವಾಹದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪ್ರಸ್ತುತ ಯಾವುದೇ ಕಾನೂನು ದೂರು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

Exit mobile version