ಕಣಿವೆ ರಾಜ್ಯದಲ್ಲಿ ಮಾಡೆಲ್‌ಗಳ ಕ್ಯಾಟ್‌ ವಾಕ್: ಫ್ಯಾಷನ್ ಶೋಗೆ ವಿರೋಧ ಯಾಕೆ?

22215 (1)

ಮುಸ್ಲಿಂ ಬಾಂಧವರ ಪವಿತ್ರ ಆಚರಣೆಯಾದ ರಂಜಾನ್‌ ಮಾಸದಲ್ಲಿ, ಜಮ್ಮು-ಕಾಶ್ಮೀರದ ಸ್ಕೀ-ರೆಸಾರ್ಟ್‌ನಲ್ಲಿ ನಡೆದ ಫ್ಯಾಷನ್‌ಶೋ ಇದೀಗ ಭಾರೀ ಚರ್ಚೆ ಹುಟ್ಟುಹಾಕಿದೆ. ಯಾವಾಗ್ಲೂ ಟೆರರಿಸ್ಟ್‌ ಅಟ್ಯಾಕ್‌, ಬಾಂಬ್‌ ಬ್ಲಾಸ್ಟ್‌ ಅಂತಾ ನಲುಗಿದ್ದ ಕಣಿವೆ ರಾಜ್ಯದಲ್ಲಿ ಇಂದು ಫ್ಯಾಷನ್‌ಶೋ ಸಂಭ್ರಮ ಕಳೆಗಟ್ಟಿತ್ತು. ಹಿಮಚ್ಛಾದಿತ ಗುಲ್ ಮಾರ್ಗ್​ನ ನೈಸರ್ಗಿಕ ಸೌಂದರ್ಯದ ಮಧ್ಯೆ ಮಾಡೆಲ್‌ಗಳು ವಯ್ಯಾರದಿಂದ ಸಕ್ಕತ್‌ ಹೆಜ್ಜೆ ಹಾಕಿದ್ರು.

ಜಮ್ಮು-ಕಾಶ್ಮೀರ ಈಗ ಶಾಂತಿಯ ಬೀಡು ಅನ್ನೋ ಸಂದೇಶ ಸಾರೋದಕ್ಕೆ ಹಗಲು ಹೊತ್ತಿನಲ್ಲೇ ಫ್ಯಾಷನ್ ಶೋ ಪ್ರದರ್ಶಿಸಲಾಗಿತ್ತು. ಆದ್ರೆ ಓಪನ್‌ಪ್ಲೇಸ್‌ನಲ್ಲಿ ಕ್ಯಾಟ್‌ವಾಕ್‌ ಮಾಡಿದ ಮಾಡೆಲ್‌ಗಳ ವಯ್ಯಾರಕ್ಕೆ ಕಣಿವೆ ರಾಜ್ಯ ಬೆಚ್ಚಿ ಬಿದ್ದಿದೆ. ಫ್ಯಾಷನ್ ಪ್ರಿಯರ ಕಣ್ಮನ ಸೆಳೆದಿರೋ ಫ್ಯಾಷನ್ ಶೋ ಮೇಲೆ ಇದೀಗ ಕಾಶ್ಮೀರಿ ಮೂಲಭೂತವಾದಿಗಳು ಕೆಂಡಕಾರಿದ್ದಾರೆ.

ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಭಾರಿ ಕೋಲಾಹಲ

ಇಡೀ ವಿಶ್ವದಲ್ಲಿಯೇ ಪವಿತ್ರ ರಂಜಾನ್ ಹಿನ್ನೆಲೆಯಲ್ಲಿ ಉಪವಾಸ ವ್ರತ ಆಚರಿಸಲಾಗುತ್ತಿದೆ. ರಂಜಾನ್ ಸಂದರ್ಭದಲ್ಲಿ ಧಾರ್ಮಿಕ ಭಾವನೆಗೆ ಬೆಲೆ ಕೊಡದೇ ಫ್ಯಾಷನ್ ಶೋ ನಡೆಸಲಾಗ್ತಿದೆ ಅಂತಾ ಮೂಲಭೂತವಾದಿಗಳು ವಾದಿಸುತ್ತಿದ್ದಾರೆ. ಫ್ಯಾಷನ್ ಶೋ ಹೆಸರಲ್ಲಿ ಅಶ್ಲೀಲತೆ ಪ್ರದರ್ಶನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಆಡಳಿತಾರೂಢ ನ್ಯಾಷನಲ್​ ಕಾನ್ಫರೆನ್ಸ್ ನಾಯಕ ಹಾಗೂ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದು, ಕಳೆದ ಮಾರ್ಚ್ 7ರಂದು ಗುಲ್‌ಮಾರ್ಗ್‌ನಲ್ಲಿ ಆಯೋಜಿಸಲಾಗಿತ್ತು. ಈ ಫ್ಯಾಷನ್‌ಶೋ ಅನ್ನು ಇದೇ ತಿಂಗಳಲ್ಲಿ ಆಯೋಜಿಸಲು ಸರ್ಕಾರ ಯಾವುದೇ ಅನುಮತಿ ನೀಡಿರಲಿಲ್ಲ. ಇದರಲ್ಲಿ ಸರ್ಕಾರದ್ದು ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ರು.

Exit mobile version