ಲಖನೌ: ಲಖನೌನ ಸರೋಜಿನಿ ನಗರದಲ್ಲಿರುವ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ, ರಾಜ್ಯದ ಸರೋಜಿನಿ ನಗರದಲ್ಲಿರುವ ಬ್ರಹ್ಮೋಸ್ ಏರೋಸ್ಪೇಸ್ ಘಟಕದ ಬ್ರಹ್ಮಸ್ ಕ್ಷಿಪಣಿಗಳ ಮೊದಲ ಬ್ಯಾಚ್ ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಉದ್ಘಾಟಿಸಿದರು.
ಸಮಾರಾಂಭದಲ್ಲಿ ಮಾತನಾಡಿದ ರಾಜ್‌ನಾಥ್‌ಸಿಂಗ್, ಬ್ರಹ್ಮೋಸ್ ಕೇವಲ ಕ್ಷಿಪಣಿಯಲ್ಲ, ಇದು ಭಾರತದ ಕಾರ್ಯತಂತ್ರದ ವಿಶ್ವಾಸಕ್ಕೆ ಪುರಾವೆಯಾಗಿದೆ. ನೌಕಾಪಡೆಯಿಂದ ವಾಯುಪಡೆಯವರೆಗೆ ಬ್ರಹ್ಮೋಸ್ ರಕ್ಷಣಾ ಪಡೆಗಳ ಪ್ರಮುಖ ಆಧಾರಸ್ತಂಭವಾಗಿದೆ ಎಂದು ಹೇಳಿದ್ದಾರೆ
ಭಾರತದ ರಕ್ಷಣಾ ಸಾಮರ್ಥ್ಯಗಳು ಈಗ ಪ್ರಬಲವಾಗಿ ಕಾರ್ಯ ನಿರ್ವಹಿಸುತ್ತವೆ. ಪಾಕಿಸ್ತಾನದ ಭೂಪ್ರದೇಶದ ಪ್ರತಿಯೊಂದು ಇಂಚು ಬ್ರಹ್ಮೋಸ್ ವ್ಯಾಪ್ತಿಯಲ್ಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆಪರೇಷನ್ ಸಿಂದೂರ್ ಸಮಯದಲ್ಲಿ ನಡೆದದ್ದು ಕೇವಲ ಟ್ರೇಲರ್ ಆಗಿತ್ತು. ಭಾರತವು ಪಾಕಿಸ್ತಾನವನ್ನು ರಚಿಸಬಹುದಾದರೆ, ಸಮಯ ಬಂದರೆ… ನಾನು ಹೆಚ್ಚು ಹೇಳಬೇಕಾಗಿಲ್ಲ, ನೀವೆಲ್ಲರೂ ಸಾಕಷ್ಟು ಬುದ್ಧಿವಂತರು ಎಂದು ಸ್ಪಷ್ಟಪಡಿಸಿದರು.
