UPI ಪಾವತಿಗೆ ಇನ್ನು OTP ಮಾತ್ರ ಸಾಲದು: ಇಂದಿನಿಂದ ಡಬಲ್‌ ಸೆಕ್ಯೂರಿಟಿ ಇರುವ ಹೊಸ ನಿಯಮ ಜಾರಿ

Untitled design 2026 04 01T072229.365

ನವದೆಹಲಿ:  ಆನ್‌ಲೈನ್ ವಂಚನೆಗಳಿಗೆ ಬ್ರೇಕ್ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅತ್ಯಂತ ಕಟ್ಟುನಿಟ್ಟಿನ ‘ಟೂ-ಫ್ಯಾಕ್ಟರ್ ಅಥೆಂಟಿಕೇಶನ್’ (2FA) ನಿಯಮವನ್ನು ಜಾರಿಗೆ ತಂದಿದೆ. ಇನ್ನು ಮುಂದೆ ನಿಮ್ಮ ಫೋನ್‌ಗೆ ಬರುವ ಕೇವಲ ಒಂದು ಒಟಿಪಿ (OTP) ನಮೂದಿಸಿದರೆ ವಹಿವಾಟು ಪೂರ್ಣಗೊಳ್ಳುವುದಿಲ್ಲ.

ಏನಿದು ಹೊಸ ನಿಯಮ ? ಯಾಕೆ ಈ ಬದಲಾವಣೆ ?

ಇತ್ತೀಚಿನ ದಿನಗಳಲ್ಲಿ ಸೈಬರ್ ಕಳ್ಳರು ಫಿಶಿಂಗ್ (Phishing) ಮತ್ತು ಸಿಮ್ ಸ್ವಾಪಿಂಗ್ (SIM Swapping) ಮೂಲಕ ಗ್ರಾಹಕರ ಒಟಿಪಿಗಳನ್ನು ಸುಲಭವಾಗಿ ಕದ್ದು ಹಣ ಲೂಟಿ ಮಾಡುತ್ತಿದ್ದಾರೆ. ಇದನ್ನು ತಡೆಯಲು ಆರ್‌ಬಿಐ ಈಗ ಡಬಲ್ ಸೆಕ್ಯೂರಿಯನ್ನ ಕಡ್ಡಾಯಗೊಳಿಸಿದೆ. ಹೊಸ ನಿಯಮದ ಪ್ರಕಾರ, ಯಾವುದೇ ಡಿಜಿಟಲ್ ಪಾವತಿ ಮಾಡುವಾಗ ಒಟಿಪಿಯ ಜೊತೆಗೆ ಈ ಕೆಳಗಿನ ಯಾವುದಾದರೂ ಒಂದು ಹೆಚ್ಚುವರಿ ಭದ್ರತಾ ಹಂತವನ್ನು ಪೂರೈಸುವುದು ಕಡ್ಡಾಯ:

ಪ್ರಮುಖ ಬದಲಾವಣೆಗಳು ಮತ್ತು ಪರಿಣಾಮಗಳು:
  1. ಕಡ್ಡಾಯ ಟೂ-ಫ್ಯಾಕ್ಟರ್ ಅಥೆಂಟಿಕೇಶನ್ (2FA): ಪ್ರತಿ ವಹಿವಾಟಿನ ಸುರಕ್ಷತೆಗಾಗಿ ಕನಿಷ್ಠ ಎರಡು ಹಂತದ ಪರಿಶೀಲನೆ ಇರಲೇಬೇಕು. ಕೇವಲ ಒಟಿಪಿ ನಂಬಿ ಇನ್ನು ಮುಂದೆ ವ್ಯವಹರಿಸಲು ಸಾಧ್ಯವಿಲ್ಲ. ಬಯೋಮೆಟ್ರಿಕ್ ಅಥವಾ ಪಿನ್ ನಮೂದಿಸಿದ ನಂತರವಷ್ಟೇ ಹಣ ವರ್ಗಾವಣೆಯಾಗಲಿದೆ.

  2. ವಹಿವಾಟಿನ ಸಮಯ ಮತ್ತು ನಂಬಿಕಸ್ಥ ಸಾಧನ: ಹೆಚ್ಚುವರಿ ಭದ್ರತಾ ಹಂತಗಳಿಂದಾಗಿ ಪಾವತಿ ಪ್ರಕ್ರಿಯೆ ಮೊದಲಿನಂತಲ್ಲದೆ ಕೆಲವು ಸೆಕೆಂಡ್‌ಗಳಷ್ಟು ವಿಳಂಬವಾಗಬಹುದು. ಆದರೆ, ನೀವು ಪ್ರತಿದಿನ ಬಳಸುವ ನಂಬಿಕಸ್ಥ ಸಾಧನಗಳಲ್ಲಿ(Trusted Devices) ಈ ಪ್ರಕ್ರಿಯೆ ಸ್ವಲ್ಪ ಸುಗಮವಾಗಿರಲಿದೆ. ದೊಡ್ಡ ಮೊತ್ತದ ವಹಿವಾಟುಗಳಿಗೆ ಹೆಚ್ಚಿನ ತಪಾಸಣೆ ಇರಲಿದೆ.

  3. ಬ್ಯಾಂಕುಗಳ ಮೇಲೆ ಹೆಚ್ಚಿನ ಜವಾಬ್ದಾರಿ: ಒಂದು ವೇಳೆ ಬ್ಯಾಂಕಿನ ವ್ಯವಸ್ಥೆಯ ವೈಫಲ್ಯದಿಂದ ವಂಚನೆ ನಡೆದರೆ, ಅದಕ್ಕೆ ಬ್ಯಾಂಕುಗಳೇ ನೇರ ಹೊಣೆಯಾಗುತ್ತವೆ. ಅಂತಹ ಸಂದರ್ಭಗಳಲ್ಲಿ ಗ್ರಾಹಕರಿಗೆ ಬ್ಯಾಂಕುಗಳು ಪರಿಹಾರ ನೀಡಬೇಕು ಮತ್ತು ದೂರುಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು ಎಂದು ಆರ್‌ಬಿಐ ಸೂಚಿಸಿದೆ.

  4. ಅಂತರಾಷ್ಟ್ರೀಯ ವಹಿವಾಟುಗಳಿಗೂ ಅನ್ವಯ: ಇದೇ ರೀತಿಯ ಸುರಕ್ಷತಾ ಕ್ರಮಗಳು ವಿದೇಶಿ ಪಾವತಿಗಳಿಗೂ ಅನ್ವಯವಾಗಲಿದ್ದು, ಅಕ್ಟೋಬರ್ 2026ರ ವೇಳೆಗೆ ಇದು ಸಂಪೂರ್ಣವಾಗಿ ಜಾರಿಗೆ ಬರಲಿದೆ.

ಈ ನಿಯಮದ ಹಿಂದಿನ ಉದ್ದೇಶಗಳೇನು?

ಇಂದಿನಿಂದ ಡಿಜಿಟಲ್ ವ್ಯವಹಾರ ಮಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಿ. ನಿಮ್ಮ ಪಿನ್ ಅಥವಾ ಬಯೋಮೆಟ್ರಿಕ್ ವಿವರಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ನೆನಪಿಡಿ, ಈ ಸಣ್ಣ ವಿಳಂಬವು ನಿಮ್ಮ ಹಣದ ದೊಡ್ಡ ಸುರಕ್ಷತೆಗಾಗಿ ಜಾರಿಗೆ ಬಂದಿದೆ.

Exit mobile version