ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಶುರು: ಈ ವಿಷಯಗಳ ಕುರಿತು ಚರ್ಚೆ ಸಾಧ್ಯತೆ

Untitled design 2025 12 01T080654.472

ನವದೆಹಲಿ, ಡಿಸೆಂಬರ್ 01: ಸಂಸತ್ತಿನ ಚಳಿಗಾಲದ ಅಧಿವೇಶನ (Parliament Winter Session) ಸೋಮವಾರ ಡಿಸೆಂಬರ್ 1ರಿಂದ ಆರಂಭವಾಗಿದೆ. ಈ ಅಧಿವೇಶನ ಡಿಸೆಂಬರ್ 19ರ ವರೆಗೆ ಸುಮಾರು 15 ದಿನಗಳ ಕಾಲ ನಡೆಯಲಿದೆ ವಿಶೇಷವಾಗಿ, ಮತದಾರರ ಪಟ್ಟಿಗಳಿಗಾಗಿರುವ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ವಿಚಾರ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಪ್ರಮುಖ ಘರ್ಷಣೆಯ ಕೇಂದ್ರಬಿಂದುವಾಗಿದೆ.

ವಿರೋಧ ಪಕ್ಷಗಳ ಕಟ್ಟುನಿಟ್ಟಿನ ನಿಲುವು

ಭಾನುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ವಿರೋಧ ಪಕ್ಷಗಳು SIR ವಿಚಾರವನ್ನು ಚರ್ಚೆಗೆ ತರದೇ ಇದ್ದರೆ, ಸಂಸದೀಯ ಕಾರ್ಯನಿರ್ವಹಣೆಗೆ ಸಹಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಿವೆ. ಈ ವಿಚಾರದಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಡಿಎಂಕೆ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಒಂದೇ ರೀತಿಯ ನಿಲುವನ್ನು ತೆಗೆದುಕೊಂಡಿದ್ದಾರೆ.

ವಿರೋಧ ಪಕ್ಷಗಳ ಪ್ರಕಾರ, SIR ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯಲ್ಲಿ ಅಸಮಂಜಸ ಬದಲಾವಣೆಗಳಾಗುತ್ತಿರುವ ಅನುಮಾನವಿದ್ದು, ವಿಷಯದ ಬಗ್ಗೆ ಸಂಸತ್ತಿನಲ್ಲಿ ಸಮಗ್ರ ಚರ್ಚೆ ಅಗತ್ಯ. ಸರ್ಕಾರವನ್ನು ಹೊಣೆಗಾರಿಕೆಗೊಳಿಸುವ ಉದ್ದೇಶದಿಂದ ಈ ವಿಚಾರ ಚರ್ಚೆ ಕಡ್ಡಾಯ ಎಂಬುದು ಅವರ ಅಭಿಪ್ರಾಯ.

ಸರ್ಕಾರದ ಪ್ರತಿಕ್ರಿಯೆ: ‘SIR ಸಂಸತ್ತು ಚರ್ಚಿಸೋ ವಿಷಯವಲ್ಲ’

SIR ವಿಷಯದಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂಪೂರ್ಣವಾಗಿ ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿಯಲ್ಲಿರುವ ಕಾರಣ, ಸಂಸತ್ತಿನಲ್ಲಿ ಇದರ ಕುರಿತು ಚರ್ಚಿಸುವ ಅವಕಾಶವಿಲ್ಲ ಎಂದು ಸರ್ಕಾರ ಹೇಳಿದೆ. ಸುಪ್ರೀಂ ಕೋರ್ಟ್ ನಿರ್ದೇಶನಗಳ ಅನುಸರಣೆಗೂ ಚುನಾವಣಾ ಆಯೋಗ ಬದ್ಧವಾಗಿರುವುದರಿಂದ ಸಂಸತ್ತು ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ ಎನ್ನುವುದು ಸರ್ಕಾರದ ವಾದ.

ಇದರೊಂದಿಗೆ, ಅಧಿವೇಶನ ಸುದೀರ್ಘವಾಗಿ ಗದ್ದಲಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.  ಇದೇ ವೇಳೆ, ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ದಾಖಲಾದ ಹೊಸ ಎಫ್‌ಐಆರ್‌ ರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಇದನ್ನು ‘ಸೇಡಿನ ಕ್ರಮ’ ಎಂದು ಕಾಂಗ್ರೆಸ್ ಟೀಕಿಸಿ, ಸಂಸತ್ತಿನ ಒಳಗೂ ಹೊರಗೂ ಹೋರಾಟ ಮುಂದುವರಿಸುವುದಾಗಿ ಹೇಳಿದೆ. ಈ ಪ್ರಕರಣವೂ ಅಧಿವೇಶನದ ವಾತಾವರಣವನ್ನು ಮತ್ತಷ್ಟು ಉದ್ವಿಗ್ನಗೊಳಿಸುವ ಸಾಧ್ಯತೆ ಇದೆ.

ಅಧಿವೇಶನದ ಅವಧಿ ಮತ್ತು ಸರ್ಕಾರದ ಕಾರ್ಯತಂತ್ರ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮನೆಯಲ್ಲಿ ನಡೆದ ಪ್ರಮುಖ ಸಭೆಯಲ್ಲಿ ಈ ಚಳಿಗಾಲದ ಅಧಿವೇಶನದ ಕಾರ್ಯತಂತ್ರವನ್ನು ಸರ್ಕಾರ ಅಂತಿಮಗೊಳಿಸಿದ್ದು, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸರ್ವಪಕ್ಷ ಸಭೆಯಲ್ಲಿ ವಿರೋಧ ಪಕ್ಷಗಳ ಸಹಕಾರವನ್ನು ಕೋರಿದ್ದಾರೆ.

ಚಳಿಗಾಲದ ಅಧಿವೇಶನವನ್ನು ಹೋಲಿಕೆಯಾಗಿ ಸ್ವಲ್ಪ ಕಡಿಮೆ ಅವಧಿಗೆ ಅಂದರೆ ಡಿಸೆಂಬರ್ 01 ರಿಂದ ಡಿಸೆಂಬರ್ 19ರವರೆಗೆ ನಿಗದಿಪಡಿಸಲಾಗಿದೆ. ಬಿಹಾರ ಚುನಾವಣೆಯ ಬಳಿಕ ನಡೆಯುವ ಮೊದಲ ಅಧಿವೇಶನವಾಗಿರುವುದರಿಂದ ಸರ್ಕಾರ ಹಲವು ಸುಧಾರಣಾ ಮಸೂದೆಗಳನ್ನು ಅಂಗೀಕರಿಸಬೇಕೆಂಬ ಉದ್ದೇಶದಲ್ಲಿದೆ.

ಸರ್ಕಾರ ತರಲಿರುವ 10 ಪ್ರಮುಖ ಮಸೂದೆಗಳು

ಈ ಅಧಿವೇಶನದಲ್ಲಿ ಕೇಂದ್ರ ಸರ್ಕಾರ 10 ಪ್ರಮುಖ ಮಸೂದೆಗಳನ್ನು ಮಂಡಿಸುವ ಸಾಧ್ಯತೆ ಇದೆ. ಅವುಗಳಲ್ಲಿ

ಆದರೆ, SIR ವಿಚಾರದ ಕುರಿತಾದ ವಿರೋಧ ಪಕ್ಷಗಳ ಪ್ರತಿಭಟನೆಗಳು ಮತ್ತು ನಿರಂತರ ಅಡ್ಡಿಪಡಿಸುವಿಕೆಗಳು ಸರ್ಕಾರದ ಶಾಸನ ಕಾರ್ಯಸೂಚಿಗೆ ದೊಡ್ಡ ಸವಾಲಾಗಬಹುದು.

Exit mobile version