ಮೊದಲ ವರ್ಟಿಕಲ್ ಲಿಫ್ಟ್ ಸೇತುವೆ ಉದ್ಘಾಟಿಸಿದ ಮೋದಿ

Film 2025 04 06t133733.928

ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಇಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದಾರೆ. ರಾಮೇಶ್ವರಂಗೆ ತೆರಳುವ ಭಕ್ತರಿಗೆ, ಧನುಷ್ಕೋಡಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ರಿಡ್ಜ್‌ ಅನ್ನು ನಿರ್ಮಿಸಲಾಗಿದ್ದು, ಇಂದು ರಾಮನವಮಿಯಂದೇ ಪ್ರಧಾನಿ ಮೋದಿ ಈ ಸೇತುವೆಯನ್ನು ಉದ್ಘಾಟಿಸಿದ್ದಾರೆ.

ಇಂದು ರಾಮನವಮಿ ವಿಶೇಷ ದಿನವಾದ್ದರಿಂದ ತಮಿಳುನಾಡಿನ ಪಂಬನ್‌ನಲ್ಲಿ ನಿರ್ಮಿಸಲಾದ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನ ಪ್ರಧಾನಿ ಮೋದಿ ಉದ್ಘಾಟಿಸಿದ್ದು ಇತಿಹಾಸ. ಇದರೊಂದಿಗೆ, ಅವರು ರಸ್ತೆ ಸೇತುವೆಯಿಂದ ರೈಲು ಮತ್ತು ಹಡಗು ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ  ಸೇತುವೆಯ ಉದ್ಘಾಟಿಸಿದ್ದಾರೆ.

ಹಳೇ ಪಂಬನ್ ರೈಲು ಸೇತುವೆಯನ್ನ 111 ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿದ್ದು, ಹಳೆಯ ಸೇತುವೆ ಶಿಥಿಲಗೊಂಡಿದ್ದರಿಂದ ಅದರ ಪಕ್ಕದಲ್ಲಿಯೇ ಹೊಸ ಸೇತುವೆ ನಿರ್ಮಿಸಲಾಗಿದೆ. ಹಳೇ ಬ್ರಿಡ್ಜ್‌ ಮಾನವ ಸಹಿತವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಈ ನೂತನ ಬ್ರಿಡ್ಜ್‌ ಮಾನವ ರಹಿತವಾಗಿ ಕಾರ್ಯನಿರ್ವಹಿಸುತ್ತದೆ. ಇದು ಎಲೆಕ್ಟ್ರಿಕಲ್ ಆಟೋ‌ಮೆಕ್ಯಾನಿಕಲ್ ತಂತ್ರಜ್ಞಾನ ಒಳಗೊಂಡಿದ್ದು ಬಹುಬೇಗ ತೆರೆದುಕೊಳ್ಳುತ್ತದೆ. ಹಳೇ ಬ್ರಿಡ್ಜ್ ತೆರೆದುಕೊಳ್ಳಲು 45 ನಿಮಿಷ ಕಾಲಾವಕಾಶ ತೆಗೆದುಕೊಳ್ಳುತ್ತಿತ್ತು. ಆದರೆ ಹೊಸ ಬ್ರಿಡ್ಜ್ 5.3 ನಿಮಿಷದಲ್ಲಿ ತೆರೆದುಕೊಳ್ಳಲಿರುವುದರಿಂದ ಅನುಕೂಲವಾಗಿದೆ.

ಸುಮಾರು 2.5 ಕಿಲೋ ಮೀಟರ್​ ಉದ್ದದ ದೇಶದ ಮೊದಲ ವರ್ಟಿಕಲ್‌ ಲಿಫ್ಟ್‌ ರೈಲು ಸೇತುವೆ ಇದಾಗಿದೆ. ಇದು ಮಾನವ ರಹಿತವಾಗಿ ಕಾರ್ಯನಿರ್ವಹಿಸುತ್ತದೆ. ಹಡಗು ಸಂಚಾರ ವೇಳೆ ಮೇಲಕ್ಕೆತ್ತಲ್ಪಟ್ಟು ಮತ್ತೆ ಅದೇ ಸ್ಥಾನಕ್ಕೆ ಮರಳುವ ತಂತ್ರಜ್ಞಾನ ಇದರಲ್ಲಿ ಅಳವಡಿಸಲಾಗಿದೆ.

ವರ್ಟಿಕಲ್‌ ರೈಲ್ವೆ ಬ್ರಿಡ್ಜ್‌‌‌ ವಿಶೇಷತೆ

ಆರ್ಥಿಕತೆ, ಪ್ರವಾಸೋದ್ಯಮ ಮತ್ತು ಯಾತ್ರಾರ್ಥಿಗಳಿಗೆ ಅನುಕೂಲಕರವಾಗಿದ್ದು, ಮುಖ್ಯಭೂಮಿಯಿಂದ ರಾಮೇಶ್ವರಂಗೆ ಕೇವಲ 5 ನಿಮಿಷದಲ್ಲಿ ತಲುಪುತ್ತದೆ. ಸೇತುವೆಯಲ್ಲಿ ಚಲಿಸುವಾಗ ರೈಲಿನ ವೇಗದ ಮಿತಿ ಗಂಟೆಗೆ 75 ಕಿಲೋ ಮೀಟರ್​ ಇರಲಿದ್ದು, ಶೆರ್ಜರ್ ರೋಲಿಂಗ್ ಲಿಫ್ಟ್ ತಂತ್ರಜ್ಞಾನದ ಬಳಕೆ ಮಾಡಲಾಗಿದೆ. ತುಕ್ಕು ಹಿಡಿಯದಂತೆ ತುಕ್ಕು ರಹಿತ ಡಬಲ್ ಕೋರ್ಟ್ ಪೇಯಿಂಟ್ ಬಳಸಲಾಗಿದೆ. ಸೇತುವೆಯನ್ನು ಮೇಲೆ ಎತ್ತಲು 120 ಕಿಲೋ ವ್ಯಾಟ್ ವಿದ್ಯುತ್ ಬೇಕಾಗುತ್ತೆದೆ.

ಒಟ್ಟು 535 ಕೋಟಿ ರೂಪಾಯಿ ವೆಚ್ಚದಲ್ಲಿ ಈ ವರ್ಟಿಕಲ್‌ ಲಿಫ್ಟ್‌ ಸೇತುವೆಯನ್ನ ನಿರ್ಮಾಣ ಮಾಡಲಾಗಿದೆ. ಈ ಹೊಸ ಪಂಬನ್ ಸೇತುವೆಯೂ ಪ್ರಗತಿಯ ಸಂಕೇತವಾಗಿದೆ. ಇಂಜಿನಿಯರ್​ಗಳ ಕಾರ್ಯಕ್ಕೆ ಇಡೀ ಭಾರತ ಹುಬ್ಬೇರಿಸುವಂತೆ ಮಾಡಿದೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version