ಮದ್ಯ ಪ್ರಿಯರಿಗೆ ಶಾಕ್: ಓಲ್ಡ್ ಮಾಂಕ್ ಸೇರಿದಂತೆ 4 ಪ್ರಸಿದ್ಧ ಬ್ರ್ಯಾಂಡ್‌ಗಳ ಮಾರಾಟ ನಿಷೇಧ

Your paragraph text (12)

ನವದೆಹಲಿ, ಆಗಸ್ಟ್ 5: ಮದ್ಯ ಪ್ರಿಯರಿಗೆ ಭಾರೀ ಶಾಕ್ ನೀಡಿರುವ ಕೇಂದ್ರ ಸರ್ಕಾರ, ಓಲ್ಡ್ ಮಾಂಕ್ ರಮ್, ರಾಯಲ್ ಚಾಲೇಂಜ್, ಆ್ಯಂಟಿಕ್ವಿಟಿ ಮತ್ತು ಬ್ಯಾಗ್‌ಪೈಪರ್ ಡಿಲಕ್ಸ್ ಸೇರಿದಂತೆ ಹಲವು ಪ್ರಸಿದ್ಧ ಮದ್ಯದ ಬ್ರ್ಯಾಂಡ್‌ಗಳ ಮಾರಾಟವನ್ನು ನಿಷೇಧಿಸಿದೆ. ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಡೆಸಿದ ತಪಾಸಣೆಯಲ್ಲಿ ಈ ಬ್ರ್ಯಾಂಡ್‌ಗಳು ವ್ಯಾಪಕ ವಂಚನೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ.

FSSAI ತಪಾಸಣೆಯಲ್ಲಿ ಪತ್ತೆಯಾದ ಅಂಶಗಳು

ಸಾಮಾನ್ಯವಾಗಿ ಉತ್ತಮ ದರ್ಜೆಯ ರಮ್ ಮತ್ತು ವಿಸ್ಕಿಯನ್ನು ಬೆಲ್ಲದ ರಸ (ಮೊಲಾಸಸ್), ಮಾಲ್ಟ್ ಅಥವಾ ದ್ರಾಕ್ಷಿ ಬಳಸಿ ನೈಸರ್ಗಿಕವಾಗಿ ಫರ್ಮಂಟೇಶನ್ (ಹುದುಗುವಿಕೆ) ಮತ್ತು ಮ್ಯಾಚ್ಯುರೇಶನ್ (ಪಕ್ವಗೊಳಿಸುವಿಕೆ) ಪ್ರಕ್ರಿಯೆಯ ಮೂಲಕ ತಯಾರಿಸಲಾಗುತ್ತದೆ. ಇದಕ್ಕೆ ವರ್ಷಗಟ್ಟಲೆ ಸಮಯ ಬೇಕಾಗುತ್ತದೆ. ಆದರೆ ಪ್ರಸಿದ್ಧವಾದ ಈ ಬ್ರ್ಯಾಂಡ್‌ಗಳು ನ್ಯೂಟ್ರಲ್ ಆಲ್ಕೋಹಾಲ್ಗೆ ಕೃತಕ ರಮ್ ಮತ್ತು ವಿಸ್ಕಿ ಫ್ಲೇವರ್ಗಳನ್ನು (Artificial Flavours) ಬೆರೆಸಿ ಮಾರಾಟ ಮಾಡುತ್ತಿದ್ದವು.

ಅಲ್ಲದೆ, 7 ವರ್ಷ ಮತ್ತು 12 ವರ್ಷಗಳಷ್ಟು ಹಳೆಯದಾದ ‘ಏಜ್ಡ್ ಮದ್ಯ’ (Aged Liquor) ಎಂದು ಲೇಬಲ್‌ನಲ್ಲಿ ನಮೂದಿಸಿ ಮಾರಾಟ ಮಾಡುತ್ತಿದ್ದ ಈ ಮದ್ಯಗಳು ಪ್ರಯೋಗಾಲಯ ತಪಾಸಣೆಯಲ್ಲಿ ಕನಿಷ್ಠ 1 ವರ್ಷವೂ ಬ್ಲೆಂಡ್ ಆಗಿರಲಿಲ್ಲ ಎಂಬ ಸತ್ಯ ಬಯಲಾಗಿದೆ. ಅಂದರೆ, ಗ್ರಾಹಕರಿಗೆ ಹಳೆಯ ಮತ್ತು ಅಮೂಲ್ಯವಾದ ಮದ್ಯ ಎಂದು ಮಾರಾಟ ಮಾಡುತ್ತಿದ್ದು, ವಾಸ್ತವದಲ್ಲಿ ಅವು ಹೊಸದಾಗಿ ಕೃತಕ ಸುವಾಸನೆ ಬೆರೆಸಿದ ಸರಳ ಮದ್ಯಗಳಾಗಿದ್ದವು.

ಯಾವ ಬ್ರ್ಯಾಂಡ್ಗಳಿಗೆ ನಿಷೇಧ?

FSSAI ನಡೆಸಿದ ತಪಾಸಣೆಯಲ್ಲಿ ಕೃತಕ ಫ್ಲೇವರ್ ಮತ್ತು ಬಣ್ಣಗಳನ್ನು ಬೆರೆಸಿ, ನೈಸರ್ಗಿಕವಾಗಿ ಪಕ್ವಗೊಳಿಸಿದ ಮದ್ಯ ಎಂದು ಲೇಬಲ್ ಮಾಡಿ ಗ್ರಾಹಕರಿಗೆ ದಾರಿತಪ್ಪಿಸುವ ಮಾಹಿತಿ ನೀಡಿ ಮೋಸ ಮಾಡಿದ ಪ್ರಮುಖ ಬ್ರ್ಯಾಂಡ್‌‌ಗಳನ್ನು ನಿರ್ಬಂಧಿಸಲು ಆದೇಶಿಸಲಾಗಿದೆ. ಅವುಗಳೆಂದರೆ,

ಕೇಂದ್ರ ಸರ್ಕಾರದ ಉದ್ದೇಶ

ಗ್ರಾಹಕರ ಆರೋಗ್ಯದ ದೃಷ್ಟಿಯಿಂದಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೃತಕ ಫ್ಲೇವರ್ಗಳು ಮತ್ತು ರಾಸಾಯನಿಕಗಳು ದೀರ್ಘಕಾಲ ಸೇವನೆಯಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಲ್ಲವು. ಅಲ್ಲದೆ, ವರ್ಷಗಟ್ಟಲೆ ಹಳೆಯ ಮದ್ಯ ಎಂದು ಮಾರಾಟ ಮಾಡಿ ಗ್ರಾಹಕರಿಗೆ ವಂಚನೆ ಮಾಡಿರುವುದು ಗಂಭೀರ ಅಪರಾಧವಾಗಿದೆ.

FSSAI ಈಗಾಗಲೇ ಈ ಬ್ರ್ಯಾಂಡ್ಗಳ ನಿಯಮ ಉಲ್ಲಂಘನೆಯನ್ನು ಗಮನಿಸಿ, ಕೇಂದ್ರ ಆಹಾರ ಇಲಾಖೆಯು ಮದ್ಯ ತಯಾರಿಕಾ ಕಂಪನಿಗಳ ವಿರುದ್ಧ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಮದ್ಯ ಕಂಪನಿಗಳು ತಮ್ಮ ಉತ್ಪನ್ನಗಳ ನೈಜ ಗುಣಮಟ್ಟ ಮತ್ತು ಏಜಿಂಗ್ ವಿವರಗಳನ್ನು ಲೇಬಲ್ನಲ್ಲಿ ಸ್ಪಷ್ಟವಾಗಿ ನಮೂದಿಸುವುದು ಕಡ್ಡಾಯವಾಗಲಿದೆ. 

Exit mobile version