ದೆಹಲಿ ಕೆಂಪುಕೋಟೆ ಕಾರ್ ಬಾಂಬ್ ಸ್ಫೋಟ ಕೇಸ್‌‌: ಕಾಶ್ಮೀರದ ವಿವಿಧೆಡೆ NIA ದಿಢೀರ್ ದಾಳಿ

Untitled design 2025 12 01T125622.471

ಶ್ರೀನಗರ: ದೆಹಲಿಯ ಕೆಂಪು ಕೋಟೆ ಸಮೀಪ ಸಂಭವಿಸಿದ್ದ ಕಾರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಜಮ್ಮು ಮತ್ತು ಕಾಶ್ಮೀರದ ವಿವಿಧ ಜಿಲ್ಲೆಗಳಲ್ಲಿ ಬೃಹತ್ ದಾಳಿ ನಡೆಸಿದೆ.

ಗುರುವಾರ ಬೆಳಗ್ಗೆಯಿಂದಲೇ ಕಾಶ್ಮೀರ ಕಣಿವೆಯ ವಿವಿಧೆಡೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಕಾರ್ಯಾಚರಣೆ ನಡೆಸಿದ್ದಾರೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ, ಶೋಪಿಯಾನ್ ಮತ್ತು ಕುಲ್ಗಾಮ್ ಜಿಲ್ಲೆಗಳಲ್ಲಿ ಒಟ್ಟು ಎಂಟು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಪುಲ್ವಾಮಾ ಜಿಲ್ಲೆಯ ಕೋಯಿಲ್, ಚಂಡಿಗಾಮ್, ಮಲಂಗ್‌ಪೋರಾ ಮತ್ತು ಸಂಬೂರಾ ಪ್ರದೇಶಗಳು ಈ ಕಾರ್ಯಾಚರಣೆಯ ಮುಖ್ಯ ಗುರಿಯಾಗಿದ್ದವು ಎನ್ನಲಾಗಿದೆ.

“ದೆಹಲಿಯಲ್ಲಿ ಸಂಭವಿಸಿದ ಕಾರ್ ಬಾಂಬ್ ಯತ್ನದ ಹಿಂದಿನ ಜಾಲ ಮತ್ತು ಅದಕ್ಕೆ ಸ್ಥಳೀಯವಾಗಿ ಬೆಂಬಲ ನೀಡುತ್ತಿರುವ ಒವರ್‌ಗ್ರೌಂಡ್ ವರ್ಕರ್‌ಗಳನ್ನು (OGW) ಭೇದಿಸುವುದೇ ಈ ದಾಳಿಯ ಮುಖ್ಯ ಉದ್ದೇಶ” ಎಂದು NIA ಮೂಲಗಳು ತಿಳಿಸಿವೆ. ಜೈಶ್-ಇ-ಮೊಹಮ್ಮದ್‌ನ ಸಕ್ರಿಯ ಸದಸ್ಯರು, ಅವರ ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಡಿಜಿಟಲ್ ಸಾಧನಗಳು, ಡೇಟಾ, ದಾಖಲೆಗಳು ಮತ್ತು ಸಂಶಯಾಸ್ಪದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.

ತನಿಖೆಯಲ್ಲಿ ಈ ಕಾರ್ ಬಾಂಬ್ ತಯಾರಿಕೆ ಮತ್ತು ಸಾಗಾಣಿಕೆಯಲ್ಲಿ ಜಮ್ಮು-ಕಾಶ್ಮೀರ ಮೂಲದ ಕೆಲವು ವ್ಯಕ್ತಿಗಳ ಪಾತ್ರ ಇರುವುದು ಬೆಳಕಿಗೆ ಬಂದಿದೆ. ಈಗಾಗಲೇ ಈ ಪ್ರಕರಣದಲ್ಲಿ ಇಬ್ಬರು ಮುಖ್ಯ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಇವರಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಇನ್ನಷ್ಟು ಜಾಲದ ಬಗ್ಗೆ ತಿಳಿದುಕೊಳ್ಳಲು NIA ಕಾರ್ಯಾಚರಣೆಯಲ್ಲಿ ತೊಡಗಿದೆ.

ದೆಹಲಿ ಕಾರ್‌ ಬಾಂಬ್‌ ಸ್ಫೋಟ ಪ್ರಕರಣ: ಮತ್ತೊಬ್ಬ ಆರೋಪಿ ಅರೆಸ್ಟ್‌

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಸಮೀಪ ನಡೆದ ಕಾರು ಸ್ಫೋಟವು ದೇಶವನ್ನೇ ಬೆಚ್ಚಿಬೀಳಿಸಿತ್ತು. ಸಂಜೆ 6:52ಕ್ಕೆ ಸಂಭವಿಸಿದ ಭೀಕರ ಸ್ಫೋಟದಲ್ಲಿ 15 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಘಟನೆ ನಂತರ ದೇಶದ ಭದ್ರತಾ ಸಂಸ್ಥೆಗಳು ತುರ್ತು ಸಭೆ ಸೇರಿ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿವೆ. ಈಗ ತನಿಖೆ ಮಹತ್ವದ ಹಂತ ತಲುಪಿದ್ದು, ಏಳನೇ ಆರೋಪಿ ಎನ್‌ಐಎ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.

ಎನ್‌ಐಎ ಅಧಿಕಾರಿಗಳು ಬಂಧಿಸಿರುವ ಆರೋಪಿ ಫರಿದಾಬಾದ್‌ನ ನಿವಾಸಿ ಸೋಯಾಬ್. ಪ್ರಕರಣದ ಮುಖ್ಯ ಆರೋಪಿ ಡಾ. ಉಮರ್ ನಬಿಗೆ ಆತ ಆಶ್ರಯ ಒದಗಿಸಿದ್ದಾನೆ ಎನ್ನುವುದು ತನಿಖೆಯಲ್ಲಿ ತಿಳಿದು ಬಂದಿದೆ. ಉಮರ್ ನಬಿ ಐಇಡಿ ತಯಾರಿಕೆಯಲ್ಲಿ ನೇರವಾಗಿ ಭಾಗಿಯಾಗಿದ್ದ ವ್ಯಕ್ತಿ. ಸ್ಫೋಟಕ್ಕೆ ಬಳಸಿದ ವಸ್ತುಗಳ ತಯಾರಿಕೆಯಲ್ಲಿ ಅವನು ಪ್ರಮುಖ ಪಾತ್ರ ವಹಿಸಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಐಎ ತಂಡವು ಕಳೆದ ಕೆಲವು ದಿನಗಳಿಂದ ಪ್ರಕರಣದ ಎರಡನೇ ಆರೋಪಿ ಡಾ. ಮುಜಮ್ಮಿಲ್ ಶಕೀಲ್ನನ್ನು ವಿಚಾರಣೆ ನಡೆಸುತ್ತಿತ್ತು. ಆ ವಿಚಾರಣೆಯ ಆಧಾರದಲ್ಲಿ ಶಕೀಲ್‌ ಅನ್ನು ಕರೆದುಕೊಂಡು ತನಿಖಾಧಿಕಾರಿಗಳು ಸೋಯಾಬ್‌ನ ಮನೆಗೆ ಭೇಟಿ ನೀಡಿದ್ದರು. ಆ ವೇಳೆ ಮನೆಯಲ್ಲಿ ಶೋಧ ನಡೆಸಿದಾಗ, ಸ್ಪೋಟಕಗಳಿಗೆ ಬಳಸಬಹುದಾದ ಕೆಲವು ಉಪಕರಣಗಳು ಮತ್ತು ರಾಸಾಯನಿಕ ವಸ್ತುಗಳು ಪತ್ತೆಯಾಗಿವೆ. ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆದು ಫೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ.

ಬಂಧಿತ ಸೋಯಾಬ್ ಅಲ್ ಫಲಾಹ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದು, ಅವನಿಗೆ ಪ್ರಮುಖ ಆರೋಪಿಗಳೊಂದಿಗೆ ಸಂಪರ್ಕವಿದ್ದ ಮಾಹಿತಿ ದೃಢಪಡಿಸಿದೆ. ಆತನು ಉಮರ್ ನಬಿಗೆ ವಸತಿಯನ್ನು ಒದಗಿಸಿದ್ದನು. ಅವನನ್ನು ಇಂದು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಸ್ಟಡಿಗೆ ಕೋರುವ ಸಾಧ್ಯತೆ ಇದೆ.

ಈಗಾಗಲೇ ಬಂಧಿತ 7 ಆರೋಪಿಗಳು – ಯಾರು ಯಾರು?

ಈ ಪ್ರಕರಣದಲ್ಲಿ ಈಗ ತನಕ ಬಂಧಿಸಲಾದ ಪ್ರಮುಖ ಆರೋಪಿಗಳು

  1. ಅಮೀರ್ ರಶೀದ್ ಅಲಿ – ಸ್ಫೋಟಕ್ಕೆ ಬಳಸಲಾದ ಕಾರು ಖರೀದಿಸಲು ಸಹಾಯ ಮಾಡಿದ ಪ್ರಮುಖ ಆರೋಪಿ.

  2. ಜಾಸಿರ್ ಬಿಲಾಲ್ ವನಿ – ಡ್ರೋನ್ ತಂತ್ರಜ್ಞಾನ, ರಾಕೆಟ್ ಮತ್ತು ಇತರೆ ತಾಂತ್ರಿಕ ಸಾಧನಗಳನ್ನು ಒದಗಿಸಿದ್ದಾನೆ ಎನ್ನಲಾಗುತ್ತಿದೆ.

  3. ಡಾ. ಮುಜಮ್ಮಿಲ್ ಶಕೀಲ್ ಗನೈ – ಐಇಡಿ ತಯಾರಿಕೆಯ ಮುಖ್ಯ ತಜ್ಞ, ಪ್ರಮುಖ ಆರೋಪಿ.

  4. ಡಾ. ಅದೀಲ್ ಅಹ್ಮದ್ ರಾಥರ್ – ಘಟನಾ ಸಂಚಲನ ಮತ್ತು ಸಂಪರ್ಕ ವ್ಯವಸ್ಥೆಯಲ್ಲಿ ಭಾಗಿಯಾಗಿದ್ದಾನೆಂದು ಶಂಕೆ.

  5. ಡಾ. ಶಾಹೀನ್ ಸಯೀದ್ – ಬಾಂಬ್ ತಯಾರಿಕೆಯ ತಾಂತ್ರಿಕ ವಿಭಾಗದಲ್ಲಿ ನೇರವಾಗಿ ಕೈಜೋಡಿಸಿದ್ದಾನೆಂದು ಆರೋಪ.

  6. ಮುಫ್ತಿ ಇರ್ಫಾನ್ ಅಹ್ಮದ್ ವಾಗೆ – ದಾಳಿಕೋರರಿಗೆ ಮಾರ್ಗದರ್ಶನ ನೀಡಿದ ಆತ್ಮಾವಲಂಬನಾ ಮೂಲ ಎಂದು ಹೇಳಲಾಗಿದೆ.

  7. ಸೋಯಾಬ್ – ಉಮರ್ ನಬಿಗೆ ಆಶ್ರಯ ಒದಗಿಸಿದ್ದ ಕಾರಣ ಬಂಧಿತನಾದ ಏಳನೇ ಆರೋಪಿ.

Exit mobile version