ಪ್ರಧಾನಿ ಆಗ್ತಾರ ತಮಿಳುನಾಡು ಸಿಎಂ ವಿಜಯ್!

ಸಾವು (15)

ಲೋಕಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಈ ಭಾರೀ ಪ್ರಧಾನಿ ರೇಸ್ನಲ್ಲಿ ಯಾರೆಲ್ಲ ಇರಲಿದ್ದಾರೆ ಯಾರೆಲ್ಲ ಪ್ರಧಾನಿ ರೇಸ್ಗೆ ಬಂದರೆ ಚೆನ್ನಗಿರುತ್ತದೆ ಎಂಬಂತಹ ಗಾಸಿಪ್ಗಳು ಈಗಾಗಲೇ ಶುರುವಾಗಿದೆ. ರಾಹುಲ್ ಗಾಂಧಿ, ಕಾಕ್ರೋಚ್ ಜನತಾ ಪಾರ್ಟಿಯ ಅಭಿಜಿತ್ ದೀಪ್ಕೆ, ಹಾಗೂ ತಮಿಳು ನಾಡಿನ ನೂತನ ಸಿಎಂ ಜೋಸೆಫ್ ವಿಜಯ್ ಸೇರಿದಂತೆ ಹಲವರ ಹೆಸರುಗಳು ಈಗಾಗಲೇ ಪ್ರಚಲಿತಕ್ಕೆ ಬಂದಿರುವುದು ಜನರ ಕೂತುಹಲಕ್ಕೆ ದಾರಿಮಾಡಿಕೊಟ್ಟಿದೆ.

ರಾಷ್ಟ್ರೀಯ ರಾಜಕೀಯದಲ್ಲಿ ಹೊಸ ಸಂಚಲನ
• ಜೋಸೆಫ್ ವಿಜಯ್ : ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಮತ್ತು ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ನಾಯಕರಾಗಿರುವ ವಿಜಯ್ ಜೋಸೆಫ್, ‘ಇಂಡಿಯಾ ಟುಡೇ-ಸಿವೋಟರ್’ ಸಮೀಕ್ಷೆಯಲ್ಲಿ ಶೇ. 9.2ರಷ್ಟು ಮತಗಳೊಂದಿಗೆ ದೇಶದ ಮೂರನೇ ಜನಪ್ರಿಯ ಪ್ರಧಾನಿ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ. ತಮಿಳುನಾಡಿನಲ್ಲಿ ಉತ್ತಮ ಆಡಳಿತ ಹಾಗೂ ಹೊಸ ಬದಲಾವಣೆಯ ಅಲೆಯನ್ನು ಸೃಷ್ಟಿಸಿರುವ ಇವರ ಹೆಸರು ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ.
• ನರೇಂದ್ರ ಮೋದಿ: ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಸ್ಥಿರತೆ, ಪಾಕಿಸ್ತಾನದ ವಿರುದ್ಧದ ಕಠಿಣ ಕ್ರಮಗಳು ಮತ್ತು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿದ ಐತಿಹಾಸಿಕ ನಿರ್ಧಾರಗಳ ಹಿನ್ನೆಲೆಯಲ್ಲಿ ಮೋದಿ ಅವರು ಶೇ. 48.7ರಷ್ಟು ಜನಮನ್ನಣೆಯೊಂದಿಗೆ ಪ್ರಧಾನಿ ರೇಸ್ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
• ರಾಹುಲ್ ಗಾಂಧಿ: ಕಾಂಗ್ರೆಸ್ ಪಕ್ಷದ ಮುಖಂಡರಾಗಿರುವ ರಾಹುಲ್ ಗಾಂಧಿ ಶೇ. 27.1ರಷ್ಟು ಬೆಂಬಲದೊಂದಿಗೆ ಎರಡನೇ ಪ್ರಮುಖ ಆಯ್ಕೆಯಾಗಿದ್ದು, ವಿರೋಧ ಪಕ್ಷಗಳ ಪಾಳಯದಲ್ಲಿ ಪ್ರಮುಖ ಮುಖವಾಗಿ ಗುರುತಿಸಿಕೊಂಡಿದ್ದಾರೆ.

ಪ್ರಧಾನಿ ರೇಸ್  ನಲ್ಲಿ ಇತರ ಪ್ರಮುಖ ಹೆಸರುಗಳು
• ಅಭಿಜಿತ್ ದೀಪ್ಕೆ: ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಮೂಲಕ ಯುವಜನರ ಗಮನ ಸೆಳೆದಿರುವ ಇವರ ಹೆಸರು ಕೂಡ ಸಮೀಕ್ಷೆಗಳಲ್ಲಿ ಹಾಗೂ ರಾಜಕೀಯ ವಲಯದ ಗಾಸಿಪ್ಗಳಲ್ಲಿ ಪ್ರಸ್ತಾಪವಾಗುತ್ತಿದೆ.
• ಪ್ರಾದೇಶಿಕ ದಿಗ್ಗಜರು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹಾಗೂ ದೆಹಲಿಯ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಈ ಬಾರಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಪಾತ್ರದ ಕುರಿತು ಕೂಡ ವಿಶ್ಲೇಷಣೆಗಳು ನಡೆಯುತ್ತಿವೆ.
ಮುಂಬರುವ ದಿನಗಳಲ್ಲಿ ಈ ರಾಜಕೀಯ ಸಮೀಕರಣಗಳು ಮತ್ತು ಒಕ್ಕೂಟಗಳು ರಾಷ್ಟ್ರ ರಾಜಕಾರಣದಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರಲಿವೆ ಎಂಬುದು ಕುತೂಹಲ ಮೂಡಿಸಿದೆ.

Exit mobile version