ಆಟಿಕೆ ಸಾಮಾನು ಆಮಿಷವೊಡ್ಡಿ ಬಾಲಕಿ ಮೇಲೆ ಅ*ತ್ಯಾಚಾರ

Siddu stalin kcr (55)

ಬಾಲಕಿಗೆ ಆಟಿಕೆಗಳ ಆಮಿಷವೊಡ್ಡಿ ಅಪಾರ್ಟ್ಮೆಂಟ್ಗೆ ಕರೆದೊಯ್ದು ಅತ್ಯಾಚಾರವೆಸಗಿ, ಕೊಲೆ ಮಾಡಿ ಬಳಿಕ ಅಪಾರ್ಟ್ಮೆಂಟ್‌ನ  ಶೌಚಾಲಯದಿಂದ ಕೆಳಗೆ ಎಸೆದಿರುವ ಘಟನೆ ಥಾಣೆಯಲ್ಲಿ ನಡೆದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಿವೆ. 20 ವರ್ಷದ ಯುವಕನೊಬ್ಬ 10 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿ, ಕತ್ತು ಸೀಳಿ ಕೊಲೆ ಮಾಡಿ 6ನೇ ಮಹಡಿಯ ಕಿಟಕಿಯಿಂದ ಕೆಳಗೆಸೆದಿರುವ ಘಟನೆ ಥಾಣೆಯಲ್ಲಿ ನಡೆದಿದೆ.

ಆಕೆಯ ಶವವನ್ನು ಅಪಾರ್ಟ್ಮೆಂಟ್ನ ಶೌಚಾಲಯದ ಕಿಟಕಿಯಿಂದ ಕೆಳಗೆ ಎಸೆದಿದ್ದಾನೆ. ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಜೊತೆಗೆ ಕೊಲೆ ಮತ್ತು ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದರು.

ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವುದು ಬಯಲಾಗಿದೆ. ಗಂಟಲನ್ನು ಹರಿತವಾದ ಆಯುಧದಿಂದ ಸೀಳಲಾಗಿದೆ. ಮುಂಬ್ರಾದ ಹತ್ತಿರದ ಠಾಕೂರ್ಪಾಡ ಪ್ರದೇಶದ ನಿವಾಸಿಯು ಪಕ್ಕದ ಕಟ್ಟಡದಲ್ಲಿ ವಾಸಿಸುತ್ತಿದ್ದ ಬಾಲಕಿಗೆ ಆಟಿಕೆಗಳನ್ನು ನೀಡುವ ಭರವಸೆಯೊಡ್ಡಿ ಕರೆದೊಯ್ದು ಕೃತ್ಯವೆಸಗಿದ್ದಾನೆ.

ಆಕೆಯನ್ನು ಅಪಾರ್ಟ್ಮೆಂಟ್ನ 6ನೇ ಫ್ಲೋರ್‌ಗೆ ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರ ನಡೆಸಿದ್ದಾನೆ, ಬಳಿಕ ಕತ್ತು ಸೀಳಿ, ಶೌಚಾಲಯದ ಕಿಟಕಿಯಿಂದ ಕೆಳಗೆ ದೇಹವನ್ನು ಎಸೆದಿದ್ದಾನೆ. ಪೊಲೀಸ್ ತನಿಖಾ ತಂಡವು ಕಟ್ಟಡದ ಪ್ರತಿಯೊಂದು ಫ್ಲಾಟ್ ಅನ್ನು ಪರಿಶೀಲಿಸಿದಾಗ ಆ ವ್ಯಕ್ತಿಯ ಮನೆಯಲ್ಲಿ ಸ್ನಾನಗೃಹದ ಕಿಟಕಿ ತೆರೆದಿರುವುದು ಕಂಡುಬಂದಿದೆ, ಅಲ್ಲಿಂದ ಅವನು ಹುಡುಗಿಯನ್ನು ತಳ್ಳಿದ್ದಾನೆ ಎಂದು ಹೇಳಲಾಗುತ್ತಿದೆ.

ಕಟ್ಟಡದ ನಿವಾಸಿಯಲ್ಲದಿದ್ದರೂ ಆಕೆ ಅಲ್ಲಿಗೆ ಹೇಗೆ ಬಂದಳು ಎಂಬುದರ ಕುರಿತು ಮೊದಲು ತನಿಖೆ ಆರಂಭಿಸಲಾಗಿತ್ತು. ಮೇಲಿಂದ ಕೆಳಗೆ ಏನೋ ಬಿದ್ದಿರುವ ಶಬ್ದವೂ ಕೂಡ ಅಕ್ಕಪಕ್ಕದಲ್ಲಿ ಇದ್ದವರಿಗೆ ಕೇಳಿಸಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು.

Exit mobile version