ಮುಂಬೈ: ಮುಂಬೈನಲ್ಲಿ ಅಪ್ರಾಪ್ತ 10 ಬಾಲಕಿಯರಿಗೆ ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಬಾಲಕಿಯರಿಗೆ ನೀಡಿದ್ದಾರೆ, ಬಳಿಕ ಬಾಲಕಿಯರ ಮೇಲೆ ಅತ್ಯಾಚಾರವೆಸಗುತ್ತಿದ್ದ ಕಾಮುಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 10 ಬಾಲಕಿಯರು ಈತನ ಕೃತ್ಯಕ್ಕೆ ಬಲಿಯಾಗಿರುವುದು ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.
ಬಂಧಿತ ಆರೋಪಿಯನ್ನು ಮಹೇಶ್ ರಮೇಶ್ ಪವಾರ್ (45) ಎಂದು ಗುರುತಿಸಲಾಗಿದೆ. ಈತ ಅಪ್ರಾಪ್ತ ಬಾಲಕಿಯರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ಎಸಗುತ್ತಿದ್ದ. ಬಾಲಕಿಯರಿಗೆ ತಂಪು ಪಾನೀಯ ನೀಡುವ ನೆಪದಲ್ಲಿ ಆಮಿಷವೊಡ್ಡಿ, ಅದರಲ್ಲಿ ಮಾದಕ ದ್ರವ್ಯ ಅಥವಾ ನಿದ್ರಾಜನಕ ಮಾತ್ರೆಗಳನ್ನು ಬೆರೆಸುತ್ತಿದ್ದ. ಬಾಲಕಿಯರು ಪ್ರಜ್ಞೆ ತಪ್ಪಿದ ನಂತರ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಅಷ್ಟೇ ಅಲ್ಲದೆ, ಈ ಭೀಕರ ಕೃತ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ ಎಂದು ಪೊಲೀಸರು ತಿಲೀಸಿದ್ದಾರೆ.
ಅತ್ಯಾಚಾರದ ನಂತರ ಈ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಸಂತ್ರಸ್ತ ಬಾಲಕಿಯರನ್ನು ಆರೋಪಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ವಿಡಿಯೋಗಳನ್ನು ಇಂಟರ್ನೆಟ್‌ನಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಹಲವು ಬಾರಿ ಶೋಷಣೆ ಮಾಡಿದ್ದಾನೆ. ಇತ್ತೀಚೆಗೆ ಈತ ಅತ್ಯಾಚಾರದ ವಿಡಿಯೋವೊಂದನ್ನು ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.
ಡಿಸೆಂಬರ್ 13 ರಂದು ಕುರಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಗಾಂಭೀರತೆ ಅರಿತ ಪೊಲೀಸ್ ಇನ್ಸ್‌ಪೆಕ್ಟರ್ ಸಂಜಯ್ ತಾವ್ಡೆ ನೇತೃತ್ವದ ತಂಡವು ತಕ್ಷಣ ಕಾರ್ಯಪ್ರವೃತ್ತರಾಗಿ, ಕೇವಲ 6 ಗಂಟೆಗಳ ಒಳಗಾಗಿ ವಿರಾರ್‌ನಲ್ಲಿ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ. ತನಿಖೆಯ ವೇಳೆ ಈತ ವಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಇದೇ ರೀತಿಯ ಅಪರಾಧಗಳನ್ನು ಮಾಡಿರುವುದು ಪತ್ತೆಯಾಗಿದೆ. ಸದ್ಯ ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ವಕೋಲಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಯುವಕನ ನಿರ್ಲಕ್ಷ್ಯದಿಂದ 64 ವರ್ಷದ ವಕೀಲ ಬಲಿ
ಬೆಂಗಳೂರು ನಗರದ ಆರ್‌ಎಂವಿ ಎಕ್ಸ್ಟೆನ್ಷನ್ ಪ್ರದೇಶದಲ್ಲಿ ಯುವಕನ ಕಾರು ಅಡ್ಡಾದಿಡ್ಡಿ ಚಾಲನೆ ಮಾಡಿದ ಪರಿಣಾಮ 64 ವರ್ಷದ ವೃದ್ಧ ವಕೀಲರು ಸಾವನ್ನಪ್ಪಿದ ಘಟನೆ ನಡೆದಿದೆ. ರಾತ್ರಿ ಸುಮಾರು 9.30 ಗಂಟೆಗೆ ಘಟನೆ ನಡೆದಿದ್ದು, ಸಂಜಯನಗರ ಸಂಚಾರ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಘಟನೆ ಆರ್‌ಎಂವಿ ಎಕ್ಸ್ಟೆನ್ಷನ್ನ ಎಂ.ಎಸ್.ರಾಮಯ್ಯ ರಸ್ತೆಯಲ್ಲಿ ನಡೆದಿದ್ದು, 19 ವರ್ಷದ ಶಿಶಿರ್ ಸುಧೀರ್ ಪಾಟೀಲ್ ಎಂಬ ಯುವಕ ಸಿಯಾಟ್ ಕಾರು ಚಾಲನೆ ಮಡುತ್ತಿದ್ದ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 64 ವರ್ಷದ ವಕೀಲ ಚಂದ್ರಶೇಖರ ರೆಡ್ಡಿಯವರ ಮೇಲೆ ಕಾರು ಗುದ್ದಿದ್ದಾನೆ. ಕಾರು ಗುದ್ದಿದ ರಭಸದಿಂದ ವೃದ್ಧರು ಸುಮಾರು 15 ಅಡಿ ದೂರ ಹಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಕಾರು ನಂತರ ರಸ್ತೆಯ ಅಂಚಿನಲ್ಲಿ ನಿಲ್ಲಿಸಿದ್ದ ಇನ್ನೊಂದು ಎರ್ಟಿಗಾ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕ ಮತ್ತು ಯುವತಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತ ಮಾಡಿದ ಯುವಕ ಶಿಶಿರ್ ಸುಧೀರ್ ಪಾಟೀಲ್ ಬಿ.ಇ. ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಯೆಂದು ತಿಳಿದುಬಂದಿದೆ. ಯುವಕ ತನ್ನ ತಂದೆಯ ಕಾರನ್ನು ಚಲಾಯಿಸುತ್ತಿದ್ದ, ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತರಾದ ಚಂದ್ರಶೇಖರ ರೆಡ್ಡಿ ಅವರು 64 ವರ್ಷ ವಯಸ್ಸಿನ ವಕೀಲರಾಗಿದ್ದರು. ಅವರು ಬೆಂಗಳೂರಿನ ಪ್ರತಿಷ್ಠಿತ ವಕೀಲರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು. ಉಚ್ಚ ನ್ಯಾಯಾಲಯ ಬಾರ್ ಅಸೋಸಿಯೇಷನ್ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ನ್ಯಾಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದಿದ್ದ ಇವರು ಸುಮಾರು ನಾಲ್ಕು ದಶಕಗಳ ಕಾಲ ವೃತ್ತಿ ನಡೆಸಿದ್ದಾರೆ.
