ಮೋದಿ ಜೊತೆ ಝೆಲೆನ್ಸ್ಕಿ ಮಾತುಕತೆ: ರಷ್ಯಾ -ಉಕ್ರೇನ್ ಯುದ್ಧ ಶಾಂತಿಯುತ ಇತ್ಯರ್ಥಕ್ಕೆ ಭಾರತ ಒತ್ತು

Untitled design 2025 08 11t204041.968

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸಿ ದೂರವಾಣಿ ಮೂಲಕ ಸೋಮವಾರ (ಆಗಸ್ಟ್ 11) ಮಾತುಕತೆ ನಡೆಸಿದ್ದಾರೆ. ಈ ಸಂಭಾಷಣೆಯಲ್ಲಿ ಯುಕ್ರೇನ್-ರಷ್ಯಾ ಯುದ್ಧದ ಪರಿಸ್ಥಿತಿ, ಶಾಂತಿ ಪ್ರಯತ್ನಗಳು ಮತ್ತು ಭಾರತದ ಪಾತ್ರ ಕುರಿತು ಚರ್ಚೆ ನಡೆದಿದೆ.

ಮಾತುಕತೆಯ ನಂತರ ತಮ್ಮ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಬರೆದಿರುವ ಝಲೆನ್ಸಿ, “ನಮ್ಮ ಶಾಂತಿ ಪ್ರಯತ್ನಗಳನ್ನು ಭಾರತ ಬೆಂಬಲಿಸುವುದು ಅತ್ಯಂತ ಮುಖ್ಯ. ಯುಕ್ರೇನ್‌ಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಯುಕ್ರೇನ್ ತಾನೇ ನಿರ್ಧರಿಸಬೇಕು ಎಂಬ ನಿಲುವನ್ನು ನಾನು ಪುನಃ ಒತ್ತಿ ಹೇಳಿದ್ದೇನೆ” ಎಂದು ಸ್ಪಷ್ಟಪಡಿಸಿದರು. ಅವರು ರಷ್ಯಾದ ಇಂಧನ ರಫ್ತನ್ನು ನಿರ್ಬಂಧಿಸುವ ಅಗತ್ಯವನ್ನು ಒತ್ತಿಹೇಳಿದ್ದು, “ರಷ್ಯಾ ತೈಲ ಮಾರಾಟವನ್ನು ನಿಲ್ಲಿಸಿದರೆ, ಅವರ ಯುದ್ಧ ಸಾಮರ್ಥ್ಯ ಕುಗ್ಗುತ್ತದೆ” ಎಂದು ತಿಳಿಸಿದ್ದಾರೆ.

ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಮೋದಿ, “ಯುಕ್ರೇನ್ ಸಂಘರ್ಷದ ಆರಂಭದಿಂದಲೂ ಭಾರತ ಶಾಂತಿಯುತ ಪರಿಹಾರಕ್ಕೆ ಬೆಂಬಲ ನೀಡಿದೆ. ಯುದ್ಧದ ಯಾವುದೇ ಪರಿಹಾರವು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗದಲ್ಲಿಯೇ ಸಾಧ್ಯ” ಎಂದು ಸ್ಪಷ್ಟಪಡಿಸಿದರು. ನಾವು ಯುಕ್ರೇನ್‌ನೊಂದಿಗಿನ ಸಂಬಂಧಗಳನ್ನು ಬಲಪಡಿಸಲು ಮತ್ತು ಸಾಧ್ಯವಿರುವ ಎಲ್ಲ ಸಹಾಯ ನೀಡಲು ಸಿದ್ಧರಿದ್ದೇವೆ” ಎಂದರು.

ಭಾರತವು ರಷ್ಯಾ-ಯುಕ್ರೇನ್ ಯುದ್ಧದಲ್ಲಿ ತಟಸ್ಥ ನೀತಿ ಅನುಸರಿಸುತ್ತಿದೆ. ಆದರೆ, ಯುಕ್ರೇನ್‌ಗೆ ಮಾನವೀಯ ಸಹಾಯ ಮಾಡಿದೆ ಮತ್ತು ಶಾಂತಿ ಸಂಧಾನಗಳಿಗೆ ಬೆಂಬಲ ನೀಡಿದೆ. ರಷ್ಯಾದೊಂದಿಗಿನ ವ್ಯಾಪಾರ, ವಿಶೇಷವಾಗಿ ತೈಲ ಮತ್ತು ಶಸ್ತ್ರಾಸ್ತ್ರ ಖರೀದಿ, ಭಾರತದ ರಕ್ಷಣಾ ಮತ್ತು ಶಕ್ತಿ ಸುರಕ್ಷತೆಗೆ ನಿರ್ಣಾಯಕವಾಗಿದೆ.

Exit mobile version