ಚೆನ್ನೈ ವಿಮಾನ ನಿಲ್ದಾಣ: ಮಧುರೈನಿಂದ ಚೆನ್ನೈಗೆ ಬರುತ್ತಿದ್ದ ಇಂಡಿಗೋ ವಿಮಾನದ ಮುಂಭಾಗದ ವಿಂಡ್ ಶೀಲ್ಡ್‌ನಲ್ಲಿ (ಗಾಜು) ಲ್ಯಾಂಡಿಂಗ್ ಸಮಯದಲ್ಲಿ ಬಿರುಕು ಕಾಣಿಸಿಕೊಂಡ ಘಟನೆ ನಡೆದಿದೆ. 76 ಪ್ರಯಾಣಿಕರನ್ನು ಹೊತ್ತಿದ್ದ ಈ ವಿಮಾನವನ್ನು ಪೈಲಟ್‌ಗಳು ಚಾಕಚಕ್ಯತೆ ಇಂದ ವಿಮಾನವನ್ನ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ.
ಲ್ಯಾಂಡಿಂಗ್ ಪ್ರಕ್ರಿಯೆಯ ಸಮಯದಲ್ಲಿ, ವಿಮಾನದ ಪೈಲಟ್‌ಗಳು ವಿಮಾನದ ಮುಂಭಾಗದ ವಿಂಡ್ ಶೀಲ್ಡ್‌ನಲ್ಲಿ ಬಿರುಕು ಕಾಣಿಸಿಕೊಂಡುದನ್ನು ಗಮನಿಸಿದರು. ಈ ತುರ್ತು ಪರಿಸ್ಥಿತಿಯನ್ನು ತಕ್ಷಣ ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಕರಿಗೆ ಮಾಹಿತಿ ನೀಡಲಾಯಿತು. ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿ, ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಯಿತು.
ವಿಮಾನ ಲ್ಯಾಂಡಿಂಗ್ ಆದ ನಂತರ, ಅದನ್ನು ಪ್ರತ್ಯೇಕವಾದ ಸ್ಥಳಕ್ಕೆ ಕರೆದೊಯ್ಯಲಾಯಿತು. ವಿಮಾನವನ್ನು ಪಾರ್ಕಿಂಗ್ ಮಾಡಿದ ನಂತರ ಎಲ್ಲಾ 76 ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಯಿತು. ಈ ಘಟನೆಯಿಂದ ಯಾವುದೇ ಪ್ರಯಾಣಿಕರಿಗೆ ಗಾಯ ಅಥವಾ ಅಪಾಯ ಉಂಟಾಗಿಲ್ಲ.
ವಿಮಾನದ ವಿಂಡ್ ಶೀಲ್ಡ್ ಬದಲಾಯಿಸುವ ಕಾರ್ಯ ಪ್ರಾರಂಭವಾಗಿದೆ. ಈ ಕಾರಣದಿಂದಾಗಿ, ಮಧುರೈ ಮಾರ್ಗದ ವಿಮಾನದ ಮರು ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಸಂಬಂಧಿತ ವಿಮಾನ ಸೇವೆಯು ವಿಂಡ್ ಶೀಲ್ಡ್ ದುರಸ್ತಿ ಪೂರ್ಣಗೊಳ್ಳುವವರೆಗೆ ನಿಲುಗಡೆಯಾಗಲಿದೆ ಎಂದು ತಿಳಿಸಲಾಗಿದೆ.