ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಯ ಹಾಲ್‌ಟಿಕೆಟ್ ಕಸಿದು ಕಟ್ಟಡವೇರಿ ಕುಳಿತ ಗಿಡುಗ

Siddu stalin kcr (79)

ಕೇರಳ ಸರಕಾರದ ಇಲಾಖಾ ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಯೊಬ್ಬರ ಪ್ರವೇಶ ಪತ್ರ ವನ್ನು ಗಿಡುಗವೊಂದು ಕಸಿದುಕೊಂಡು ಹಾರಿದ ಕುತೂಹಲಕಾರಿ ಘಟನೆ ಗುರುವಾರ ನಡೆದಿದೆ.

ಪರೀಕ್ಷೆ ಆರಂಭವಾಗುವ ಮೊದಲು ಹಾಲ್‌ ಟಿಕೆಟ್‌ ಅನ್ನು ಗಿಡುಗ ಕಸಿದುಕೊಂಡು ಕಟ್ಟಡದ ಮೇಲೇರಿ ಕುಳಿತುಕೊಂಡಿತು. ಪರೀಕ್ಷೆಗೆ ಹಾಜರಾಗುವುದು ಹೇಗೆ ಎಂದು ಚಿಂತಿತನಾಗಿದ್ದಅಭ್ಯರ್ಥಿಗೆ ಕೊನೆಯ ಐದು ನಿಮಿಷ ಮೊದಲು ಪವಾಡ ಸದೃಶ ರೀತಿಯಲ್ಲಿ ಗಿಡುಗ ಕೆಳಗೆ ಹಾಕಿತು. ಈ ವಿಚಿತ್ರ ವಿದ್ಯಮಾನ ಗುರುವಾರ ಬೆಳಗ್ಗೆ ಕಾಸರಗೋಡು ಸರಕಾರಿ ಶಾಲೆಯಲ್ಲಿ ನಡೆದಿದೆ.

ಸರಕಾರಿ ಅಧಿಕಾರಿಗಳಿಗೆ ನಡೆಯುವ ಇಲಾಖೆ ಪರೀಕ್ಷೆ ಬೆಳಗ್ಗೆ 7.30ಕ್ಕೆ ನಡೆಯಬೇಕಿತ್ತು. ಪರೀಕ್ಷಾರ್ಥೀಗಳು 7 ಗಂಟೆಗೆ ಶಾಲೆ ತಲುಪುತ್ತಿದ್ದಂತೆ ಅಲ್ಲಿದ್ದ ಪರೀಕ್ಷಾರ್ಥಿಯೊಬ್ಬರ ಕೈಯಲ್ಲಿದ್ದ ಹಾಲ್ ಟಿಕೆಟ್‌ ಅನ್ನು ಕಸಿದುಕೊಂಡು ಕಟ್ಟಡವೇರಿ ಕುಳಿತಿತು.

ಇದನ್ನು ಕಂಡು ಪರೀಕ್ಷಾರ್ಥಿಗಳು ಮತ್ತು ಇತರರು ಗಾಬರಿಗೊಂಡರು. ಸುಮಾರು 300 ಅಭ್ಯರ್ಥಿಗಳು ಅಲ್ಲಿದ್ದರು. ಎಲ್ಲರೂ ಸೇರಿ ಗದ್ದಲ ಮಾಡಿದರೂ ಗಿಡುಗ ಹಾಲ್‌ಟಿಕೆಟ್‌  ಕೆಳಗೆ ಹಾಕಲಿಲ್ಲ. ಪರೀಕ್ಷಾರ್ಥಿಯು, ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲವೇನೂ ಎಂಬ ಚಿಂತೆಯಲ್ಲಿದ್ದಾಗ ಕೊನೆಯ ಗಂಟೆ ಬಾರಿಸುವ ಸ್ವಲ್ಪ ಸಮಯದ ಮೊದಲು ಗಿಡುಗ ಹಾಲ್‌ಟಿಕೆಟ್ ಅನ್ನು ಕಳಗೆ ಬೀಳಿಸಿ ಹಾರಿ ಹೋಯಿತು. ಅಭ್ಯರ್ಥಿ ನಿಟ್ಟುಸಿರು ಬಿಟ್ಟು ಪರೀಕ್ಷೆ ಬರೆದು ಹಿಂತಿರುಗಿದರು.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version