ಕೇದಾರನಾಥದಲ್ಲಿ ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್ ಪತನ, ತಪ್ಪಿದ ಭಾರೀ ಅನಾಹುತ

Befunky collage 2025 05 17t141223.151

ಡೆಹ್ರಾಡೂನ್: ಋಷಿಕೇಶ ಏಮ್ಸ್‌ನಿಂದ ಕೇದಾರನಾಥಕ್ಕೆ ತುರ್ತು ವೈದ್ಯಕೀಯ ಸೇವೆಗಾಗಿ ಬಂದಿದ್ದ ಏರ್ ಆಂಬುಲೆನ್ಸ್ ಹೆಲಿಕಾಪ್ಟರ್, ಲ್ಯಾಂಡಿಂಗ್ ಸಂದರ್ಭದಲ್ಲಿ ಪತನಗೊಂಡಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರೋಗಿಯೊಬ್ಬರನ್ನು ಕರೆದೊಯ್ಯಲು ಕೇದಾರನಾಥದ ಹೆಲಿಪ್ಯಾಡ್‌ಗೆ ಇಳಿಯುತ್ತಿದ್ದ ಹೆಲಿಕಾಪ್ಟರ್, ಹೆಲಿಪ್ಯಾಡ್‌ನಿಂದ ಕೇವಲ 20 ಮೀಟರ್ ದೂರದಲ್ಲಿರುವಾಗ ಹಿಂಭಾಗ ಮುರಿದು ಕುಸಿದುಬಿಟ್ಟಿದೆ.

ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರು ವೈದ್ಯರು ಮತ್ತು ಪೈಲಟ್ ಸುರಕ್ಷಿತವಾಗಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ತಾಂತ್ರಿಕ ದೋಷದಿಂದ ಈ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ತಾಂತ್ರಿಕ ತಂಡಕ್ಕೆ ಮಾಹಿತಿ ನೀಡಲಾಗಿದ್ದು, ವಿವರವಾದ ತನಿಖೆಗೆ ಒಳಪಡಿಸಲಾಗುವುದು.

Exit mobile version