ತೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹುತಾತ್ಮರಾಗಿರುವುದು ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸಿದೆ. ಈ ರಣರೋಚಕ ದಾಳಿಯ ಬೆನ್ನಲ್ಲೇ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ತೀವ್ರ ಪ್ರತೀಕಾರದ ಪ್ರತಿಜ್ಞೆ ಮಾಡಿದ್ದು, ಮಧ್ಯಪ್ರಾಚ್ಯದಲ್ಲಿ ಮೂರನೇ ಮಹಾಯುದ್ಧದ ಕಾರ್ಮೋಡ ಆವರಿಸಿದೆ.
ಕೆಂಪು ಧ್ವಜದ ಸಂಕೇತವೇನು?
ಖಮೇನಿ ಹತ್ಯೆಯ ಬೆನ್ನಲ್ಲೇ ಇರಾನ್‌ನ ಧಾರ್ಮಿಕ ನಗರ ಖಮೇನಿಯಲ್ಲಿರುವ ಜಮ್ಕರನ್ ಮಸೀದಿಯ ಗುಮ್ಮಟದ ಮೇಲೆ ಕೆಂಪು ಧ್ವಜವನ್ನು ಹಾರಿಸಲಾಗಿದೆ. ಇದು ಕೇವಲ ಒಂದು ಧ್ವಜವಲ್ಲ, ಇದು ಸೇಡಿನ ಸಂಕೇತ. ಶಿಯಾ ಮುಸ್ಲಿಮರ ಸಂಪ್ರದಾಯದ ಪ್ರಕಾರ, ಕೆಂಪು ಧ್ವಜವು ಹುತಾತ್ಮರ ರಕ್ತಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳುವುದರ ಸಂಕೇತವಾಗಿದೆ.
“ಈ ಕೆಂಪು ಧ್ವಜವು ಇಸ್ಲಾಮಿಕ್ ಕ್ರಾಂತಿಯ ನಾಯಕನ ರಕ್ತಕ್ಕಾಗಿ ಪ್ರತೀಕಾರದ ಸಂಕೇತವಾಗಿದೆ” ಎಂದು ಸ್ಪಷ್ಟಪಡಿಸಿದೆ. ಇದಕ್ಕೂ ಮೊದಲು 2020 ರ ಜನವರಿಯಲ್ಲಿ ಅಮೆರಿಕದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಪ್ರಬಲ ಕಮಾಂಡರ್ ಖಾಸಿಮ್ ಸೊಲೈಮಾನಿ ಹತರಾದಾಗಲೂ ಈ ಮಸೀದಿಯ ಮೇಲೆ ಕೆಂಪು ಧ್ವಜ ಹಾರಿಸಲಾಗಿತ್ತು.
ಜಮ್ಕರನ್ ಮಸೀದಿಗೆ ವಿಶೇಷ ಧಾರ್ಮಿಕ ಮಹತ್ವವಿದೆ. ಶಿಯಾಗಳು ಪೂಜಿಸುವ 12 ಇಮಾಮ್‌ಗಳಲ್ಲಿ ಕೊನೆಯವರಾದ ಇಮಾಮ್ ಮಹಿ ಅವರು ಇಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ನಂಬಿಕೆಯಿದೆ. ‘1000 ಮಸೀದಿಗಳ ನಗರ’ ಎಂದೇ ಕರೆಯಲ್ಪಡುವ ಕೋಮ್‌ನಲ್ಲಿರುವ ಇದು ಅತಿದೊಡ್ಡ ಮಸೀದಿಗಳಲ್ಲಿ ಒಂದಾಗಿದೆ.
7 ಏರ್‌ಬೇಸ್‌ಗಳ ಮೇಲೆ ದಾಳಿ
ಖಮೇನಿ ಹತ್ಯೆ ಬಳಿಕ ಪರ್ಷಿಯನ್ನರ ಆಕ್ರೋಶ ಮೀರಿದೆ. ಇರಾನ್ ತನ್ನ ಹೈಪರ್ಸಾನಿಕ್ ಮಿಸೈಲ್‌ಗಳನ್ನು ಬಳಸಿ ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ಪ್ರತಿದಾಳಿ ನಡೆಸಿದೆ. ಯುಎಇಯ ಅಬುಧಾಬಿ ಮತ್ತು ದುಬೈ, ಕತಾರ್‌ನ ದೋಹಾ ಮತ್ತು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಭೀಕರ ಸ್ಫೋಟಗಳು ಸಂಭವಿಸಿವೆ.
ಇರಾನ್ ಸೇನೆ ಮಧ್ಯಪ್ರಾಚ್ಯದ ಬೇರೆ ಬೇರೆ ದೇಶಗಳಲ್ಲಿರುವ ಅಮೆರಿಕಾ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ಇರಾಕ್‌ನ ಹರೀರ್ ಏರ್‌ಬೇಸ್ ಮತ್ತು ಅಲ್ ಅಸದ್ ಏರ್‌ಬೇಸ್, ಸಿರಿಯಾದ ಅಲ್ ಟನ್ಸ್ ಗ್ಯಾರಿಸನ್ ಏರ್‌ಬೇಸ್, ಕುವೈತ್‌ನ ಅಲಿ ಅಲ್ ಸಲೇಂ ಏರ್‌ಬೇಸ್ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ. ಬಹರೇನ್‌ನ ನೌಕಾನೆಲೆ, ಕತಾರ್‌ನ ಅಲ್ ಹುದೈದ್ ಏರ್‌ಬೇಸ್ ಮತ್ತು ಯುಎಇಯ ಅಲ್ ದಫಾ ಏರ್‌ಬೇಸ್ ಕೂಡಾ ಇರಾನ್‌ನ ದಾಳಿಗೆ ತುತ್ತಾಗಿವೆ.
