ಜಾಗತಿಕವಾಗಿ ಕಾಂಡೋಮ್ ಮಾರಾಟ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, ಭಾರತದಲ್ಲಿಯೂ ಮಹಿಳಾ ಕಾಂಡೋಮ್‌ಗಳ ಬಳಕೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಸುರಕ್ಷಿತ ಲೈಂಗಿಕತೆ ಮತ್ತು ಗರ್ಭಧಾರಣೆ ನಿಯಂತ್ರಣಕ್ಕಾಗಿ ಕಾಂಡೋಮ್‌ಗಳು ಸರಳ ಮತ್ತು ಪರಿಣಾಮಕಾರಿ ಸಾಧನವಾಗಿದ್ದು, ಭಾರತದ ಮಾರುಕಟ್ಟೆಯಲ್ಲಿ ಇವುಗಳ ಬೇಡಿಕೆ ಹೆಚ್ಚುತ್ತಿದೆ.
AC Nielsen ವರದಿಯ ಪ್ರಕಾರ, 2020ರಲ್ಲಿ ಭಾರತದ ಕಾಂಡೋಮ್ ಮಾರುಕಟ್ಟೆಯು ಸುಮಾರು 180 ಮಿಲಿಯನ್ ಡಾಲರ್ ಮೌಲ್ಯದ ವಹಿವಾಟನ್ನು ಕಂಡಿತ್ತು. 2023ರಲ್ಲಿ ಈ ಮಾರುಕಟ್ಟೆಯು ಗಣನೀಯವಾಗಿ ಬೆಳೆದಿದ್ದು, 35,000 ಮಹಿಳಾ ಕಾಂಡೋಮ್‌ಗಳು ಮಾರಾಟವಾಗಿವೆ. ಒಟ್ಟಾರೆ ಕಾಂಡೋಮ್ ಮಾರುಕಟ್ಟೆಯಲ್ಲಿ ಮಹಿಳಾ ಕಾಂಡೋಮ್‌ಗಳು ಶೇ.40ರಷ್ಟು ಪಾಲನ್ನು ಹೊಂದಿವೆ, ಇದು ಭಾರತದಲ್ಲಿ ಮಹಿಳೆಯರಲ್ಲಿ ಲೈಂಗಿಕ ಆರೋಗ್ಯದ ಬಗ್ಗೆ ಜಾಗೃತಿಯ ಏರಿಕೆಯನ್ನು ಸೂಚಿಸುತ್ತದೆ.
ಮಹಿಳಾ ಕಾಂಡೋಮ್‌ಗಳನ್ನು ಮುಖ್ಯವಾಗಿ ನ್ಯಾಚುರಲ್ ಲೆಟೆಕ್ಸ್ (ರಬ್ಬರ್) ಅಥವಾ ಪಾಲಿಯುರೇಥಿನ್ ಬಳಸಿ ತಯಾರಿಸಲಾಗುತ್ತದೆ. ಈ ಕಾಂಡೋಮ್‌ಗಳು ಸುರಕ್ಷಿತ ಲೈಂಗಿಕತೆಗೆ ಸಹಾಯ ಮಾಡುವುದರ ಜೊತೆಗೆ, ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿವೆ. 95% ಪರಿಣಾಮಕಾರಿತೆಯನ್ನು ಹೊಂದಿರುವ ಮಹಿಳಾ ಕಾಂಡೋಮ್‌ಗಳು, ಲೈಂಗಿಕವಾಗಿ ಸಂಕ್ರಮಿತ ರೋಗಗಳ (STIs) ತಡೆಗಟ್ಟುವಿಕೆಯಲ್ಲೂ ಮಹತ್ವದ ಪಾತ್ರವಹಿಸುತ್ತವೆ.