ಇನ್​ಸ್ಟಾದಲ್ಲಿ ಆದ ಲವ್‌: ನೀನೇ ಬೇಕು ಎಂದು ಅಮೆರಿಕಾದಿಂದ ಭಾರತಕ್ಕೆ ಬಂದ ಸುಂದರಿ

Untitled design 2025 04 09t231908.357

ಇತ್ತೀಚಿನ ದಿನಗಳಲ್ಲಿ ಯಾವಾಗ, ಯಾರಿಗೆ, ಯಾರ ಮೇಲೆ ಪ್ರೀತಿ ಬೀಳುತ್ತದೆ ಅನ್ನೋದು ನಿಜಕ್ಕೂ ಊಹಿಸಲಾಗುವುದಿಲ್ಲ. ಪ್ರೀತಿಗೆ ವಯಸ್ಸು, ಜಾತಿ, ಧರ್ಮ, ಭಾಷೆ, ದೇಶ ಯಾವುದೂ ಅಡ್ಡಿಯಾಗದು. ಅದು ಒಂದು ವಿಶಿಷ್ಟ ಶಕ್ತಿ. ಆದರೆ ಪ್ರೀತಿಯನ್ನು ಉಳಿಸಿಕೊಂಡು ಹೋಗುವುದು ಕಷ್ಟ. ಇಂತಹ ಒಂದು ಅಪರೂಪದ ಪ್ರೇಮಕಥೆ ಇಂದು ಎಲ್ಲರ ಮನಸೆಳೆಯುತ್ತಿದೆ.

ಆಂಧ್ರಪ್ರದೇಶದ ಚಂದನ್ ಎಂಬ ಯುವಕ ಮತ್ತು ಅಮೆರಿಕಾದ ಫೋಟೋಗ್ರಾಫರ್ ಜಾಕ್ಲಿನ್ ಫೊರೆರೊ ಅವರ ನಡುವೆ ಬೆಳದ ಪ್ರೀತಿಯ ಕಥೆಯಿದು. ಎಲ್ಲವೂ ಒಂದು ಸರಳವಾದ ‘ಹಾಯ್’ ಎಂಬ ಸಂದೇಶದಿಂದ ಆರಂಭವಾಯಿತು. ಇನ್‌ಸ್ಟಾಗ್ರಾಂ ಎಂಬ ಸಾಮಾಜಿಕ ಮಾಧ್ಯಮವೇ ಇವರಿಬ್ಬರ ಪ್ರೇಮದ ಸೇತುವೆಯಾಗಿದ್ದು, ಅದು ಸದ್ಯ ಮದುವೆಯವರೆಗೂ ಬಂದು ತಲುಪಿದೆ.

ಜಾಕ್ಲಿನ್ ಫೊರೆರೊ, ಮೂಲತಃ ಫೋಟೋಗ್ರಾಫರ್ ಆಗಿದ್ದು, ಚಂದನ್ ಅವರ ಪ್ರೊಫೈಲ್‌ ನೋಡಿ ಲವ್‌ ಮಾಡಲು ಶುರು ಮಾಡಿದರು. ಚಂದನ್ ಸಹ ಸಹಜವಾಗಿ ಉತ್ತರಿಸುತ್ತಲೇ ಈ ಸಂಬಂಧ ಪ್ರೀತಿಯಾಗಿ ಬೆಳೆಯಿತು. ಹೀಗೆ 14 ತಿಂಗಳುಗಳ ಕಾಲ ನಿರಂತರವಾಗಿ ಮಾತನಾಡುತ್ತಾ, ಭಾವನೆಗಳನ್ನು ಹಂಚಿಕೊಳ್ಳುತ್ತಾ, ಅಂತಿಮವಾಗಿ ಇಬ್ಬರೂ ಈ ಸಂಬಂಧವನ್ನು ಹೊಸ ಹಂತಕ್ಕೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಜಾಕ್ಲಿನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಒಂದು ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. “14 ತಿಂಗಳು ಒಟ್ಟಿಗೆ, ಈಗ ಹೊಸ ಅಧ್ಯಾಯಕ್ಕೆ ಸಿದ್ಧರಾಗಿದ್ದೇವೆ” ಎಂಬ ಹೃದಯಸ್ಪರ್ಶಿ ಮಾತುಗಳೊಂದಿಗೆ ಒಂದು 45 ಸೆಕೆಂಡುಗಳ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರಿಬ್ಬರ ನಡುವಿನ ಸುಂದರ ಕ್ಷಣಗಳನ್ನು ಸೆರೆಹಿಡಿದಿದ್ದು, ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಸಾವಿರಾರು ಮಂದಿ ಇದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಪ್ರೀತಿಗೆ ಮಿತಿಯಿಲ್ಲ’, ‘ಎಂಥಾ ಚೆಂದದ ಜೋಡಿ’, ‘ಭಾಗ್ಯವಂತರಾದಿರಿ’ ಎಂಬಂತೆ ನಾನಾ ರೀತಿಯ ಕಾಮೆಂಟ್‌ಗಳು ಹರಿದುಬರುತ್ತಿವೆ.

Exit mobile version