ಹಾಂಗ್‌ಕಾಂಗ್ ರನ್‌ವೇಯಿಂದ ಸಮುದ್ರಕ್ಕೆ ಜಾರಿದ ವಿಮಾನ; ಇಬ್ಬರು ಸಾವು

Untitled design 2025 10 20t085846.453

ಹಾಂಗ್ ಕಾಂಗ್: ಹಾಂಗ್ ಕಾಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಗಿನ ಜಾವ ಘೋರ ವಿಮಾನ ಅಪಘಾತ ಸಂಭವಿಸಿದೆ. ದುಬೈನಿಂದ ಬರುತ್ತಿದ್ದ ಟರ್ಕಿಶ್ ಸರಕು ವಿಮಾನವೊಂದು ಚೇತಾರನ್ ವೇಯಿಂದ ಹಾರಿದ ತಕ್ಷಣವೇ ಸಮುದ್ರದ ಕಡೆಗೆ ಜಾರಿ ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ವಿಮಾನ ನಿಲ್ದಾಣದ ನೆಲದ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.

ಅಪಘಾತದ ವಿವರ
ಅಪಘಾತ ಸೋಮವಾರ ಬೆಳಗ್ಗೆ ಸುಮಾರು 3:50 ರ ಸಮಯದಲ್ಲಿ ಸಂಭವಿಸಿದೆ. ಟರ್ಕಿಶ್ ವಾಹಕ ಏರ್‌ಎಸಿಟಿ ಎಮಿರೇಟ್ಸ್ ಸೈಕಾರ್ಗೋ ನಿರ್ವಹಿಸುತ್ತಿದ್ದ ಬೋಯಿಂಗ್ 747 ಸರಕು ವಿಮಾನವು ದುಬೈನ ಅಲ್ ಮಕೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಿ ಹಾಂಗ್ ಕಾಂಗ್ ತಲುಪಿತ್ತು. ವಿಮಾನವು ಉತ್ತರ ರನ್‌ವೇಯಿಂದ ಹಾರಿದ ತಕ್ಷಣವೇ ನಿಯಂತ್ರಣ ಕಳೆದುಕೊಂಡು ಸಮುದ್ರದ ಕಡೆಗೆ ಜಾರಿತು.

ಹಾಂಗ್ ಕಾಂಗ್ ಪೊಲೀಸ್ ಪ್ರಕಾರ, ಅಪಘಾತದಲ್ಲಿ ವಿಮಾನ ನಿಲ್ದಾಣದ ನೆಲದ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತಗೊಂಡ ವಿಮಾನದಲ್ಲಿದ್ದ ನಾಲ್ವರು ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪ್ರಸ್ತುತ ಆರೋಗ್ಯ ಸ್ಥಿತಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

Exit mobile version