ಅಮೆರಿಕದ ಸೇನೆಯ ಅತ್ಯಂತ ರಹಸ್ಯ ಮತ್ತು ಶಕ್ತಿಶಾಲಿ ವಿಮಾನ ಬೋಯಿಂಗ್ ಇ-48 ನೈಟ್ ವಾಚ್ (E-4B) ನಿಂದ ಒಂದು ವಿಲಕ್ಷಣ 12 ಅಕ್ಷರಗಳ ರೇಡಿಯೋ ಸಂದೇಶ ರವಾನೆಯಾಗಿದೆ. ಈ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಜನರಲ್ಲಿ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.
ಏನಿದು ಡೂಮ್ಸ್ ಡೇ ವಿಮಾನ?
ಬೋಯಿಂಗ್ ಸಂಸ್ಥೆಯು ನಿರ್ಮಿಸಿದ ಇ-48 ನೈಟ್ ವಾಚ್ (E-4B) ವಿಮಾನವನ್ನು ಅಮೆರಿಕದಲ್ಲಿ ಡೂಮ್ಸ್ ಡೇ ಪ್ಲೇನ್ ಎಂದು ಕರೆಯಲಾಗುತ್ತದೆ. ಇದು ಅಣ್ವಸ್ತ್ರ ದಾಳಿ ಅಥವಾ ದೊಡ್ಡ ದುರಂತ ಸಂಭವಿಸಿದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರು ಮತ್ತು ಸರ್ಕಾರದ ಪ್ರಮುಖ ವ್ಯಕ್ತಿಗಳನ್ನು ಸುರಕ್ಷಿತವಾಗಿ ಹೊತ್ತು ಸಾಗಿಸುವ ವಿಮಾನವಾಗಿದೆ.
ವಿಮಾನದ ವಿಶೇಷತೆಗಳು:
- ಸುಮಾರು 48 ಗಂಟೆಗಳ ಕಾಲ ಇಂಧನ ಮರುಭರ್ತಿ ಮಾಡದೆಯೇ ಆಕಾಶದಲ್ಲಿ ಸಂಚರಿಸಬಲ್ಲದು.
- ಅಣು ಬಾಂಬ್ ದಾಳಿ ಸಮಯದಲ್ಲೂ ಆಗಸದಲ್ಲೇ 2 ದಿನಗಳ ಕಾಲ ಉಳಿಯಬಲ್ಲ ಸಾಮರ್ಥ್ಯ.
- ಆಗಸದಿಂದಲೇ ಅಮೆರಿಕ ಸರ್ಕಾರದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಸಹಕಾರಿ.
- ಅತ್ಯಾಧುನಿಕ ಸಂವಹನ ಸೌಕರ್ಯಗಳು – ಇಂಟರ್ನೆಟ್, ಫೋನ್, ರೇಡಿಯೋ ಎಲ್ಲವೂ ಇದೆ.
ಘಟನೆಯ ವಿವರ : ಈ ವಿಮಾನವು ಅಮೆರಿಕ ಸೇನೆಯ ಪ್ರಧಾನ ಕಚೇರಿ ಪೆಂಟಗಾನ್‌ಗೆ 12 ಅಕ್ಷರಗಳ ರಹಸ್ಯ ರೇಡಿಯೋ ಸಂದೇಶವನ್ನು ರವಾನಿಸಿದೆ. ಸಂದೇಶದ ಪೂರ್ಣಾಂಶ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಆದರೆ ಈ ಅಪರೂಪದ ಸಂದೇಶವು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಏಕೆ ಡೂಮ್ಸ್ ಡೇ ವಿಮಾನ?
ಈ ವಿಮಾನವು ಅಣ್ವಸ್ತ್ರ ಯುದ್ಧ ಅಥವಾ ದೊಡ್ಡ ದುರಂತದ ಸಮಯದಲ್ಲಿ ಅಮೆರಿಕದ ಅಧ್ಯಕ್ಷರು ಮತ್ತು ಉನ್ನತ ಅಧಿಕಾರಿಗಳನ್ನು ಸುರಕ್ಷಿತವಾಗಿ ರಕ್ಷಿಸುವ ಮತ್ತು ಆಗಸದಿಂದಲೇ ದೇಶದ ನಿರ್ವಹಣೆ ಮಾಡುವ ಉದ್ದೇಶದಿಂದ ನಿರ್ಮಿಸಲಾಗಿದೆ. ಭೂಮಿಯ ಮೇಲೆ ಯಾವುದೇ ದುರಂತ ಸಂಭವಿಸಿದರೂ ಈ ವಿಮಾನ ಆಕಾಶದಲ್ಲೇ ಸುರಕ್ಷಿತವಾಗಿ ಉಳಿಯುತ್ತದೆ.
