ಕೆಮ್ಮಿನ ಸಿರಪ್‌ನಿಂದ ರಾಜಸ್ಥಾನ, ಮಧ್ಯಪ್ರದೇಶದಲ್ಲಿ 8 ಮಕ್ಕಳ ದುರ್ಮರಣ

Untitled design 2025 10 03t132908.715

ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕೆಮ್ಮಿನ ಸಿರಪ್ ಸೇವಿಸಿದ ಒಟ್ಟು ಎಂಟು ಮಕ್ಕಳು ಮೃತಪಟ್ಟಿದ್ದಾರೆ. ಘಟನೆಗಳಿಂದ ಪೋಷಕರಲ್ಲಿ ಆತಂಕ ಹರಡಿದ್ದು, ಔಷಧವು ವಿಷಯುಕ್ತವಾಗಿರಬಹುದು ಎಂಬ ಅನುಮಾನವನ್ನುಹುಟ್ಟಿಸಿವೆ. ರಾಜಸ್ಥಾನದಲ್ಲಿ ಸಿರಪ್ ಸೇವಿಸಿದ ಒಬ್ಬ ಹಿರಿಯ ವೈದ್ಯರೂ ಪ್ರಜ್ಞಾಹೀನನಾಗಿದ್ದಾರೆ.

ರಾಜ್ಯವಾರು ಮರಣಗಳ ವಿವರ

ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಸೆಪ್ಟೆಂಬರ್ 4ರಿಂದ 26ರ ನಡುವೆ ಎರಡು ರೀತಿಯ ಕೆಮ್ಮಿನ ಸಿರಪ್‌ಗಳನ್ನು ಸೇವಿಸಿದ ಒಂದರಿಂದ ಏಳು ವರ್ಷದ ವಯೋಸ್ಸಿನ ಆರು ಮಕ್ಕಳು ಕಿಡ್ನಿ ಸಂಬಂಧಿತ ತೀವ್ರ ಸಮಸ್ಯೆಗಳು ಮತ್ತು ಅನುರಿಯಾ (ಮೂತ್ರ ಉತ್ಪಾದನೆ ಕೊರತೆ)ಯಿಂದ ಬಳಲಿ ಮರಣಹೊಂದಿದ್ದಾರೆ. ಈ ಮಕ್ಕಳಿಗೆ ನೀಡಲಾಗಿದ್ದ ಸಿರಪ್ ಸಾಮಾನ್ಯವಾಗಿತ್ತು ಎಂಬುದು ಔಷಧಗಳ ವಿಶ್ಲೇಷಣೆಯಿಂದ ದೃಢಪಟ್ಟಿದೆ. ಈ ಪರಿಣಾಮವಾಗಿ, ಮಧ್ಯಪ್ರದೇಶ ಸರ್ಕಾರವು ಈ ಔಷಧಗಳನ್ನು ಶಿಫಾರಸು ಮಾಡದಂತೆ ವೈದ್ಯರಿಗೆ ಸೂಚನೆ ನೀಡಿದೆ ಮತ್ತು ಅವುಗಳ ಮಾರಾಟ ಮತ್ತು ಬಳಕೆಯ ಮೇಲೆ ನಿರ್ಬಂಧವನ್ನು ವಿಧಿಸಿದೆ.

ರಾಜಸ್ಥಾನದಲ್ಲಿ ಬಯಾನಾ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾಕ್ಟರ್ ತಾರಾಚಂದ್ ಯೋಗಿ ಸೆಪ್ಟೆಂಬರ್ 24ರಂದು ಈ ಸಿರಪ್‌ ಸೇವಿಸಿದರು. ಆದರೆ, ಸೇವನೆಯ ಎಂಟು ಗಂಟೆಗಳ ನಂತರ ಅವರು ತಮ್ಮ ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದರು. ಇದರಿಂದ ಔಷಧದಲ್ಲಿ ವಿಷವಿದೆ ಎಂದು ಖಚಿತವಾಯಿತು.

ಹೀಗಾಗಿ ರಾಜಸ್ಥಾನ ಸರ್ಕಾರವು ಅನುಮಾನಾಸ್ಪದ ಸಿರಪ್‌ನ 22 ಬ್ಯಾಚ್‌ಗಳನ್ನು ನಿಷೇಧಿಸಿದೆ ಮತ್ತು ಮಾರುಕಟ್ಟೆಯಲ್ಲಿರುವ ಎಲ್ಲಾ ದಾಸ್ತಾನುಗಳನ್ನು ವಾಪಸ್ ತರಿಸುವ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವು ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆದೇಶಿಸಿದೆ. ಅಧಿಕಾರಿಗಳು ಬಹಿರಂಗಪಡಿಸಿದ ಪ್ರಕಾರ, ಜುಲೈ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ರಾಜ್ಯದಾದ್ಯಂತ ಈ ಸಿರಪ್‌ನ 1.33 ಲಕ್ಷ (133,000) ಬಾಟಲಿಗಳನ್ನು ವಿತರಿಸಲಾಗಿತ್ತು. ಇವುಗಳಲ್ಲಿ 8,200 ಬಾಟಲಿಗಳು ಜೈಪುರದ ಸವಾಯ್ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಇನ್ನೂ ಉಳಿದಿವೆ ಎಂದು ತಿಳಿದುಬಂದಿದೆ

Exit mobile version