ಬಾಲಕಿ ಮೇಲೆ ಅ*ತ್ಯಾಚಾರವೆಸಗಿ ಕೊಂದು, ಪಕ್ಕದ ಮನೆಯ ಕಾರಿನಲ್ಲಿ ಶವವಿಟ್ಟ ಸಂಬಂಧಿ

Siddu stalin kcr (58)

ದೇಶದಲ್ಲಿ ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದು ನಾಗರಿಕ ಸಮಾಜವನ್ನು ಚಿಂತೆಗೆ ದೂಡುತ್ತಿದೆ. ಮಕ್ಕಳನ್ನು ಹೊರಗಡೆ ಕಳಿಸುವುದು ಹೇಗೆ ಎಂಬ ಭೀತಿ ಪೋಷಕರಲ್ಲಿ ಹೆಚ್ಚಾಗಿದೆ.

ವ್ಯಕ್ತಿಯೊಬ್ಬ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಪಕ್ಕದ ಮನೆಯ ಕಾರಿನಲ್ಲಿ ಶವವಿಟ್ಟಿರುವ ಘಟನೆ ಛತ್ತೀಸ್​ಗಢದ ದುರ್ಗ್​ನಲ್ಲಿ ನಡೆದಿದೆ. ಆಕೆಯ ಸಂಬಂಧಿಯೇ ಅತ್ಯಾಚಾರವೆಸಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅತ್ಯಾಚಾರವೆಸಗಿ ಕೊಲೆ ಮಾಡಿ ನಂತರ ಶವವನ್ನು ಕಾರಿನಲ್ಲಿ ಬಚ್ಚಿಟ್ಟು ಬೀಗ ಹಾಕಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ನವರಾತ್ರಿ ಹಬ್ಬದ ಭಾಗವಾಗಿ ಆಯೋಜಿಸಲಾಗಿದ್ದ ಆಚರಣೆಯ ನಂತರ ಏಪ್ರಿಲ್ 5 ರಂದು ಅಪ್ರಾಪ್ತ ಬಾಲಕಿ ನಾಪತ್ತೆಯಾಗಿದ್ದಳು ಎನ್ನಲಾಗಿದೆ. ಕನ್ಯಾ ಭೋಜನದಲ್ಲಿ ಭಾಗವಹಿಸಲು ಮಗು ತನ್ನ ಅಜ್ಜಿಯ ಮನೆಗೆ ಭೇಟಿ ನೀಡಿತ್ತು, ಆದರೆ ಮನೆಗೆ ಹಿಂತಿರುಗಲೇ ಇಲ್ಲ ಎಂದು  ತಿಳಿದುಬಂದಿದೆ.

ಆಕೆಯ ಕುಟುಂಬವು ಪೊಲೀಸರಿಗೆ ನಾಪತ್ತೆ ದೂರು ನೀಡುವ ಮೊದಲು ತೀವ್ರ ಹುಡುಕಾಟವನ್ನು ಪ್ರಾರಂಭಿಸಿತ್ತು ಎಂದು ದುರ್ಗ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಖನಂದನ್ ರಾಥೋಡ್ ಮಾಹಿತಿ ನೀಡಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

 

 

Exit mobile version