ಜಾತ್ರೆಯಲ್ಲಿ ಉಯ್ಯಾಲೆ ಮುರಿದು ಬಾಲಕಿ ಸಾವು, ಐವರಿಗೆ ಗಾಯ

Untitled design 2025 11 06t091334.971

ಬುಲಂದ್‌ಶಹರ್ (ಉ.ಪ್ರ): ಕಾರ್ತಿಕ ಪೂರ್ಣಿಮಾ ಹಬ್ಬದ ಸಂಭ್ರಮದಲ್ಲಿ ಒಂದು ಘೋರ ದುರಂತ ನಡೆದಿದೆ. ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ರಾಮಘಾಟ್ ಗ್ರಾಮದ ಕಾರ್ತಿಕ ಪೂರ್ಣಿಮಾ ಜಾತ್ರೆಯಲ್ಲಿ ಉಯ್ಯಾಲೆಯೊಂದು ಹಠಾತ್‌ನೆ ಕುಸಿದು ಬಿದಿದ್ದು, ಈ ದುರಂತದಲ್ಲಿ ಆರು ವರ್ಷದ ಬಾಲಕಿ ಸಾವನ್ನಪ್ಪಿದ್ದಾರೆ. ಇನ್ನೂ ಐದು ಮಂದಿ ಗಾಯಗೊಂಡಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ತೇಜ್‌ವೀರ್ ಸಿಂಗ್ ಅವರು ನೀಡಿದ ಮಾಹಿತಿ ಪ್ರಕಾರ, ಸಂಜೆ ಸುಮಾರು 6 ಗಂಟೆ ಸುಮಾರಿಗೆ ಜಾತ್ರೆಯಲ್ಲಿ ಸಣ್ಣ ಉಯ್ಯಾಲೆಯು ಆಕ್ಸಲ್ ಬೇರಿಂಗ್ ಹಠಾತ್‌ನೆ ಕಟ್‌ ಆಗಿ ಮುರಿದು ಬಿದ್ದಿದೆ. ಉಯ್ಯಾಲೆಯ ಭಾಗಗಳು ಚದುರಿ, ಹತ್ತಿರದಲ್ಲಿ ನಿಂತಿದ್ದ ಹಿಮಾಂಶಿ ಎಂಬ ಆರು ವರ್ಷದ ಬಾಲಕಿಯ ಮೇಲೆ ಬಿದ್ದಿದೆ. ಅವಳಿಗೆ ತಲೆ ಮತ್ತು ಇತರ ಭಾಗಗಳಲ್ಲಿ ಗಂಭೀರ ಗಾಯಗಳಾಗಿದ್ದವು. ಹಲವರಿಗೆ ಗಂಭೀರ ಗಾಯಗಳಾಗಿದ್ದವು. ಈ ಉಯ್ಯಾಲೆಯಲ್ಲಿ ಐವರು ಮಕ್ಕಳು ಮತ್ತು ಯುವಕರು ಇದ್ದರು ಎಂದು ಹೇಳಲಾಗಿದೆ.

ಘಟನೆಯ ನಂತರ ಸ್ಥಳಕ್ಕೆ ತಕ್ಷಣವೇ ಪೊಲೀಸರು ಮತ್ತು ರಕ್ಷಣಾ ತಂಡಗಳು ಆಗಮಿಸಿದವು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯಕೀಯ ಪರೀಕ್ಷೆಯ ನಂತರ ಹಿಮಾಂಶಿಯನ್ನು ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು. ಇತರ ಐವರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ರಾಮಘಾಟ್ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಇಲಾಖೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಿಸಿ ಹಾಲಿನ ಪಾತ್ರೆಗೆ ಬಿದ್ದು 17 ತಿಂಗಳ ಪುಟ್ಟ ಮಗು ಸಾ*ವು!

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಶಾಲೆಯೊಂದರಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಶಾಲೆಯ ಅಡುಗೆಮನೆಯಲ್ಲಿ ಬಿಸಿಯಾದ ಹಾಲಿನ ಪಾತ್ರೆಗೆ ಬಿದ್ದು 17 ತಿಂಗಳ ಪುಟ್ಟ ಬಾಲಕಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಈ ದಾರುಣ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಣ್ಣೀರು ತರಿಸಿದೆ.

ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣವೇಣಿ ಎಂಬ ಮಹಿಳೆಯ ಮಗಳು ಅಕ್ಷಿತಾ ಮತ್ತು ಮೃತ ಬಾಲಕಿ. ಮನೆಯಲ್ಲಿ ಯಾರೂ ಇಲ್ಲದ ಕಾರಣ, ಕೃಷ್ಣವೇಣಿ ತನ್ನ 17 ತಿಂಗಳ ಮಗಳನ್ನು ಕೆಲಸಕ್ಕೆ ಕರೆದುಕೊಂಡು ಬಂದಿದ್ದರು. ಆದರೆ, ಆ ದಿನ ಆ ಪುಟ್ಟ ಬಾಲಕಿಯ ಕೊನೆಯ ದಿನವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಘಟನೆ ನಡೆದಿದ್ದು ಹೇಗೆ?

ಕೃಷ್ಣವೇಣಿ ತಮ್ಮ ಕೆಲಸದಲ್ಲಿ ನಿರತರಾಗಿದ್ದಾಗ, ಪುಟ್ಟ ಮಗು ಅಕ್ಷಿತಾ ಅಡುಗೆಮನೆಯ ಸುತ್ತ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಒಂದು ಬೆಕ್ಕು ಅಡುಗೆಮನೆಯೊಳಗೆ ಪ್ರವೇಶಿಸಿದೆ. ಆ ಬೆಕ್ಕನ್ನು ಹಿಡಿಯುವ ಹುರುಪಿನಲ್ಲಿ ಅಕ್ಷಿತಾ ಅದರ ಹಿಂದೆ ಓಡಿದ್ದಾಳೆ.

ಬೆಕ್ಕು ಬಿಸಿಯಾದ ಹಾಲು ತಣ್ಣಗಾಗಲು ಇಡಲಾಗಿದ್ದ ದೊಡ್ಡ ಪಾತ್ರೆಯ ಬಳಿಯಿಂದ ಓಡಿಹೋಗಿದೆ. ಬೆಕ್ಕನ್ನು ಹಿಂಬಾಲಿಸಿಕೊಂಡು ಬಂದ ಅಕ್ಷಿತಾಳ ಕಾಲಿಗೆ ಆ ಪಾತ್ರೆ ತಾಗಿ ಬಿಸಿ ಹಾಲು ತುಂಬಿದ್ದ ಪಾತ್ರೆಯೊಳಗೆ ಬಿದ್ದಿದ್ದಾಳೆ.

ದೊಡ್ಡ ಪಾತ್ರೆಯೊಳಗೆ ಬಿದ್ದ ಮಗು ಹೊರಬರಲು ಸಾಧ್ಯವಾಗದೆ ನೋವಿನಿಂದ ಜೋರಾಗಿ ಕಿರುಚಾಡಿದೆ. ಮಗಳ ಕೂಗು ಕೇಳಿದ ತಕ್ಷಣ ಕೃಷ್ಣವೇಣಿ ಓಡಿಬಂದು ಆಕೆಯನ್ನು ಪಾತ್ರೆಯಿಂದ ಹೊರ ಎತ್ತಿದ್ದಾಳೆ.

ಚಿಕಿತ್ಸೆ ಫಲಕಾರಿಯಾಗದೆ ಸಾವು

ಬಿಸಿಯಾದ ಹಾಲು ತಾಗಿ ಪುಟ್ಟ ಅಕ್ಷಿತಾಳ ದೇಹದ ಬಹುಭಾಗ ಸುಟ್ಟು ಹೋಗಿತ್ತು. ಕೂಡಲೇ ಆಕೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು, ಬಾಲಕಿಯ ಮೈ ಸುಟ್ಟುಹೋಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.

Exit mobile version