ಕೇಂದ್ರ ಸಚಿವನ ಮೊಮ್ಮಗಳನ್ನ ಗುಂಡಿಕ್ಕಿ ಕೊಂದ ಗಂಡ

Siddu stalin kcr (63)

ಕೇಂದ್ರ ಸಚಿವ ಜಿತನ್ ರಾಮ್ ಮಾಂಜಿ ಅವರ ಮೊಮ್ಮಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.  ಬಿಹಾರದ ಗಯಾದಲ್ಲಿ ನಿನ್ನೆ (ಏಪ್ರಿಲ್ 9) ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಷ್ಮಾ ದೇವಿ ಹತ್ಯೆಯಾದವರು. ಗಯಾದ ಆರ್ತಿ ಬ್ಲಾಕ್‌ನಲ್ಲಿ ಬರುವ ತೆತುವ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಂಡನೇ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ ಎಂದು ವರದಿ ಆಗಿದೆ. ಸುಷ್ಮಾ ದೇವಿ ತನ್ನ ಮಕ್ಕಳು ಹಾಗೂ ಸೋದರಿ ಪೂನಂ ಕುಮಾರಿ ಜೊತೆ ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ.

ಸುಷ್ಮಾ ಸಹೋದರಿ ಪೂನಂ ಪ್ರಕಾರ, ಸುಷ್ಮಾ ಅವರ ಪತಿ ರಮೇಶ್ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದ ನಂತರ ಅವರಿಬ್ಬರ ನಡುವೆ ಜಗಳವಾಯಿತು. ಜಗಳದ ಸಮಯದಲ್ಲಿ ರಮೇಶ್ ದೇಶೀಯ ಪಿಸ್ತೂಲ್ ತೆಗೆದುಕೊಂಡು ಪೂನಂ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.

ಘಟನೆ ನಡೆಯುವ ವೇಳೆ ಪೂನಾಂ ಹಾಗೂ ಸುಷ್ಮಾಳ ಮಕ್ಕಳು ಮನೆಯ ಇನ್ನೊಂದು ಕೋಣೆಯಲ್ಲಿದ್ದರು. ಗುಂಡಿನ ಸದ್ದು ಕೇಳಿ ಓಡಿ ಬಂದಾಗ ಸುಷ್ಮಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದ್ದು, ಅಲ್ಲೇ ಆಕೆಯ ಜೀವ ಹೋಗಿದೆ ಎಂದು ಸುಷ್ಮಾ ಸಹೋದರಿ ಹೇಳಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಸಚಿವ ಜಿತನ್ ರಾಮ್‌ ಮಾಂಝಿ ಇನ್ನು ಪ್ರತಿಕ್ರಿಯಿಸಿಲ್ಲ, ಜಿತನ್ ರಾಮ್ ಮಾಂಝಿ ಅವರು ಬಿಹಾರದ ಗಯಾ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಬಿಹಾರದಲ್ಲಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಮಿತ್ರ ಪಕ್ಷವಾದ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಸ್ಥಾಪಕರೂ ಆಗಿದ್ದಾರೆ.

ಆತ ಪಾಟ್ನಾದಿಂದ ಬಂದಿದ್ದ, ಆತನಿಗೆ ಗಲ್ಲು ಶಿಕ್ಷೆಯಾಗಬೇಕು, ನನ್ನ ಸಹೋದರಿಯನ್ನು ಕೊಂದ ಆತನನ್ನು ಗಲ್ಲಿಗೇರಿಸಬೇಕು ಎಂದು ಸುಷ್ಮಾಳ ಸಹೋದರಿ ಪೂನಾಂ ಆಗ್ರಹಿಸಿದ್ದಾರೆ.  ಗುಂಡಿನ ಸದ್ದು ಕೇಳಿ ಸ್ಥಳೀಯ ನಿವಾಸಿಗಳು ಕೂಡ ಸ್ಥಳಕ್ಕೆ ಜಮಾಯಿಸಿದ್ದರು. ಸುಷ್ಮಾ  ಬಿಹಾರ ಮಹಾದಲಿತ ವಿಕಾಸ್ ಮಿಷನ್ ಅಡಿಯಲ್ಲಿ ಅಭಿವೃದ್ಧಿ ಉಪಕ್ರಮಗಳಿಗಾಗಿ ರಾಜ್ಯ ಸರ್ಕಾರ ಮತ್ತು ಸಮಾಜದ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುವ ವಿಕಾಸ್ ಮಿತ್ರವಾಗಿ ಕೆಲಸ ಮಾಡುತ್ತಿದ್ದರೆ  ಆಕೆಯ ಪತಿ ರಮೇಶ್ ಪಾಟ್ನಾದಲ್ಲಿ ಟ್ರಕ್ ಓಡಿಸುತ್ತಿದ್ದರು ಎನ್ನಲಾಗಿದೆ.  

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

 

 

Exit mobile version