ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ‘ಅಟಲ್ ಕ್ಯಾಂಟೀನ್’: ಕೇವಲ 5 ರೂ.ಗೆ ಹೊಟ್ಟೆ ತುಂಬ ಊಟ!

Untitled design 2025 12 25T205938.486

ನವದೆಹಲಿ: “5 ರೂಪಾಯಿಗೆ ಏನು ಸಿಗುತ್ತದೆ?” ಎಂಬ ಪ್ರಶ್ನೆಗೆ ಈಗ ದೆಹಲಿ ಸರ್ಕಾರ ಸ್ಪಷ್ಟ ಉತ್ತರ ನೀಡಿದೆ. ಹೊಟ್ಟೆತುಂಬ ಪೌಷ್ಟಿಕ ಊಟ ದೊರಯಲಿದ್ದು, ಕರ್ನಾಟಕದ ಜನಪ್ರಿಯ ಇಂದಿರಾ ಕ್ಯಾಂಟೀನ್ ಮಾದರಿಯನ್ನು ಆಧಾರವಾಗಿ ಮಾಡಿಕೊಂಡು, ದೆಹಲಿಯ ಬಿಜೆಪಿ ಸರ್ಕಾರ ‘ಅಟಲ್ ಕ್ಯಾಂಟೀನ್’ ಯೋಜನೆಗೆ ಅಧಿಕೃತ ಚಾಲನೆ ನೀಡಿದೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನದ ಸ್ಮರಣಾರ್ಥವಾಗಿ ಈ ಯೋಜನೆಯನ್ನು ಆರಂಭಿಸಲಾಗಿದ್ದು, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಗುರುವಾರ ನಗರದಲ್ಲಿ ಮೊದಲ ಹಂತದ 45 ಅಟಲ್ ಕ್ಯಾಂಟೀನ್‌ಗಳನ್ನು ಉದ್ಘಾಟಿಸಿದರು. ಒಟ್ಟು 100 ಕ್ಯಾಂಟೀನ್‌ಗಳನ್ನು ಆರಂಭಿಸುವ ಗುರಿ ಸರ್ಕಾರದ ಮುಂದಿದ್ದು, ಇದು ಬಡವರು, ದಿನಗೂಲಿ ಕಾರ್ಮಿಕರು ಹಾಗೂ ನಿರಾಶ್ರಿತರಿಗೆ ದೊಡ್ಡ ಆಸರೆಯಾಗಲಿದೆ.

“ಯಾರೂ ಹಸಿವಿನಿಂದ ಮಲಗಬಾರದು”: ಮುಖ್ಯಮಂತ್ರಿ ಸಂದೇಶ

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ರೇಖಾ ಗುಪ್ತಾ, “ಅಟಲ್ ಕ್ಯಾಂಟೀನ್ ದೆಹಲಿಯ ಆತ್ಮವಾಗಲಿದೆ. ನಮ್ಮ ನಗರದಲ್ಲಿ ಯಾರೂ ಹಸಿವಿನಿಂದ ಮಲಗಬಾರದು ಎಂಬುದೇ ಸರ್ಕಾರದ ಗುರಿ. ಇದು ಕೇವಲ ಆಹಾರ ಯೋಜನೆಯಲ್ಲ, ಬಡವರಿಗೆ ಗೌರವಯುತ ಬದುಕು ನೀಡುವ ಸಾಮಾಜಿಕ ಪ್ರಯತ್ನ,”
ಎಂದು ತಿಳಿಸಿದರು.

ಅಟಲ್ ಕ್ಯಾಂಟೀನ್‌ಗಳ ಪ್ರಮುಖ ವಿಶೇಷತೆಗಳು

‘ಅಟಲ್ ಕ್ಯಾಂಟೀನ್’ ಯೋಜನೆಯಡಿ ಪ್ರತಿ ಪ್ಲೇಟ್ ಊಟಕ್ಕೆ ಕೇವಲ 5 ರೂಪಾಯಿ ಮಾತ್ರ. ಈ ಕ್ಯಾಂಟೀನ್‌ಗಳು ನಗರದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರತಿ ಕೇಂದ್ರದಲ್ಲಿ ಪ್ರತಿದಿನ ಸುಮಾರು 500 ಜನರಿಗೆ ಊಟ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.

ಸಮಯ

ಈ ಸಮಯದಲ್ಲಿ ಸ್ವಚ್ಛ, ಪೌಷ್ಟಿಕ ಮತ್ತು ತಾಜಾ ಆಹಾರವನ್ನು ವಿತರಿಸಲಾಗುತ್ತದೆ.

5 ರೂಪಾಯಿಗೆ ಸಿಗುವ ಊಟದ ಮೆನು ಏನು?

ಕೇವಲ 5 ರೂ.ಗೆ ನೀಡಲಾಗುವ ಅಟಲ್ ಕ್ಯಾಂಟೀನ್ ಥಾಲಿ ಸಂಪೂರ್ಣ ಸಮತೋಲಿತ ಆಹಾರವಾಗಿದ್ದು, ಇದರಲ್ಲಿ ,

ಇವೆಲ್ಲವೂ ಸೇರಿ ಬಡವರು ಮತ್ತು ಕಾರ್ಮಿಕರಿಗೆ ಕಡಿಮೆ ದರದಲ್ಲಿ ಆರೋಗ್ಯಕರ ಆಹಾರ ಒದಗಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಡಿಜಿಟಲ್ ವ್ಯವಸ್ಥೆ ಮತ್ತು ನಿಗಾ

ಪಾರದರ್ಶಕತೆ ಮತ್ತು ದುರುಪಯೋಗ ತಡೆಯಲು ಸರ್ಕಾರ ಡಿಜಿಟಲ್ ಟೋಕನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಹಳೆಯ ಕೂಪನ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಪ್ರತಿ ಕ್ಯಾಂಟೀನ್‌ನಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ‘ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿ’ (DUSIB) ಮೂಲಕ ನೇರ ಮೇಲ್ವಿಚಾರಣೆ ನಡೆಯಲಿದೆ.

ಎಲ್ಲೆಲ್ಲಿ ಲಭ್ಯ?

ಮೊದಲ ಹಂತದಲ್ಲಿ 45 ಸ್ಥಳಗಳಲ್ಲಿ ಅಟಲ್ ಕ್ಯಾಂಟೀನ್ ಸೇವೆ ಲಭ್ಯವಿದೆ. ಪ್ರಮುಖವಾಗಿ ಆರ್.ಕೆ. ಪುರಂ, ಜಂಗ್‌ಪುರ, ಶಾಲಿಮಾರ್ ಬಾಗ್, ಗ್ರೇಟರ್ ಕೈಲಾಶ್, ರಾಜೌರಿ ಗಾರ್ಡನ್, ನರೇಲಾ, ಬವಾನಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕ್ಯಾಂಟೀನ್‌ಗಳು ಕಾರ್ಯಾರಂಭ ಮಾಡಿವೆ. ಉಳಿದ 55 ಕ್ಯಾಂಟೀನ್‌ಗಳನ್ನು ಮುಂದಿನ ದಿನಗಳಲ್ಲಿ ಆರಂಭಿಸುವುದಾಗಿ ಸರ್ಕಾರ ತಿಳಿಸಿದೆ.

Exit mobile version