ಅಮುಲ್ ಹಾಲಿನ ದರದಲ್ಲಿ ಇಂದಿನಿಂದ 2 ರೂ. ಏರಿಕೆ

Film 2025 05 01t122903.547

ನಂದಿನಿ ಹಾಲಿನ ದರ ಏರಿಕೆಯ ಬಳಿಕ, ಇದೀಗ ದೇಶಾದ್ಯಂತ ಅಮುಲ್ ಹಾಲಿನ ಬೆಲೆ ಕೂಡ 2 ರೂ. ಹೆಚ್ಚಳವಾಗಿದೆ. ಇಂದಿನಿಂದ (ಮೇ 1, 2025) ಈ ಪರಿಷ್ಕೃತ ದರಗಳು ಜಾರಿಯಾಗಿದೆ. ಈ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಮತ್ತಷ್ಟು ಆರ್ಥಿಕ ಒತ್ತಡ ಎದುರಾಗಲಿದೆ.

ಈ ದರ ಏರಿಕೆ ಅಮುಲ್ ಸ್ಟ್ಯಾಂಡರ್ಡ್, ಬಫೆಲೋ, ಗೋಲ್ಡ್, ಸ್ಲಿಮ್ ಆಂಡ್ ಟ್ರಿಮ್, ಚಾಯ್ ಮಜಾ, ತಾಜಾ ಮತ್ತು ಕೌಮಿಲ್ಕ್ ಹಾಲುಗಳಿಗೆ ಅನ್ವಯವಾಗಲಿದೆ.

ಹಿಂದಿನ ವರ್ಷದಲ್ಲಿ, ಗ್ರಾಹಕರಿಗೆ ಅನುಕೂಲವಾಗಲೆಂದು ಅಮುಲ್ 1 ಲೀಟರ್ ಹಾಗೂ 2 ಲೀಟರ್ ಪ್ಯಾಕ್‌ಗಳಲ್ಲಿ ಉಚಿತವಾಗಿ ಹೆಚ್ಚುವರಿ ಹಾಲನ್ನು ಪೂರೈಸಿತ್ತು ಮತ್ತು 2025ರ ಜನವರಿಯಲ್ಲಿ 1 ಲೀಟರ್ ಪ್ಯಾಕ್ ಬೆಲೆಯನ್ನೂ ₹1 ರಷ್ಟು ಕಡಿಮೆ ಮಾಡಿತ್ತು.


ಅಮುಲ್ ಹಾಲಿನ ಪರಿಷ್ಕೃತ ದರಗಳು (ಮೇ 1, 2025 ರಿಂದ)

ಹಾಲಿನ ವಿಧ ಪ್ರಮಾಣ ಹಳೆಯ ಬೆಲೆ (₹) ಹೊಸ ಬೆಲೆ (₹)
ಅಮುಲ್ ಸ್ಟ್ಯಾಂಡರ್ಡ್ 500 ಮಿ.ಲೀ ₹30 ₹31
ಅಮುಲ್ ಬಫೆಲೋ (ಎಮ್ಮೆ ಹಾಲು) 500 ಮಿ.ಲೀ ₹36 ₹37
ಅಮುಲ್ ಗೋಲ್ಡ್ 500 ಮಿ.ಲೀ ₹33 ₹34
ಅಮುಲ್ ಗೋಲ್ಡ್ 1 ಲೀಟರ್ ₹65 ₹67
ಅಮುಲ್ ಸ್ಲಿಮ್ ಆಂಡ್ ಟ್ರಿಮ್ 500 ಮಿ.ಲೀ ₹24 ₹25
ಅಮುಲ್ ಚಾಯ್ ಮಜಾ 500 ಮಿ.ಲೀ ₹31 ₹32
ಅಮುಲ್ ತಾಜಾ 500 ಮಿ.ಲೀ ₹27 ₹28
ಅಮುಲ್ ತಾಜಾ 1 ಲೀಟರ್ ₹53 ₹55

ಹಾಲು ಬಳಸುವ ಪ್ರತಿದಿನದ ಬಳಕೆಯ ಉಪಯೋಗದ ನಡುವೆ ಈ ದರ ಏರಿಕೆಯಿಂದ ಮನೆ ಖರ್ಚಿನಲ್ಲಿ ಸ್ವಲ್ಪ ಹೆಚ್ಚಳವಾಗಬಹುದಾದರೂ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲನ್ನು ಪೂರೈಸುವುದೇ ನಮ್ಮ ಉದ್ದೇಶ ಎಂದು  ಅಮುಲ್‌ ತಿಳಿಸದೆ.

Exit mobile version