ಲವರ್ ಜೊತೆ ಏಕಾಂತದಲ್ಲಿರುವಾಗಲೇ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪತಿ: ವಿಡಿಯೋ ವೈರಲ್

Untitled design 2026 03 17T115907.733

ಉತ್ತರ ಪ್ರದೇಶದ ಅಲಿಗಢದಲ್ಲಿ ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರಿಯಕರ ಜೊತೆ ಹೋಟೆಲ್‌ನಲ್ಲಿ ಪತಿಯ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಘಟನೆ ಅಲಿಗಢದ ಕ್ವಾರ್ಸಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಮ್‌ಘಾಟ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ನಡೆದಿದೆ. ಬುಲಂದ್‌ಶಹರ್ ಜಿಲ್ಲೆಯ ಗುಲಾವತಿ ನಿವಾಸಿಯಾದ ಆಕಾಶ್ ಕುಮಾರ್ ಸುಮಾರು ಮೂರು ವರ್ಷಗಳ ಹಿಂದೆ  ವಿವಾಹವಾಗಿದ್ದರು. ಆರಂಭದಲ್ಲಿ ಎಲ್ಲವೂ ಸುಖಕರವಾಗಿತ್ತು, ನಂತರ ಕಳೆದ ಕೆಲವು ತಿಂಗಳುಗಳಿಂದ ಪತ್ನಿಯ ವರ್ತನೆ ಕುರಿತು ಆಕಾಶ್‌ಗೆ ಅನುಮಾನಗಳು ಮೂಡಿದ್ದವು.

ಪತ್ನಿ ಮನೆಗೆ ಹೊರಡುವ ಸಮಯ, ಅವಳ ಫೋನ್ ಬಳಕೆ, ಮತ್ತು ನಡೆ-ನುಡಿಗಳಲ್ಲಿ ಬದಲಾವಣೆ ಕಂಡು ಬಂದ ಹಿನ್ನೆಲೆಯಲ್ಲಿ ಆಕಾಶ್, ಅವಳ ಮೇಲೆ ಗಮನ ಹರಿಸಲು ಆರಂಭಿಸಿದ್ದರು. ಶನಿವಾರದಂದು ಪತ್ನಿ ಮನೆಯಿಂದ ಹೊರಟಾಗ ಆಕಾಶ್ ಅವಳನ್ನು ಹಿಂಬಾಲಿಸಿದ್ದಾರೆ. ಆಕೆ ಮೃದುಲ್ ಅಲಿಯಾಸ್ ನಿಖಿಲ್ ಎಂಬ ವ್ಯಕ್ತಿಯೊಂದಿಗೆ ಸೇರಿ ರಾಮ್‌ಘಾಟ್ ರಸ್ತೆಯಲ್ಲಿರುವ ಹೋಟೆಲ್‌ಗೆ ಹೋಗುವುದುನ್ನು ಕಂಡಿದ್ದಾರೆ.

ಈ ದೃಶ್ಯ ಕಂಡ ತಕ್ಷಣವೇ ಆಕಾಶ್ ಕ್ವಾರ್ಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಸಹಕಾರದಿಂದ ಹೋಟೆಲ್ ಕೋಣೆ ಪ್ರವೇಶಿಸಿದ್ದಾರೆ. ಪತ್ನಿ ಮತ್ತು ಪ್ರಿಯಕರ ಒಟ್ಟಿಗೆ ಇರುವ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಪತಿ, ಪತ್ನಿ ಮತ್ತು ಪ್ರಿಯಕರ ನಡುವೆ ಭಾರೀ ವಾಗ್ವಾದ ನಡೆದಿದ್ದು, ಅದನ್ನು ಯಾರೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆಗೆ ಠಾಣೆಗೆ ಕರೆದೊಯ್ದಿದ್ದಾರೆ. ಈ ಪ್ರಕರಣದಲ್ಲಿ ಇನ್ನೊಂದು ತಿರುವು ಎದುರಾಗಿದ್ದು, ಮಹಿಳೆ ತನ್ನ ಪತಿಯ ವಿರುದ್ಧವೇ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿರುವುದು ಬಹಿರಂಗವಾಗಿದೆ.

ಈ ಬಗ್ಗೆ ಮಾತನಾಡಿದ ಆಕಾಶ್, “ನನ್ನ ಪತ್ನಿ ಇನ್ನೊಬ್ಬ ವ್ಯಕ್ತಿಯ ಜೊತೆ ಹೊಸ ಜೀವನ ಆರಂಭಿಸಲು ಹಾಗೂ ನನ್ನಿಂದ ಹಣ ಪಡೆದುಕೊಳ್ಳಲು ಉದ್ದೇಶಪೂರ್ವಕವಾಗಿ ಸುಳ್ಳು ವರದಕ್ಷಿಣೆ ಪ್ರಕರಣ ದಾಖಲಿಸಿದ್ದಾಳೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದೇ ವೇಳೆ, ಪೊಲೀಸರು ಪ್ರಿಯಕರನ ವಿರುದ್ಧ ಕ್ರಮ ಕೈಗೊಂಡಿದ್ದು, ಸಂಬಂಧಿತ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯನ್ನು ವಿಚಾರಣೆ ಬಳಿಕ ಆಕೆಯ ಕುಟುಂಬದವರಿಗೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ಇನ್ನಷ್ಟು ಮಾಹಿತಿಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 

Exit mobile version