ಹರಿಯಾಣ: ಹರಿಯಾಣ ರಾಜ್ಯದ ಜಿಂದ್ ನಗರದಲ್ಲಿ ನಡೆದ ಒಂದು ಅಚ್ಚರಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 10 ಹೆಣ್ಣು ಮಕ್ಕಳನ್ನು ಹೊಂದಿದ್ದ ದಂಪತಿಯೊಬ್ಬರಿಗೆ ಕೊನೆಗೂ 11ನೇ ಮಗು ಗಂಡು ಶಿಶು ಜನಿಸಿದ್ದು, ದಂಪತಿಗಳು ಸಂಸತಪಟ್ಟಿದ್ದಾರೆ.
ಜಿಂದ್ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಈ ದಂಪತಿ ವಾಸಿಸುತ್ತಿದ್ದು, ಜೀವನ ಸಾಗಿಸುತ್ತಿದ್ದರು. ಈ ದಂಪತಿಗೆ ಈಗಾಗಲೇ 10 ಹೆಣ್ಣು ಮಕ್ಕಳು ಇದ್ದರೂ, ಗಂಡು ಮಗುವಿನ ನಿರೀಕ್ಷೆಯನ್ನು ಅವರು ಕೈಬಿಟ್ಟಿರಲಿಲ್ಲ. ಗಂಡು ಮಗುವಿನ ಆಸೆಯನ್ನು ಬಿಡದ ಈ ದಂಪತಿ, ಮತ್ತೊಮ್ಮೆ ಗರ್ಭಧಾರಣೆಗೆ ಮುಂದಾಗಿದ್ದರು. ಕೊನೆಗೂ ಈ ದಂಪತಿಗಳ ನಿರೀಕ್ಷೆಯಂತೆ ಗಂಡು ಮಗು ಜನಿಸಿದೆ.
ನಂತರ ಆಸ್ಪತ್ರೆಯಲ್ಲಿ ಖಾಸಗಿ ಮಾಧ್ಯಮಗಳೊಂದಿಗೆ ಮಾತನಾಡಿದ ದಂಪತಿ, ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಆ ಮಗುವಿನ ತಂದೆಗೆ ತನ್ನ 10 ಹೆಣ್ಣು ಮಕ್ಕಳ ಹೆಸರನ್ನೇ ಸರಿಯಾಗಿ ಹೇಳಲು ಸಾಧ್ಯವಾಗಲಿಲ್ಲ. ಅ ಹೆಣ್ಣುಮಕ್ಕಳ ಹೆಸರು ಕೂಡ ನೆನಪಿಗೆ ಬರಲಿಲ್ಲ. ಆದರೆ ಈ ದಂಪತಿಗಳ ವಿಡಿಯೋ ಸೋಶಿಯಲ್ ಮೀಡಿಯಾಲ್ಲಿ ಭಾರೀ ವೈರಲ್ ಆಗಿದೆ..
ವೈದ್ಯರು ಇದನ್ನು ಹೈರಿಸ್ಕ್ ಪ್ರೆಗ್ನನ್ಸಿ ಎಂದು ಘೋಷಿಸಿ, ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರು. ವೈದ್ಯರ ತಂಡ ನಿರಂತರ ನಿಗಾ ವಹಿಸಿ, ಕೊನೆಗೂ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಶಿಶು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
11ನೇ ಗಂಡು ಮಗು ಜನಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ದಂಪತಿ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಗಂಡು ಮಗು ಜನಿಸಿದ್ದಕ್ಕೆ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
