‘ಸಿಎಂ ಯಾರು ಅನ್ನೋದು ಹೈಕಮಾಂಡ್ ತೀರ್ಮಾನಿಸುತ್ತೆ’: ಯತೀಂದ್ರ ಸಿದ್ದರಾಮಯ್ಯ

Untitled design 2025 11 28T195856.895

ಮಂಡ್ಯ (ನವೆಂಬರ್ 28): ಕರ್ನಾಟಕ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಚರ್ಚೆಗೆ ಒಳಗಾಗಿರುವ ಮುಖ್ಯಮಂತ್ರಿ ಬದಲಾವಣೆ ಗೊಂದಲದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮಂಡ್ಯದಲ್ಲಿ ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

“ಯಾರು ಮುಖ್ಯಮಂತ್ರಿ ಆಗಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ, ಕೇವಲ ಪಕ್ಷದ ಹೈಕಮಾಂಡ್‌ಗೆ ಮಾತ್ರ ಇದೆ. ಅದರ ಬಗ್ಗೆ ಯಾರೂ ಕಾಮೆಂಟ್ ಮಾಡುವ ಅಧಿಕಾರ ಅಥವಾ ಅವಕಾಶವೂ ಇಲ್ಲ” ಎಂದು ಯತೀಂದ್ರ ದಿಟ್ಟ ಹೇಳಿಕೆ ನೀಡಿದ್ದಾರೆ.

ಸಿಎಂ ಬದಲಾವಣೆ ಕುರಿತಂತೆ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇದೆಲ್ಲವೂ ಕೇವಲ ಊಹಾಪೋಹ ಮಾತ್ರ. ಪಕ್ಷದಲ್ಲಿ ಯಾವುದೇ ಯುದ್ಧವೂ ಇಲ್ಲ, ಯಾವುದೇ ಘರ್ಷಣೆಯೂ ಇಲ್ಲ. ಮೀಡಿಯಾದಲ್ಲಿ ಮಾತ್ರ ಇದೊಂದು ದೊಡ್ಡ ವಿಷಯವಾಗಿ ಮಾರ್ಪಟ್ಟಿದೆ. ನಮ್ಮ ಒಳಗೆ ಯಾವ ಗೊಂದಲವೂ ಇಲ್ಲ” ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರೂ ಹೈಕಮಾಂಡ್ ನಿರ್ಧಾರಕ್ಕೆ ಪೂರ್ಣ ಬದ್ಧರಾಗಿದ್ದಾರೆ ಎಂಬುದನ್ನು ಹೇಳಿದ ಯತೀಂದ್ರ, “ಹೈಕಮಾಂಡ್ ಶೀಘ್ರದಲ್ಲೇ ಇಬ್ಬರ ಜೊತೆ ಕುಳಿತು ಮಾತನಾಡಲಿದ್ದಾರೆ. ಆದಷ್ಟು ಬೇಗ ಈ ಗೊಂದಲಕ್ಕೆ ತೆರೆ ಎಳೆಯಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಎರಡೇ ವರ್ಷಕ್ಕೊಮ್ಮೆ ಬದಲಾವಣೆ’ ಎಂಬ ಚರ್ಚೆಯ ಬಗ್ಗೆಯೂ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. “ಅಂಥ ಯಾವುದೇ ಒಪ್ಪಂದದ ಬಗ್ಗೆ ಯಾರಿಗೂ ಗೊತ್ತಿಲ್ಲ. ಆದರೆ ಕೆಲವರು ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಪಕ್ಷ ಎಂದೊಡನೆ ಅನೇಕ ಆಕಾಂಕ್ಷಿಗಳಿರುತ್ತಾರೆ. ಅವರ ಬೆಂಬಲಿಗರು ಮಾತನಾಡುತ್ತಾರೆ, ಅದು ಸಹಜ. ಅದನ್ನು ದೊಡ್ಡ ವಿಷಯವನ್ನಾಗಿ ಮಾಡುವ ಅಗತ್ಯವಿಲ್ಲ” ಎಂದು ತಿಳಿಸಿದರು.

Exit mobile version