ಬೆಂಗಳೂರು: ಮಂತ್ರಿಮಾಲ್ ಹಿಂಭಾಗದ ರೈಲ್ವೆ ಟ್ರ್ಯಾಕ್ ಸಮೀಪದಲ್ಲಿ 22 ವರ್ಷದ ಯಾಮಿನಿ ಪ್ರಿಯಾ ಎಂಬ ಬಿ.ಫಾರ್ಮ್ ವಿದ್ಯಾರ್ಥಿನಿಯನ್ನ ಕುತ್ತಿಗೆ ಇರಿದು ಹತ್ಯೆ ಮಾಡಲಾಗಿದೆ.
ಬನಶಂಕರಿಯ ನರಗುಂದ ಕಾಲೇಜಿನಲ್ಲಿ ಬಿ.ಫಾರ್ಮ್ ಓದುತ್ತಿದ್ದ ಯಾಮಿನಿ ಪ್ರಿಯ, ಬೆಳಗ್ಗೆ 7 ಗಂಟೆಗೆ ಕಾಲೇಜಿಗೆ ಹೋಗಿದ್ದಳು. ಪರೀಕ್ಷೆ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ, ಮಂತ್ರಿಮಾಲ್ ಹಿಂಭಾಗದ ರೈಲ್ವೆ ಟ್ರ್ಯಾಕ್ ಸಮೀಪದಲ್ಲಿ ಘಟನೆ ನಡೆದಿದೆ.
ಪ್ರೀತಿ ನಿರಾಕರಿಸಿದಕ್ಕೆ ವಿಘ್ನೇಶ್ ಎಂಬ ಯುವಕ ಯಾಮಿನಿ ಪ್ರಿಯಾಳನ್ನು ಹಿಂಬಾಲಿಸಿ,ಮೊದಲು ಯುವತಿಯ ಕಣ್ಣಿಗೆ ಖಾರದಪುಡಿ ಎರಚಿ, ನಂತರ ಚಾಕುವಿನಿಂದ ಕುತ್ತಿಗೆ ಇರಿದು ಹತ್ಯೆ ಮಾಡಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಘಟನೆಯ ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಮತ್ತು ಸಿಸಿಟಿವಿ ಫುಟೇಜ್ ಪರಿಶೀಲನೆ ನಡೆಸುತ್ತಿದ್ದಾರೆ. ಹತ್ಯೆ ಸಂಬಂಧಿತ ವಿವರಗಳನ್ನು ಪತ್ತೆಹಚ್ಚಲು ವೈದ್ಯಕೀಯ ತಪಾಸಣೆಯೂ ನಡೆಸಲಾಗುವುದು ಎಂದು ಪೊಳಿಸರು ತಿಳಿಸಿದ್ದಾರೆ.