ಪ್ರಿಯಕರನ ಜೊತೆ ಓಡಿ ಹೋಗಲು ಪತಿ ಮನೆಗೆ ಕನ್ನ ಹಾಕಿದ ಖತರ್ನಾಕ್‌ ಪತ್ನಿ

1235

ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ಪತ್ನಿ ತನ್ನ ಪ್ರೀಯಕರನೊಂದಿಗೆ ಸೇರಿ ಗಂಡನ ಮನೆಗೆ ಕನ್ನ ಹಾಕಿ 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪೊಲೀಸರು ಕೇವಲ 48 ಗಂಟೆಗಳಲ್ಲಿ ಪ್ರೇಮಿಗಳಿಬ್ಬರನ್ನು ಬಂಧಿಸಿ ತನಿಖೆಯನ್ನು ಕೈಗೊಂಡಿದ್ದಾರೆ. ಹೊಸಕೋಟಿ ಗ್ರಾಮದ ದಿಲಶಾನ್ ನದಾಫ್ ಅವರು ಕಟಕೋಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತಮ್ಮ ಪತ್ನಿ ಹಸೀನಾ ನದಾಫ್ ಮತ್ತು ಅವಳ ಪ್ರಿಯಕರ ಹಣಮಂತ ಮಾರಾಪೂರ ಜೊತೆಗೂಡಿ ಮನೆಯಲ್ಲಿ ಇಟ್ಟಿದ್ದ 154.6ಗ್ರಾಂ ಚಿನ್ನಾಭರಣ ಮತ್ತು 15ಗ್ರಾಂ ಬೆಳ್ಳಿ ಆಭರಣ ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.

ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದ ಮಾಹಿತಿ ಪ್ರಕಾರ, ಹಸೀನಾ ನದಾಫ್ ಮೂಲತಃ ಮೂಡಲಗಿ ತಾಲೂಕಿನವಳಾಗಿದ್ದು ಕಳೆದ ಎರಡು ತಿಂಗಳ ಹಿಂದೆ ಹೊಸಕೋಟಿ ಗ್ರಾಮದ ಶರೀಫ್ ಅವರನ್ನು ಮದುವೆಯಾಗಿದ್ದಳು. ಆದರೆ ಮದುವೆಯ ನಂತರವೂ ಅವಳು ಹಣಮಂತ ಮಾರಾಪೂರ ಜೊತೆಗಿನ ಸಂಪರ್ಕವನ್ನು ಮುಂದುವರಿಸಿದ್ದಳು.

ಇಬ್ಬರೂ ಸೇರಿ ಶರೀಫ್ ಮನೆಗೆ ಕನ್ನ ಹಾಕಿ ಚಿನ್ನಾಭರಣಗಳನ್ನು ಕಸಿದುಕೊಂಡು ಓಡಿ ಹೋಗಿದ್ದರು.ರಾಮದುರ್ಗ ಪೊಲೀಸ್ ಇನ್‌ಸ್ಪೆಕ್ಟರ್ ವಿನಾಯಕ ಬಡಿಗೇರ (ಸಿಪಿಐ) ಮತ್ತು ಪಿಎಸ್‌ಐ ಬಸವರಾಜ್ ಕೊಣ್ಣೂರೆ ನೇತೃತ್ವದಲ್ಲಿ ತಂಡವು ತ್ವರಿತ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸಿದೆ.

ಬಂಧಿತರನ್ನು ರಾಮದುರ್ಗ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ರಾಮದುರ್ಗ ಪೊಲೀಸರ ತ್ವರಿತ ಕಾರ್ಯಾಚರಣೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮದುವೆಯ ನಂತರವೂ ಪತ್ನಿ ಪ್ರಿಯಕರನೊಂದಿಗೆ ಸಂಬಂಧವಿಟ್ಟುಕೊಂಡು ಕಳ್ಳತನ ಮಾಡಿದ ಘಟನೆಯು ಸ್ಥಳೀಯರಲ್ಲಿ ಅಚ್ಚರಿ ಮತ್ತು ಕೋಪವನ್ನು ಹುಟ್ಟಿಸಿದೆ.

ಈ ಅಕ್ರಮ ಸಂಬಂಧ ಎನ್ನುವುದು ಗಂಡ ಹೆಂಡತಿ ನಡುವಿನ ಬಾಂಧವ್ಯವನ್ನು ಹಾಳು ಮಾಡುವುದಲ್ಲದೆ ಇಬ್ಬರ ನಡುವಿನ ಸಂಬಂಧದ ಮೌಲ್ಯವನ್ನು ಸಹ ಹಾಳು ಗೆಡುವುತ್ತಿದೆ. ಅದಲ್ಲದೆ ಈ ಅಕ್ರಮ ಸಂಬಂಧಗಳು ಇನ್ನ ಸ್ವಂತ ಗಂಡನ ಮನೆಯಲ್ಲೇ ಕಳ್ಳತನ ಮಾಡಲು ಪ್ರಚೋದಿಸುತ್ತದೆ ಎಂಬುದು ಆಘಾತಕಾರಿ ಮಾಹಿತಿಯಾಗಿದೆ.

 

Exit mobile version