ಕೊಪ್ಪಳ ; ರಾಜ್ಯದಲ್ಲಿ ನಾಳೆಯಿಂದ (ಸೆ.22) ನಡೆಯಲಿರುವ ಜಾತಿಗಣತಿ ವಿಚಾರವಾಗಿ ಕೊಪ್ಪಳದಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆ ಮಾಡಲು ತಯಾರಿ ಮಾಡಿದೆ.ನಾವು ಈಗಾಗಲೆ 16 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಜಾತಿ ಕಾಲಂ ನಲ್ಲಿ ಏನೇನೂ ಬರೆಸಬೇಕೆದು ಭಕ್ತರೊಂದಿಗೆ ಸಮಾಲೋಚನೆ ಮಾಡಿದ್ದೇ. ಭಕ್ತರ ಮನೆ ಮನೆಗೆ ಭೇಟಿ ನೀಡಿ ತಿಳುವಳಿಕೆ ನೀಡಿ ಸ್ಟೀಕರ್ ಅಂಟಿಸಲಾಗುತ್ತಿದೆ.ಧರ್ಮದ ಕಾಲಂ ನಲ್ಲಿ ಹಿಂದೂ ಅಂತ ಬರೆಸಬೇಕು, ಜಾತಿ ಕಾಲಂ ನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಬೇಕು ಹಾಗೂ ಅದರ ಕೋಡ್ ಎ 086. ಹೀಗಾಗಿ ಅದನ್ನ ಅಭಿಯಾನ ಮುಖಾಂತರ ಭಕ್ತರಿಗೆ ತಿಳಿಸಬೇಕು. ಲಕ್ಷಾಂತರ ಜನ ಪಂಚಮಸಾಲಿಗಳು ಇರೊದ್ರಿಂದ ತಾಲೂಕು,ಜಿಲ್ಲಾ ಘಟಕಗಳು ಹಾಗೂ ಗ್ರಾಮ ಘಟಕಗಳಿಗೂ ಹೋಗಿ ಸ್ಟಿಕರ್ ಅಂಟಿಸುವ ಕೆಲಸ ಮಾಡ್ತಿದ್ದೆವೆ. ಸಮೀಕ್ಷೆಯಲ್ಲಿ ಸಾಕಷ್ಟು ಲೋಪಗಳನ್ನ ಹಿಂದುಳಿದ ವರ್ಗಗಳ ಆಯೋಗ ಮಾಡಿದೆ. ಅನೇಕ ಕೋಡ್‌ಗಳನ್ನ ಕೊಟ್ಟಿದೆ. ಒಂದೆ ಕೋಡ್ ಕೊಡಬೇಕಿತ್ತು, ವೀರಶೈವ ಸಮುದಾಯ ಕೂಡಾ ಹೀಗೆ ಮಾಡಿದೆ. ಕ್ರಿಶ್ಚಿಯನ್ ಜಾತಿಗಳನ್ನ ಸಹ ಸೇರಿಸುವ ಕೆಲಸ ಮಾಡಿದೆ. ಇದೆಲ್ಲವನ್ನ ಸರಿಪಡಿಸುವ ಕೆಲಸ ಮಾಡಿ ಸಮಿಕ್ಷೆ ಮಾಡಿದ್ರೆ ಮಾತ್ರ ಅದು ವೈಜ್ಞಾನಿಕವಾಗಿ ಆಗತ್ತೆ. ಇಲ್ಲವಾದ್ರೆ ಅದು ಅವೈಜ್ಞಾನಿಕ ಸಮೀಕ್ಷೆ ಆಗತ್ತೆ. ಇದನ್ನ ಮತ್ತೆ ನಾವು ತಿರಸ್ಕಾರ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ದಸರಾ ಹಬ್ಬದ ಸಮಯದಲ್ಲಿ ಈ ಸಮೀಕ್ಷೆ ಮಾಡಲಾಗ್ತಿದೆ, ಇದು ಹಿಂದುಗಳ ಹಬ್ಬ ನನಗೆ ಅನೇಕ ಜನ ನೌಕರರ ಸಂಘದಿಂದ ಪೋನ್ ಮಾಡಿದ್ದಾರೆ. ಹಬ್ಬ ಮಾಡುವ ಸಮಯದಲ್ಲಿ ಕೆಲಸ ಕೊಟ್ಟಿದ್ದಾರೆ, ಇದೆಲ್ಲ ಹೇಗೆ ಮಾಡಬೇಕು ಎಂದು ಹೇಳ್ತಾಯಿದ್ದಾರೆ. ಹಿಂದೂಗಳ ಹಬ್ಬ ಬಂದಾಗಲೆ ಯಾಕೆ ನೀವು ಈ ಸಮೀಕ್ಷೆ ಮಾಡ್ತಿರಾ…? ಸಮೀಕ್ಷೆ ಮಾಡಲು ಸ್ವಲ್ಪ ಸಮಯ ತಗೆದುಕೊಳ್ಳಿ, ಅವಸರ ಏನಿದೆ, ನಾವು ಸಮೀಕ್ಷೆ ಸ್ವಾಗತ ಮಾಡ್ತಿವಿ .ಒಕ್ಕಲಿಗ ನಿರ್ಮಲಾನಂದ ಸ್ವಾಮಜಿ, ಸೀರಿಗೆರೆ ಸ್ಚಾಮಿಜಿ ಸೇರಿ ಎಲ್ಲರೂ ಅದನ್ನೆ ಹೇಳಿದ್ದಾರೆ. ನಾಡಿನ ಎಲ್ಲ ಸ್ವಾಮಿಜಿ ಸಮೀಕ್ಷೆಯನ್ನ ಮಾಡಿ ಆದ್ರೆ ತರಾತುರಿಯಲಿ ಮಾಡಬೇಡಿ ಎಂದು ಜಾತಿ ಗಣತಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಕ್ರಿಶ್ಚಿಯನ್ ಜಾತಿಗಳನ್ನ ಪಟ್ಟಿಯಿಂದ ತೆಗೆದ ವಿಚಾರವಾಗಿ ಮಾತನಾಡಿದ ಶ್ರೀಗಳು, ಕೇವಲ ಕ್ರಿಶ್ಚಿಯನ್ ಜಾತಿಗಳನ್ನ ತೆಗೆಯೋದಲ್ಲ, ಇದರಲ್ಲಿ ಸಾಕಷ್ಟು ದೋಷಗಳಿವೆ ಅವುಗಳ ಪಟ್ಟಿಯನ್ನ ನಾವು ಕೊಟ್ಟಿದ್ದೆವೆ. ಸಿರಿಗೆರೆ ಜಗದ್ಗುರುಗಳು ಅದರ ಲಿಸ್ಟ್ ಮಾಡಿದ್ದಾರೆ. ತರಾತುರಿಯಲ್ಲಿ ಮಾಡಬೇಡಿ. ಹಿಂದೆ ನಾಗಮೋಹನ್ ದಾಸ್ ಆಯೋಗ ಸಮೀಕ್ಷೆ ಮಾಡಲು ಆರು ತಿಂಗಳ ಸಮಯ ತಗೆದುಕೊಂಡಿದೆ. ಅದೆ ರೀತಿ ಕಾಂತ ರಾಜು ಆಯೋಗ ಕೂಡ, ನಾವು 15 ದಿನದಲ್ಲಿ… ಯಾವ ಯುಗದಲ್ಲಿ ನಾವಿದ್ದೇವೆ..!
ಈ ಸಮೀಕ್ಷೆಯಲ್ಲಿ 7 ಕೋಟಿ ಜನರ ಭವಿಷ್ಯ ಅಡಗಿದೆ. ನಿಮ್ಮ ಉದ್ದೇಶ ಸಾಮಾಜಿಕ, ಆರ್ಥಿಕ ಮತ್ತು ರಾಜಕಿಯ ಅಂತ ಸಮೀಕ್ಷೆ ಅಂತ ಇದೆ. ಮುಂದೆ ಬರುವ ಚುನಾವಣೆಗಳ ಮೇಲೆ ಪರಿಣಾಮ ಬೀರತ್ತೆ. ಜನ ಸಂಖ್ಯೆ ಕಡಿಮೆ ಬಂದ್ರೆ ಸೀಟ್‌ಗಳು ಕೂಡಾ ಕಡಿಮೆ ಆಗತ್ತೆ. ಅದು ಸಮಾಜಕ್ಕೆ ನೇರವಾಗಿ ಅನ್ಯಾಯ ಆಗತ್ತೆ. ಸ್ಪಷ್ಟತೆ ಇಂದ ಕೆಲಸ ಮಾಡಿ, ಇಲ್ಲವಾದ್ರೆ 420 ಕೋಟಿ ಹಣ ವ್ಯರ್ಥವಾಗತ್ತೆ. ಈಗಾಗಲೆ 250 ಕೋಟಿ ವ್ಯರ್ಥ ಆಗಿದೆ. ಅವೈಜ್ಞಾನಿಕ ಸಮೀಕ್ಷೆಯಿಂದ ಮತ್ತೆ ಇದೆ ರೀತಿ ಆದ್ರೆ ನಾವು ತಿರಸ್ಕಾರ ಮಾಡ್ತಿವಿ. ಸ್ವಾಗತ ಮಾಡಬೇಕು ಅಂದ್ರೆ ಸಮಯ ತಗೆದುಕೊಂಡ ಸಮೀಕ್ಷೆ ಮಾಡಿ.