ರಾಜ್ಯದಲ್ಲಿ ನಿಲ್ಲದ ಹೃದಯಾಘಾತ: ಹಾರ್ಟ್‌ ಆಟ್ಯಾಕ್‌ಗೆ ಐಎಎಸ್ ಕನಸು ಕಂಡ ಯುವತಿ ಸಾವು

Your paragraph text (6)

ಧಾರವಾಡ: ಕರ್ನಾಟಕದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ದಿನೇ ದಿನೇ ಏರಿಕೆಯಾಗುರ್ಥಥಅ ಸಾಗುತ್ತಿದೆ. ಇದೀಗ ಧಾರವಾಡದ ಪುರೋಹಿತ್ ನಗರದ 26 ವರ್ಷದ ಜೀವಿತಾ ಕುಸಗೂರ ಎಂಬ ಯುವತಿ ಹೃದಯಾಘಾತದಿಂದ ಜೀವ ಬಿಟ್ಟಿದ್ದಾಳೆ.

ನಿನ್ನೆ ಬೆಳಿಗ್ಗೆ ಜೀವಿತಾ ತನ್ನ ಮನೆಯಲ್ಲಿ ಇದ್ದಾಗ, ತಲೆಸುತ್ತು ಬರುತ್ತಿದೆ ಎಂದು ಸುಸ್ತಾಗಿ ಕುಳಿತಿದ್ದಳು. ಕುಟುಂಬದವರು ತಕ್ಷಣವೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ತಯಾರಾದರು. ಆದರೆ ದುರದೃಷ್ಟವಶಾತ್, ಆಸ್ಪತ್ರೆಗೆ ತಲುಪುವ ಮೊದಲೇ ಜೀವಿತಾ ಕೊನೆಯುಸಿರೆಳೆದಳು. ಆಸ್ಪತ್ರೆಯಲ್ಲಿ ವೈದ್ಯರು ಆಕೆಯನ್ನು ಪರೀಕ್ಷಿಸಿದಾಗ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ದೃಢಪಡಿಸಿದರು. ಈ ಸುದ್ದಿ ಕೇಳಿ ಕುಟುಂಬದವರ ಕನಸುಗಳು ಕ್ಷಣದಲ್ಲಿ ಚೂರಾಗಿಹೋದವು.

ಜೀವಿತಾ ಕುಸಗೂರ ಕೃಷಿಯಲ್ಲಿ ಸ್ನಾತಕೋತ್ತರ ಪದವಿ (ಎಂಎಸ್‌ಸಿ) ಪಡೆದಿದ್ದ ಯುವತಿಯಾಗಿದ್ದಳು. ಯುಪಿಎಸ್‌ಸಿ ಪರೀಕ್ಷೆಯ ಮೂಲಕ ದೇಶಕ್ಕೆ ಸೇವೆ ಸಲ್ಲಿಸುವ ಕನಸು ಕಂಡಿದ್ದ ಆಕೆ, ತನ್ನ ಗುರಿಯನ್ನು ಸಾಧಿಸಲು ದಿನರಾತ್ರಿ ಕಠಿಣ ಪರಿಶ್ರಮದಲ್ಲಿ ತೊಡಗಿದ್ದಳು. ಆಕೆಯ ತಂದೆ, ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದು, ತಮ್ಮ ಮಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಉನ್ನತ ಸ್ಥಾನಕ್ಕೇರುವ ಕನಸು ಕಂಡಿದ್ದರು. ಆದರೆ, ಈ ದುರಂತ ಘಟನೆಯಿಂದ ಆ ಕನಸುಗಳೆಲ್ಲವೂ ಭಗ್ನಗೊಂಡಿವೆ.

ಕರ್ನಾಟಕದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ. ದಾವಣಗೆರೆ, ಹಾಸನ, ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲಿ ಇಂತಹ ಘಟನೆಗಳು ವರದಿಯಾಗಿವೆ. ಜಯದೇವ ಆಸ್ಪತ್ರೆಯ ತಜ್ಞರು, ಮಹಿಳೆಯರಲ್ಲಿ ಹೃದಯಾಘಾತದ ಪ್ರಕರಣಗಳ ಹೆಚ್ಚಳಕ್ಕೆ ಗರ್ಭನಿರೋಧಕ ಮಾತ್ರೆಗಳ ಬಳಕೆಯೂ ಒಂದು ಕಾರಣವಿರಬಹುದೆಂದು ಶಂಕಿಸಿದ್ದಾರೆ. ಇದರ ಜೊತೆಗೆ, ಒತ್ತಡದ ಜೀವನಶೈಲಿ, ಆಹಾರದ ಕ್ರಮ, ಮತ್ತು ವ್ಯಾಯಾಮದ ಕೊರತೆಯೂ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Exit mobile version