ಖಾಸಗಿ ಬಸ್ ಪಲ್ಟಿ: 24 ಪ್ರಯಾಣಿಕರಲ್ಲಿ 5 ಜನರಿಗೆ ಗಾಯ

ಖಾಸಗಿ ಬಸ್ ಪಲ್ಟಿ: 24 ಪ್ರಯಾಣಿಕರಲ್ಲಿ 5 ಜನರಿಗೆ ಗಾಯ

Tumkuru bus

ತುಮಕೂರು: ಬಸ್ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿರುವ ಘಟನೆ ಕುಣಿಗಲ್ ತಾಲ್ಲೂಕಿನ ಹೇರೂರು ಬಳಿ ನಡೆದಿದೆ. ಕೇರಳದ ಕುಕ್ಕೆ ಸುಬ್ರಮಣ್ಯದಿಂದ ಬೆಂಗಳೂರಿಗೆ ಹೊರಟಿದ್ದ ಬಸ್, ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಇದರ ಪರಿಣಾಮ ಬಸ್ ನಲ್ಲಿದ್ದ  24 ಪ್ರಯಾಣಿಕರಲ್ಲಿ 5 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇನ್ನು ಈ ಘಟನೆಯಲ್ಲಿ ಬಸ್ ಪಲ್ಟಿಯಿಂದ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾದರು. ಗಾಯಾಳುಗಳನ್ನು ಕುಣಿಗಲ್ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Exit mobile version