ರಸ್ತೆ ಅಪಘಾತದಲ್ಲಿ ಎಎಸ್ಐ ಗಿರೀಶ್ ಸಾವು

Untitled design (61)
ADVERTISEMENT
ADVERTISEMENT

ತುಮಕೂರು: ಕಳೆದ ಶನಿವಾರ ಸಂಜೆ ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದ ಎಎಸ್ಐ ಗಿರೀಶ್ ಮೃತಪಟ್ಟಿದ್ದಾರೆ. ಈ ಘಟನೆ ತುಮಕೂರು ನಗರದ ಎಸ್‌ಐಟಿ ಕಾಲೇಜಿನ ಮುಂಭಾಗ ಸಂಭವಿಸಿತ್ತು. ಅವರು ತಮ್ಮ ಬೈಕ್‌ನಲ್ಲಿ ಮನೆಗೆ ವಾಪಾಸಾಗುವ ವೇಳೆ ಅಪಘಾತಕ್ಕೀಡಾಗಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ಪೆಗೆ ದಾಖಲಿಸಲಾಗಿತ್ತು. ಆದರೆ ತಲೆಗೆ ಗಂಭೀರ ಗಾಯವಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಗಿರೀಶ್ ಮೃತಪಟ್ಟಿದ್ದಾರೆ.

ಬೈಕ್‌ನಲ್ಲಿ ತೆರಳುತ್ತಿದ್ದಾಗ ದಿಢೀರ್ ದ್ವಿಚಕ್ರ ವಾಹನಕ್ಕೆ ದನ ಅಡ್ಡ ಬಂದಿದೆ. ದ್ವಿಚಕ್ರವಾಹನಕ್ಕೆ ದನ ಗುದಿದ್ದ ಹಿನ್ನಲೆ ಆಯ ತಪ್ಪಿ ರಸ್ತೆ ಪಕ್ಕದ ತಡೆ ಕಲ್ಲಿಗೆ ತಲೆ ಅಪ್ಪಳಿಸಿದೆ. ಈ ವೇಳೆ ತಲೆಗೆ ಗಂಭೀರ ಗಾಯವಾಗಿದ್ದ ಕಾರಣ, ಅವರನ್ನು ತಕ್ಷಣವೇ ತುಮಕೂರಿನ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ, ಗಿರೀಶ್ ಸೋಮವಾರ ಮೃತಪಟ್ಟಿದ್ದಾರೆ. ಮೃತರು ಓರ್ವ ಪತ್ನಿ, ಇಬ್ಬರು ಪುತ್ರರನ್ನ ಅಗಲಿದ್ದಾರೆ. ಮೃತರ ಕುಟುಂಬಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಸಂತಾಪ‌ ಸೂಚಿಸಿದ್ದಾರೆ.

Exit mobile version