ರಾಜ್ಯದಲ್ಲಿ ಬಾಕಿ ಟ್ರಾಫಿಕ್ ದಂಡಕ್ಕೆ 50% ರಿಯಾಯಿತಿ-ಇಂದೇ ಕೊನೆ ಅವಕಾಶ

Untitled design 2025 12 12T080142.061

ಬೆಂಗಳೂರು, ಡಿಸೆಂಬರ್ 12, 2025: ಕರ್ನಾಟಕ ಸಾರಿಗೆ ಇಲಾಖೆಯು ಜನತೆಗೆ ದೊಡ್ಡ ಗುಡ್ ನ್ಯೂಸ್ ನೀಡಿದೆ. 1991-92 ರಿಂದ 2019-20ರವರೆಗೆ ದಾಖಲಾದ ಎಲ್ಲ ಬಾಕಿ ಟ್ರಾಫಿಕ್ ದಂಡಗಳಿಗೆ (ಮೋಟಾರು ವಾಹನ ಕಾಯಿದೆ ಉಲ್ಲಂಘನೆ) ಸಂಪೂರ್ಣ 50% ರಿಯಾಯಿತಿ ಘೋಷಿಸಿದೆ.

ಈ ವಿಶೇಷ ಒನ್-ಟೈಮ್ ಸೆಟಲ್ಮೆಂಟ್ ಯೋಜನೆ ನವೆಂಬರ್ 21, 2025 ರಿಂದ ಡಿಸೆಂಬರ್ 12, 2025 (ಇಂದು ಕೊನೆಯ ದಿನ) ವರೆಗೆ ಮಾತ್ರ ಅನ್ವಯವಾಗಲಿದೆ. ಈ ಅವಧಿಯಲ್ಲಿ ದಂಡದ ಅರ್ಧ ಮೊತ್ತ ಮಾತ್ರ ಪಾವತಿಸಿದರೆ ಸಾಕು-ಉಳಿದ ಶೇ.50 ಸರ್ಕಾರ ಮನ್ನಾ ಮಾಡಲಿದೆ. ಈ ಸೌಲಭ್ಯವನ್ನು ಸಾರ್ವಜನಿಕರು ಕಡ್ಡಾಯವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು ಹೇಳಿದ್ದರು.

ಯಾವೆಲ್ಲ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯವಾಗುತ್ತದೆ ಎಂದು ನೋಡುವುದಾದರೆ,1991-92 ರಿಂದ 2019-20ರವರೆಗೆ ದಾಖಲಾದ ಎಲ್ಲ ಡಿ.ಎಸ್.ಎ (Departmental Action) ಪ್ರಕರಣಗಳು ಮತ್ತು ಹೆಲ್ಮೆಟ್ ಇಲ್ಲದೇ ಓಡಾಡಿದ್ದು, ಸೀಟ್ ಬೆಲ್ಟ್ ಇಲ್ಲದೇ ಇರುವುದು, ಸಿಗ್ನಲ್ ಜಿಗಿಯುವುದು, ಓವರ್ ಸ್ಪೀಡ್, ತಪ್ಪು ಪಾರ್ಕಿಂಗ್, ದಾಖಲೆ ಇಲ್ಲದೇ ವಾಹನ ಚಲಾಯಿಸುವುದು ಇತ್ಯಾದಿ ಎಲ್ಲ ರೀತಿಯ ಟ್ರಾಫಿಕ್ ಉಲ್ಲಂಘನೆಗಳು ಸೇರಿದಂತೆ ದಂಡಗಳಿದ್ದರೆ ಇದನ್ನ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ದಂಡ ಪಾವತಿಸುವ ವಿಧಾನ:

1. ಆನ್‌ಲೈನ್ ಮೂಲಕ ನಿಮ್ಮ ಮೊಬೈಲ್‌ನಲ್ಲಿಯೇ 5 ನಿಮಿಷದಲ್ಲಿ ದಂಡ ಪಾವತಿ ಮಾಡಬಹುದು. ಕೆಳಗಿನ ಯಾವುದೇ ಒಂದು ಅಧಿಕೃತ ಆಪ್ ಡೌನ್‌ಲೋಡ್ ಮಾಡಿ:

ಹಂತಗಳು:

  1. ಆಪ್ ತೆರೆಯಿರಿ-“Traffic Fine” ಅಥವಾ “Pay Fine” ಆಯ್ಕೆ ಮಾಡಿ
  2. ವಾಹನ ಸಂಖ್ಯೆ (KA-XX-XX-XXXX) ನಮೂದಿಸಿ
  3. ಬಾಕಿ ಪ್ರಕರಣಗಳ ಪಟ್ಟಿ ಬರುತ್ತದೆ-50% ರಿಯಾಯಿತಿ ತೋರಿಸುತ್ತದೆ
  4. UPI / ಕಾರ್ಡ್ / ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿ
  5. ರಶೀದಿ ಡೌನ್‌ಲೋಡ್ ಮಾಡಿಕೊಳ್ಳಿ-ಪ್ರಕರಣ ಕ್ಲೋಸ್!

2. ಆಫ್‌ಲೈನ್ ಮೂಲಕ ಈ ಕೆಳಗಿನ ನಿಮ್ಮ ಜಿಲ್ಲೆಯ ಅಥವಾ ತಾಲೂಕಿನಲ್ಲೂ ದಂಡ ಪಾವತಿ ಮಾಡಬಹುದು.

ಗಮನಿಸಿ..!

Exit mobile version