ಫಿಲಂ‌ ಚೇಂಬರ್‌ನಲ್ಲಿ ಕನ್ನಡ ರಾಜ್ಯೋತ್ಸವ ಆಚರಿದ ಶಿವರಾಜ್ ಕುಮಾರ್

Untitled design 2025 11 01t110823.169

ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಫಿಲಂ ಚೇಂಬರ್‌ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್‌ ಧ್ವಜಾರೋಹಣ ಮಾಡಿ ರಾಜ್ಯೋತ್ಸವದ ಸಂಭ್ರಮದಲ್ಲಿ ಭಾಗಿಯಾದರು.

ರಾಜ್ಯೋತ್ಸವದ ವಿಶೇಷ ದಿನದಂದು ತಮ್ಮ ಮಗಳು ಕೊಟ್ಟ ಕನ್ನಡ ವರ್ಣಮಾಲೆಯ ಟೀಶರ್ಟ್ ಧರಿಸಿ ಸಂಭ್ರಮಿಸಿದ ಶಿವರಾಜ್ ಕುಮಾರ್, ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದರು. ಶಿವಣ್ಣ ಅವರ ಈ ಕನ್ನಡ ಪ್ರೇಮ ಮತ್ತು ರಾಜ್ಯೋತ್ಸವ ಆಚರಣೆಯ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಅವರ ಈ ಕ್ರಿಯೆಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ತಳೆಯುವ ಸಂದೇಶವನ್ನು ನೀಡಿದೆ.

ನಟನಾಗಿ ಮಾತ್ರವಲ್ಲದೆ ನಿಜವಾದ ಕನ್ನಡ ಅಭಿಮಾನಿಯಾಗಿ ಶಿವರಾಜ್ ಕುಮಾರ್ ತಮ್ಮ ಪಾತ್ರವನ್ನು ಮತ್ತೊಮ್ಮೆ ಸಾರಿದ್ದಾರೆ. ರಾಜ್ಯೋತ್ಸವದ ದಿನವನ್ನು ವಿಶೇಷವಾಗಿ ಆಚರಿಸಿದ ಅವರ ಈ ಕ್ರಿಯೆ ಅನೇಕರಿಗೆ ಪ್ರೇರಣೆಯಾಗಿದೆ.

Exit mobile version