ಬೆಂಗಳೂರು: ಪದ್ಮಶ್ರೀ ಮತ್ತು ಮೂರು ಬಾರಿ ಗ್ರಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರ ಬೆಂಗಳೂರು ನಿವಾಸದಲ್ಲಿ ಕಳ್ಳತನ ನಡೆದಿದೆ. ಮನೆಯ ಸಂಪ್ (ಸೆಸ್ ಪೂಲ್) ಮುಚ್ಚಳವನ್ನು ಝೊಮಾಟೋ ಡೆಲಿವರಿ ಬಾಯ್ ಕದ್ದೊಯ್ದಿದ್ದಾರೆ. ಈ ಘಟನೆ ಡಿಸೆಂಬರ್ 11ರ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದ್ದು, ರಿಕ್ಕಿ ಕೇಜ್ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಂಡು ಬೆಂಗಳೂರು ಪೊಲೀಸ್ ಮತ್ತು ಝೊಮಾಟೋಗೆ ಟ್ಯಾಗ್ ಮಾಡಿ ದೂರು ದಾಖಲಿಸಿದ್ದಾರೆ.
ರಿಕ್ಕಿ ಕೇಜ್ ಅವರು ತಮ್ಮ ಪೋಸ್ಟ್‌ನಲ್ಲಿ “ಪ್ರಿಯ ಝೊಮಾಟೋ, ನಿಮ್ಮ ಡೆಲಿವರಿ ಬಾಯ್ ಒಬ್ಬರು ನನ್ನ ಮನೆಗೆ ಬಂದು ಸಂಪ್ ಕವರ್ ಕದ್ದಿದ್ದಾರೆ. ಇದು ಸಂಜೆ 6 ಗಂಟೆಗೆ ನಡೆದಿದೆ. ಬಹಳ ಧೈರ್ಯವಾಗಿ ಮಾಡಿದ್ದಾರೆ.” ಈ ಪೋಸ್ಟ್‌ನಲ್ಲಿ ಸಿಸಿಟಿವಿ ವಿಡಿಯೋಗಳು, ಕಳ್ಳನ ಮುಖದ ಸ್ಕ್ರೀನ್‌ಶಾಟ್ ಮತ್ತು ಬೈಕ್ ನಂಬರ್ ಪ್ಲೇಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಬೈಕ್ ಕೆಂಪು ಬಣ್ಣದ ಹೋಂಡಾ ಆಕ್ಟಿವಾ ಆಗಿದ್ದು, ನಂಬರ್ KA 03 HY 8751 ಎಂದು ಕಾಣುತ್ತದೆ. ರಿಕ್ಕಿ ಕೇಜ್ ಅವರು ತಮ್ಮ ಪೋಸ್ಟ್‌ನಲ್ಲಿ ಜನರನ್ನು ಎಚ್ಚರಿಕೆಯಿಂದಿರುವಂತೆ ಕೋರಿದ್ದಾರೆ. “ಇದು ನಿಮಗೂ ಆಗಬಹುದು” ಎಂದು ಎಚ್ಚರಿಕೆ ನೀಡಿದ್ದಾರೆ.
ರಿಕಿ ಕೇಜ್ ಅವರು ಯುಎಸ್‌ನಲ್ಲಿ ಜನಿಸಿದರೂ, ಎಂಟು ವರ್ಷದಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಅವರು ಪರಿಸರ ಸಂರಕ್ಷಣೆ, ಸಂಗೀತ ಮತ್ತು ಸಾಮಾಜಿಕ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಸಂಗೀತ ಆಲ್ಬಂಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿವೆ.
ಬಿಎಂಟಿಸಿ ಬಸ್ಸಿನಲ್ಲಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ
ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ
ಬೆಂಗಳೂರಿನ ಚಿಕ್ಕಬಿದರಕಲ್ಲು ನಗರದಲ್ಲಿ ಸಂಭವಿಸಿದ ಮತ್ತೊಂದು ಬಸ್ ಕಳ್ಳತನ. ಈ ಕಳ್ಳತನ ಪ್ರಕರಣದಲ್ಲಿ ಬಿಎಂಟಿಸಿ ಬಸ್ಸಿನಲ್ಲಿ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳವುಗೊಂಡ ಘಟನೆ ವರದಿಯಾಗಿದೆ.ಬೆಂಗಳೂರು ಉತ್ತರ ತಾಲೂಕಿನ ಕದರನಹಳ್ಳಿಯ ನಿವಾಸಿ ರಾಜೇಶ್ವರಿ ಅವರು ಈ ಕಳ್ಳತನಕ್ಕೆ ಬಲಿಯಾಗಿದ್ದಾರೆ.
ಘಟನೆಯ ವೈಶಿಷ್ಟ್ಯ:
ಜಿಂದಾಲ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ವೇಳೆ ರಾಜೇಶ್ವರಿ ಅವರು ದೇಹದಲ್ಲಿದ್ದ ಚಿನ್ನಾಭರಣವನ್ನು ತೆಗೆದು ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು. ನಂತರ ಸ್ಕ್ಯಾನಿಂಗ್ ಪ್ರಕ್ರಿಯೆ ನಡೆದು ವೈದ್ಯರ ತಪಾಸಣೆ ಮುಗಿಸಿ
KA57-F0599 ನಂಬರಿನ ಬಿಎಂಟಿಸಿ ಬಸ್ಸಿನಲ್ಲಿ ಗ್ರಾಮಕ್ಕೆ ಹಿಂತಿರುಗುವಾಗ, ಚಿಕ್ಕಬಿದರಕಲ್ಲು ಬಳಿಯಿಂದ ಹತ್ತಿದ್ದ ಬಸ್ ಮುಂದೆ ಸಾಗುವ ವೇಳೆ ತಿಳಿಯದಂತೆ ಬ್ಯಾಗ್‌ನ ಜಿಪ್ ತೆರೆದು ಚಿನ್ನಾಭರಣ ಕದ್ದಿದ್ದಾರೆ.
ಕಳವುಗೊಂಡ ಚಿನ್ನಾಭರಣ ಮೌಲ್ಯ: ಸುಮಾರು ₹5ಲಕ್ಷರೂಪಾಯಿಗಳು
ಕಳ್ಳತನದ ವಿಧಾನ:
ಜನಸಂದಣಿ ಇರುವ ಬಸ್ಸಿನಲ್ಲಿ ನೂಕುನಗ್ಗಲಿನ ನಡುವೆ ರಾಜೇಶ್ವರಿ ಅವರಿಗೆ ತಿಳಿಯದಂತೆ ದುಷ್ಕರ್ಮಿಗಳು ಬ್ಯಾಗ್ ಜೀಪ್ ತೆರದು ಚಿನ್ನಾಭರಣ ಎತ್ತಿ ಪರಾರಿಯಾಗಿದ್ದಾರೆ. ಬಸ್ ಇಳಿಯುವ ವೇಳೆ ಬ್ಯಾಗ್ ಗಮನಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ, ಅಷ್ಟೊತ್ತಿಗಾಗಲೇ ಕಳ್ಳರು ಬಸ್ಸಿನಿಂದ ಎಸ್ಕೇಪ್ ಆಗಿದ್ದಾರೆ.
ಪೊಲೀಸ್ ಪ್ರಕರಣ:
ಘಟನೆ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಸ್ಸಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಕಳ್ಳರ ಪತ್ತೆಗೆ ತನಿಖೆಯನ್ನು ಕೈಗೊಂಡಿದ್ದಾರೆ.
ಪ್ರಯಾಣಿಕರಿಗೆ ಸೂಚನೆ:
ಈ ರೀತಿಯ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುವವರು ತಮ್ಮ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
