‘ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು’: ಪ್ರೊ. ಪುರುಷೋತ್ತಮ ಬಿಳಿಮಲೆ

Untitled design 2025 11 19T133342.352

ಬೆಂಗಳೂರು: ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಕಾಮಿಗಳು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ್ ಬಿಳಿಮಲೆ ಅವರು ವಿವಾದಾತ್ಮಕ ಹೇಳಿಕೆ ಹೇಳಿದ್ದು, ರಾಜ್ಯದಲ್ಲಿ ತೀವ್ರ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ. ಮೈಸೂರಿನ ಮಾಸನಗಂಗೋತ್ರಿಯ ಪ್ರಸಾರಾಂಗದಲ್ಲಿ ನಡೆದ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಬಿಳಿಮಲೆ ಅವರು ಯಕ್ಷಗಾನ ಮೇಳಗಳಲ್ಲಿ ಕಲಾವಿದರು ಎದುರಿಸುತ್ತಿದ್ದ ಸಾಮಾಜಿಕ ಮತ್ತು ಮಾನಸಿಕ ಒತ್ತಡಗಳ ಬಗ್ಗೆ ಮಾತನಾಡುವ ವೇಳೆ, ಯಕ್ಷಗಾನ ಕಲಾವಿದರಿಗೆ ಸಂಬಂಧಿಸಿದ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. “ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿ ಕಾಮಿಗಳು” ಎಂದು ಅವರ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಭಾರೀ ವಿವಾದ ಸೃಷ್ಟಿಸಿದೆ.

“ನಾವು ಸತ್ಯವನ್ನು ಹೇಳಲ್ಕೊಳ್ಳಲು ಹಿಂಜರಿಯಬಾರದು”. ಯಕ್ಷಗಾನ ಕಲಾವಿದರು ವರ್ಷಕ್ಕೆ 6-7 ತಿಂಗಳು ಮೇಳದೊಂದಿಗೆ ತಾಲೂಕು-ತಾಲೂಕು ಸುತ್ತುತ್ತಾರೆ. ಗ್ರಾಮೀಣ ಜನತೆಯಲ್ಲಿ ಇನ್ನೂ “ಯಕ್ಷಗಾನ ಕಲಾವಿದನಿಗೆ ಹುಡುಗಿ ಕೊಡುವುದಿಲ್ಲ”. ಸ್ತ್ರೀ ವೇಷಧಾರಿಗಳು ಒತ್ತಡದಲ್ಲಿರುತ್ತಿದ್ದರು. “ಸ್ತ್ರೀ ವೇಷ ತೊಟ್ಟವರು ಒಂದು ವೇಳೆ ಭಾಗವತರ ಸಲಿಂಗಕಾಮದ ಪ್ರಸ್ತಾಪವನ್ನು ನಿರಾಕರಿಸಿದರೆ, ಭಾಗವತರು ಪದ್ಯವನ್ನೇ ಕೊಡುತ್ತಿರಲಿಲ್ಲ. ರಂಗದ ಮೇಲೆ ಅವಕಾಶವೇ ಇಲ್ಲದಾದರೆ ಆ ಕಲಾವಿದನ ಬದುಕೇ ಇಲ್ಲವಾಗುತ್ತಿತ್ತು” ಎಂದು ಬಿಳಿಮಲೆ ಬಯಲು ಮಾಡಿದ್ದಾರೆ.

 

Exit mobile version