ಓಲಾ-ಉಬರ್ ಬಳಸುವವರೇ ಎಚ್ಚರ! ನಾಳೆ ಆಲ್ ಇಂಡಿಯಾ ಬ್ರೇಕ್‌ಡೌನ್ ಮುಷ್ಕರ

Untitled design 2026 02 06T172328.413

ಬೆಂಗಳೂರು: ನಾಳೆ (ಫೆಬ್ರವರಿ 7) ದೇಶಾದ್ಯಂತ ಆ್ಯಪ್ ಆಧಾರಿತ ಸಾರಿಗೆ ಕಾರ್ಮಿಕರು ‘ಆಲ್ ಇಂಡಿಯಾ ಬ್ರೇಕ್‌ಡೌನ್’ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರಿಂದಾಗಿ ನಿಮ್ಮ ನಗರಗಳಲ್ಲಿ ಕ್ಯಾಬ್ ಮತ್ತು ಆಟೋ ಸೇವೆಗಳು ವ್ಯತ್ಯಯಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಏನಿದು ‘ಆಲ್ ಇಂಡಿಯಾ ಬ್ರೇಕ್‌ಡೌನ್’?

ದೇಶಾದ್ಯಂತ ಇರುವ ಗಿಗ್ ಕಾರ್ಮಿಕರ ಸಂಘಟನೆಗಳು ಈ ಬೃಹತ್ ಮುಷ್ಕರವನ್ನು ಆಯೋಜಿಸಿವೆ. ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ (TGPWU) ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದ್ದು, ಫೆಬ್ರವರಿ 7ರಂದು ಸುಮಾರು 6 ಗಂಟೆಗಳ ಕಾಲ ಚಾಲಕರು ಲಾಗ್-ಔಟ್ ಆಗುವ ಮೂಲಕ ಸೇವೆ ಸ್ಥಗಿತಗೊಳಿಸಲಿದ್ದಾರೆ. ಪ್ರಮುಖವಾಗಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಈ ಮುಷ್ಕರದ ಬಿಸಿ ಜನಸಾಮಾನ್ಯರಿಗೆ ತಟ್ಟಲಿದೆ.

ಚಾಲಕರ ಆಕ್ರೋಶಕ್ಕೆ ಕಾರಣವೇನು?
ಓಲಾ-ಉಬರ್‌ಗೆ ಪರ್ಯಾಯವಾಗಿ ಬಂದಿದೆ ‘ಭಾರತ್ ಟ್ಯಾಕ್ಸಿ’!

ಒಂದೆಡೆ ಖಾಸಗಿ ಕಂಪನಿಗಳ ಮುಷ್ಕರ ನಡೆಯುತ್ತಿದ್ದರೆ, ಇನ್ನೊಂದೆಡೆ ಕೇಂದ್ರ ಸರ್ಕಾರವು ಗಿಗ್ ಕಾರ್ಮಿಕರ ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ‘ಭಾರತ್ ಟ್ಯಾಕ್ಸಿ’ (Bharat Taxi) ಎಂಬ ಹೊಸ ಕ್ರಾಂತಿಕಾರಿ ಸೇವೆಗೆ ಚಾಲನೆ ನೀಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಯೋಜನೆಗೆ ಚಾಲನೆ ನೀಡಿದ್ದು, ಇದು ಓಲಾ-ಉಬರ್‌ಗೆ ಸರ್ಕಾರಿ ಸ್ವಾಮ್ಯದ ಪ್ರಬಲ ಪೈಪೋಟಿ ನೀಡುವ ಗುರಿ ಹೊಂದಿದೆ.

ಭಾರತ್ ಟ್ಯಾಕ್ಸಿಯ ವಿಶೇಷತೆಗಳೇನು?

  1. ಸಹಕಾರಿ ಮಾದರಿ: ಇದನ್ನು ‘ಸಹಕಾರಿ ಟ್ಯಾಕ್ಸಿ ಸಹಕಾರಿ ಲಿಮಿಟೆಡ್’ ನಿರ್ವಹಿಸುತ್ತಿದ್ದು, ಅಮುಲ್ ಮತ್ತು ನಬಾರ್ಡ್‌ನಂತಹ ಸಂಸ್ಥೆಗಳ ಬೆಂಬಲವಿದೆ.

  2. ಕಡಿಮೆ ಶುಲ್ಕ, ಹೆಚ್ಚು ಲಾಭ: ಚಾಲಕರು ಪ್ರತಿ ಸವಾರಿಗೂ ಕಮಿಷನ್ ನೀಡುವ ಅಗತ್ಯವಿಲ್ಲ. ಬದಲಾಗಿ ದಿನಕ್ಕೆ ಕೇವಲ 30 ರೂಪಾಯಿ ನಿಗದಿತ ಶುಲ್ಕ ಪಾವತಿಸಿದರೆ ಸಾಕು. ಇದರಿಂದ ಚಾಲಕರ ಆದಾಯ ಹೆಚ್ಚಾಗಲಿದೆ.

  3. ಪ್ರಯಾಣಿಕರಿಗೂ ಬಂಪರ್: ಈ ಆ್ಯಪ್‌ನಲ್ಲಿ ‘ಸರ್ಜ್ ಪ್ರೈಸಿಂಗ್’ (Surge Pricing) ಇರುವುದಿಲ್ಲ. ಅಂದರೆ ಪೀಕ್ ಅವರ್‌ನಲ್ಲಿ ಅಥವಾ ಮಳೆ ಬಂದಾಗ ದರ ಏರಿಕೆಯ ಕಿರಿಕಿರಿ ಇರುವುದಿಲ್ಲ.

  4. ಸಾಮಾಜಿಕ ಭದ್ರತೆ: ಚಾಲಕರಿಗೆ ಅಪಘಾತ ವಿಮೆ, ಆರೋಗ್ಯ ವಿಮೆ ಮತ್ತು ನಿವೃತ್ತಿ ಉಳಿತಾಯ ಯೋಜನೆಗಳ ಸೌಲಭ್ಯವನ್ನು ಈ ವೇದಿಕೆ ಒದಗಿಸಲಿದೆ.

ನಾಳೆಯ ಮುಷ್ಕರವು ಸಾರಿಗೆ ವಲಯದಲ್ಲಿ ದೊಡ್ಡ ಬದಲಾವಣೆಗೆ ಮುನ್ನುಡಿ ಬರೆಯುವ ಲಕ್ಷಣ ಕಾಣಿಸುತ್ತಿದ್ದು, ಸರ್ಕಾರಿ ಸ್ವಾಮ್ಯದ ‘ಭಾರತ್ ಟ್ಯಾಕ್ಸಿ’ ಗ್ರಾಹಕರ ಹೇಗೆ ನೆರವಾಗುತ್ತದೆ ಎಂದು ಕಾದು ನೋಡಬೇಕು.

Exit mobile version