ನೈಸ್ ರಸ್ತೆ ಟೋಲ್ ದರ ಏರಿಕೆ: ಇಂದಿನಿಂದ ಜಾರಿ, ಇಲ್ಲಿದೆ ಹೊಸ ದರ ಪಟ್ಟಿ !

Web 2025 07 01t091611.893

ಬೆಂಗಳೂರಿನ ನೈಸ್ ರಸ್ತೆ (NICE Road) ಬಳಕೆದಾರರಿಗೆ ಇಂದಿನಿಂದ ಶಾಕಿಂಗ್ ಸುದ್ದಿ. ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (NICE) ಟೋಲ್ ದರವನ್ನು ಶೇ. 15ರಷ್ಟು ಹೆಚ್ಚಿಸಿದ್ದು, ಈ ಪರಿಷ್ಕೃತ ದರಗಳು ಜುಲೈ 1, 2025ರಿಂದ ಜಾರಿಗೆ ಬಂದಿವೆ. ಕರ್ನಾಟಕದಲ್ಲಿ ಸಾಲು ಸಾಲು ಬೆಲೆ ಏರಿಕೆಯಿಂದ ಈಗಾಗಲೇ ಜನಸಾಮಾನ್ಯರು ಮತ್ತು ಮಧ್ಯಮ ವರ್ಗದವರು ಹೈರಾಣಾಗಿದ್ದಾರೆ.

ಈಗ ನೈಸ್ ರಸ್ತೆಯ ಟೋಲ್ ದರ ಏರಿಕೆಯಿಂದ (NICE Road Toll Price Hike) ವಾಹನ ಸವಾರರಿಗೆ ಹೆಚ್ಚಿನ ಆರ್ಥಿಕ ಭಾರವಾಗಲಿದೆ. ಈ ದರ ಏರಿಕೆಯು ಕರ್ನಾಟಕ ಸರ್ಕಾರದ ಟೋಲ್ ರಿಯಾಯಿತಿ ಒಪ್ಪಂದ ಮತ್ತು ಪಿಡಬ್ಲ್ಯುಡಿ 40 ಸಿಆರ್‌ಎಂ 2008 ಅನ್ವಯ ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (BMIC) ಯೋಜನೆಯ ಫೆರಿಫೆರಲ್ ರಸ್ತೆ ಮತ್ತು ಲಿಂಕ್ ರಸ್ತೆಗಳಿಗೆ ಅನ್ವಯವಾಗಲಿದೆ.

ನೈಸ್ ರಸ್ತೆಯ ಒಟ್ಟು 8 ಟೋಲ್ ಪ್ಲಾಜಾಗಳಲ್ಲಿ ದರ ಏರಿಕೆ ಜಾರಿಗೆ ಬಂದಿದೆ. ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಕ್ಲೋವರ್ ಲೀಫ್ ಜಂಕ್ಷನ್, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಮತ್ತು ಲಿಂಕ್ ರಸ್ತೆಗಳಲ್ಲಿ ಓಡಾಡುವ ವಾಹನಗಳಿಗೆ ಈ ಹೊಸ ದರಗಳು ಅನ್ವಯವಾಗಲಿವೆ. ಈ ಏರಿಕೆಯಿಂದ ಕಾರು, ಬೈಕ್, ಬಸ್, ಟ್ರಕ್, ಮತ್ತು ಇತರ ವಾಹನಗಳಿಗೆ ಹೆಚ್ಚಿನ ಶುಲ್ಕ ತೆರಲೇಬೇಕಾಗುತ್ತದೆ.

ಪರಿಷ್ಕೃತ ಟೋಲ್ ದರ ಪಟ್ಟಿ (ರೂ.ಗಳಲ್ಲಿ)

ರಸ್ತೆ ವಿಭಾಗ

ವಾಹನದ ಪ್ರಕಾರ

ಹಳೆ ದರ

ಹೊಸ ದರ

ತುಮಕೂರು ರಸ್ತೆ

ಕಾರು

215 233

ಬೈಕ್

70 78

ಬಸ್

570 650

ಕನಕಪುರ ರಸ್ತೆ

ಕಾರು

105 110

ಬೈಕ್

30 33

ಬಸ್

260 295

ಬನ್ನೇರುಘಟ್ಟ ರಸ್ತೆ

ಕಾರು

150 158

ಬೈಕ್

45 48

ಬಸ್

395 450

ಹೊಸೂರು ರಸ್ತೆ

ಕಾರು

210 223

ಬೈಕ್

70 78

ಬಸ್

568 645

ಈ ಟೋಲ್ ದರ ಏರಿಕೆಯಿಂದ ವಾಹನ ಸವಾರರು, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೇ. 15ರಷ್ಟು ದರ ಏರಿಕೆಯು ಜನಸಾಮಾನ್ಯರ ಹಿತಾಸಕ್ತಿಯನ್ನು ಕಡೆಗಣಿಸಿದೆ ಎಂದು ಆರೋಪಿಸಲಾಗಿದೆ. ಈ ರಸ್ತೆಯನ್ನು ದಿನನಿತ್ಯ ಬಳಸುವ ಸಾವಿರಾರು ವಾಹನ ಸವಾರರಿಗೆ ಈ ಏರಿಕೆ ಆರ್ಥಿಕ ಒತ್ತಡವನ್ನು ಹೆಚ್ಚಿಸಲಿದೆ. ಕೆಲವರು ಈ ರಸ್ತೆಯ ಮೇಲಿನ ದಟ್ಟಣೆ ಮತ್ತು ನಿರ್ವಹಣೆಯ ಕೊರತೆಯನ್ನು ಗಮನಿಸಿದರೆ ಈ ಏರಿಕೆ ಸಮಂಜಸವಲ್ಲ ಎಂದು ವಾದಿಸಿದ್ದಾರೆ.

ಸರ್ಕಾರ ಮತ್ತು NICEನಿಂದ ಸ್ಪಷ್ಟನೆ

ನೈಸ್ ಅಧಿಕಾರಿಗಳ ಪ್ರಕಾರ, ಈ ದರ ಏರಿಕೆಯು ರಸ್ತೆಯ ನಿರ್ವಹಣೆ ಮತ್ತು ಮೂಲಸೌಕರ್ಯ ಸುಧಾರಣೆಗೆ ಅಗತ್ಯವಾಗಿದೆ. ಕರ್ನಾಟಕ ಸರ್ಕಾರದ ಒಪ್ಪಂದದ ಅನುಸಾರ ಈ ಏರಿಕೆಯನ್ನು ಜಾರಿಗೆ ತರಲಾಗಿದೆ ಎಂದು ಕಂಪನಿ ತಿಳಿಸಿದೆ. ಆದರೆ, ಈ ಹಠಾತ್ ದರ ಏರಿಕೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ. ಸರ್ಕಾರ ಈ ವಿಷಯದಲ್ಲಿ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version