ನೆಲಮಂಗಲ ಗ್ಯಾಂಗ್ ರೇ*ಪ್ ಪ್ರಕರಣ: ಪ್ರಮುಖ ಆರೋಪಿ ಮಿಥುನ್ ಬಂಧನ

Untitled design 2025 10 28t105905.664

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡನಹಳ್ಳಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ದಿನ (ಅಕ್ಟೋಬರ್ 26, 2025) ಗಂಗೊಂಡನಹಳ್ಳಿಯ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಪುರುಷನನ್ನು ಕಟ್ಟಿಹಾಕಿ ಹಲ್ಲೆ ಮಾಡಿ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ನಾಪತ್ತೆಯಾಗಿದ್ದರು. ಈ ಘಟನೆಯ ಪ್ರಮುಖ ಆರೋಪಿಯಾದ ಮಿಥುನ್‌ನನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ದಾಖಲಾದ ಕೂಡಲೇ ತಲೆಮರೆಸಿಕೊಂಡಿದ್ದ ಮಿಥುನ್, ನೆಲಮಂಗಲ ತಾಲೂಕಿನ ಶಿವಗಂಗೆ ಸಮೀಪದಲ್ಲಿ ತಲೆಮರೆಸಿಕೊಂಡಿದ್ದ. ನೆಲಮಂಗಲ ಡಿವೈಎಸ್‌ಪಿ ಜಗದೀಶ್ ನೇತೃತ್ವದ ತಂಡವು ಆರೋಪಿಯನ್ನು ಹುಡುಕಿ ಬಂಧಿಸಿದ್ದಾರೆ. ಈ ಪ್ರಕರಣದ ಒಟ್ಟು ಆರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇವರಲ್ಲಿ ಇಬ್ಬರು ಅಪ್ರಾಪ್ತ ಬಾಲಕರಾಗಿದ್ದು, ಅವರನ್ನು ಬಾಲಪರಾಧಿ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಉಳಿದಂತೆ ಮಿಥುನ್, ಕಾರ್ತಿಕ್, ನವೀನ್, ಮತ್ತು ಗ್ಲಾನಿ ಬಂಧನದಲ್ಲಿದ್ದಾರೆ.

ದುಷ್ಕರ್ಮಿಗಳು ಮನೆಗೆ ನುಗ್ಗಿ, ಮನೆಯಲ್ಲಿದ್ದ ಪುರುಷನನ್ನು ಕಟ್ಟಿಹಾಕಿ, ದೈಹಿಕವಾಗಿ ಹಲ್ಲೆ ಮಾಡಿದ ನಂತರ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಘಟನೆಯ ಬಗ್ಗೆ ದೂರು ದಾಖಲಾದ ಕೂಡಲೇ, ನೆಲಮಂಗಲ ಪೊಲೀಸರು ತೀವ್ರ ತನಿಖೆಯನ್ನು ಆರಂಭಿಸಿದರು. ಮಿಥುನ್, ಈ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದನು. ಆದರೆ, ಶಿವಗಂಗೆಯ ಸಮೀಪದಲ್ಲಿ ಅವನನ್ನು ಕಂಡುಹಿಡಿದ ಪೊಲೀಸರು, ಯಶಸ್ವಿಯಾಗಿ ಬಂಧಿಸಿದರು.

 

Exit mobile version