ಪಿಇಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ MR. ದೊರೆಸ್ವಾಮಿ ಅವರ ನಿಧನಕ್ಕೆ ಡಿ.ಕೆ.ಶಿವಕುಮಾರ್ ಸಂತಾಪ

Untitled design 2025 03 07t083234.829

ಬೆಂಗಳೂರು: ಪಿಇಎಸ್‌ ಸಮೂಹ ಶೈಕ್ಷಣಿಕ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರು, ಶಿಕ್ಷಣ ತಜ್ಞ ಎಂ.ಆರ್. ದೊರೆಸ್ವಾಮಿ ಅವರ ನಿಧನಕ್ಕೆ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

“ನಗರದ ಬನಶಂಕರಿ ನಗರ 2ನೇ ಹಂತದಲ್ಲಿರುವ ಮೃತರ ನಿವಾಸಕ್ಕೆ ಗುರುವಾರ ರಾತ್ರಿ ಭೇಟಿ ನೀಡಿದ ಡಿಸಿಎಂ ಅವರು ಮೃತರ ಅಂತಿಮ ದರ್ಶನ ಪಡೆದರು. ದೊರೆಸ್ವಾಮಿ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.”

“ಸ್ವಾಮಿ ವಿವೇಕಾನಂದರು ಹಾಗೂ ಮಹಾತ್ಮ ಗಾಂಧಿ ಅವರ ಜೀವನ ತತ್ವ ಆದರ್ಶಗಳನ್ನು ಮಾದರಿಯಾಗಿಟ್ಟುಕೊಂಡು ಪೀಪಲ್ಸ್ ಎಜುಕೇಷನ್ ಸೊಸೈಟಿ (ಪಿಇಎಸ್) ಎನ್ನುವ ಬೃಹದಾಕಾರದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ, ಬೆಳೆಸಿದವರು, ದೇಶ-ವಿದೇಶಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಎಂ.ಆರ್. ದೊರೆಸ್ವಾಮಿ ಅವರು ಛಲಗಾರರಾಗಿದ್ದರು.

ಬೃಹತ್ ಶೈಕ್ಷಣಿಕ ಸಾಮ್ರಾಜ್ಯ ಕಟ್ಟಿರುವ ಎಂ.ಆರ್. ದೊರೆಸ್ವಾಮಿ ಅವರನ್ನು ಹತ್ತಿರದಿಂದ ಬಲ್ಲೆ. ಅವರಿಂದ ನೂರಾರು ಅಂಶಗಳನ್ನು ಕಲಿತಿದ್ದೇನೆ. ಅವರ ಸಾಹಸದ ಮನೋಭಾವ ಇಂದಿನ ಯುವ ಜನರಿಗೆ ಸ್ಪೂರ್ತಿದಾಯಕ.

ಮಾಜಿ ಸಚಿವ ದಯಾನಂದ ಸಾಗರ್ ಅವರ ಗರಡಿಯಲ್ಲಿ ಬೆಳೆದು ಚಿಕ್ಕ ವಯಸ್ಸಿಗೆ ಪ್ರಾಂಶುಪಾಲರಾಗಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟವರು. ಹನುಮಂತನಗರದ ಕೆಂಪಣ್ಣ ಗರಡಿ ಮನೆ ಆವರಣದಲ್ಲಿ 1973 ರಲ್ಲಿ ಪಿಇಎಸ್ ಪಿಯು ಕಾಲೇಜು ಆರಂಭಿಸಿ, ಮುಂದೆ ಅದನ್ನು ಬೃಹದಾಕಾರವಾಗಿ ಬೆಳೆಸಿದ ಶಿಕ್ಷಣ ಸಾಹಸಿ. ಎಂಜಿನಿಯರಿಂಗ್ ಶಿಕ್ಷಣಕ್ಕೆ ಬ್ರಾಂಡ್ ಮೌಲ್ಯ ತಂದು ಕೊಟ್ಟವರು.

ಇವರ ಅಗಲಿಕೆ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟ.‌ ಇವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಕುಟುಂಬದ ಸದಸ್ಯರಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Exit mobile version