ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿಯೇ ಹಾಲಿನ ದರ ಕಡಿಮೆ ಬೆಲೆ!

ಹಾಲು ದರ ಏರಿಕೆಗೆ ಸಿಎಂ ಸಿದ್ದರಾಮಯ್ಯ ಸಮರ್ಥನೆ

Film (87)

ಕರ್ನಾಟಕ ರಾಜ್ಯ ಸರ್ಕಾರವು ಹಾಲಿನ ದರ ಏರಿಕೆಗೆ ನಿರ್ಧಾರವನ್ನು ಕೈಗೊಂಡಿದೆ. ನಿನ್ನೆಯಷ್ಟೇ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನಕ್ಕೆ ಅನುಮೋದನೆ ದೊರೆತಿದ್ದು, ನಂದಿನಿ ಹಾಲಿನ ಪ್ರತಿ ಲೀಟರ್‌ಗೆ 4 ರೂಪಾಯಿಗಳ ಏರಿಕೆಯ ಆದೇಶವನ್ನು ಹೊರಡಿಸಲಾಗಿದೆ. ಹಾಲು ಒಕ್ಕೂಟ ಮತ್ತು ರೈತರಿಂದ ಹಲವು ದಿನಗಳಿಂದ ಹಾಲಿನ ದರ ಹೆಚ್ಚಿಸುವಂತೆ ಸತತವಾಗಿ ಮನವಿ ಸಲ್ಲಿಸುತ್ತಿದ್ದರು. ರೈತರು ಪ್ರತಿ ಲೀಟರ್‌ಗೆ 5 ರೂಪಾಯಿಗಳ ಹೆಚ್ಚಳವನ್ನು ಕೋರಿದ್ದರೂ, ಆದರೆ ಸಿದ್ದರಾಮಯ್ಯ ಸರ್ಕಾರವು 4 ರೂಪಾಯಿಗಳ ಏರಿಕೆಗೆ ಮಾತ್ರ ಒಪ್ಪಿಗೆ ನೀಡಿದೆ.

ಹಾಲಿನ ದರ ಏರಿಕೆಯ ಘೋಷಣೆಯಾದ ಬೆನ್ನಲ್ಲೇ, ಜನರು ಮತ್ತು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬಸ್ ಮತ್ತು ಮೆಟ್ರೋ ದರ ಏರಿಕೆಯಿಂದ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಿರುವಾಗ, ಇದೀಗ ಹಾಲಿನ ದರವನ್ನು ಹೆಚ್ಚಿಸಿರುವುದು ಜನರಲ್ಲಿ ಕೋಪ ಮತ್ತು ಅತೃಪ್ತಿಗೆ ಕಾರಣವಾಗಿದೆ. ವಿರೋಧ ಪಕ್ಷಗಳು ಸಹ ಸರ್ಕಾರದ ಈ ಕ್ರಮವನ್ನು ಖಂಡಿಸಿ, ಜನವಿರೋಧಿ ನೀತಿ ಎಂದು ಟೀಕಿಸಿವೆ.

ಈ ಟೀಕೆಗಳ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಅವರು ಎಕ್ಸ್‌ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ, ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಇನ್ನೂ ಕಡಿಮೆ ಇದೆ ಎಂದು ವಾದಿಸಿದ್ದಾರೆ.
ಕರ್ನಾಟಕದ ರಾಜ್ಯಗಳ  ಹಾಲಿನ ದರ:

ರಾಜ್ಯ ಮಾರಾಟ ದರ (ಪ್ರತಿ ಲೀಟರ್‌ಗೆ)
ಕೇರಳ 52 ರೂ.
ಗುಜರಾತ್ 53 ರೂ.
ದೆಹಲಿ 55 ರೂ.
ಮಹಾರಾಷ್ಟ್ರ 52 ರೂ.
ತೆಲಂಗಾಣ 58 ರೂ.
ಕರ್ನಾಟಕ 46 ರೂ. 

 

Exit mobile version