ಹಳೇ ವೈಶಮ್ಯಕ್ಕೆ ಡ್ರೈವರ್‌ ಮೇಲೆ ದುಷ್ಕರ್ಮಿಗಳಿಂದ ಹ*ಲ್ಲೆ  

Untitled design (4)

ಬೆಂಗಳೂರು; ಟೆಂಪೋ ಡ್ರೈವರ್ ಮೇಲೆ ಲಾಂಗು ಮಚ್ಚಿನಿಂದ ಅಟ್ಯಾಕ್ ಮಾಡಿರುವ ಘಟನೆ ಮಲ್ಲೇಶ್ವರಮ್‌ನಲ್ಲಿ ನಡೆದಿದೆ. 38 ವರ್ಷದ ಜಾವೆದ್‌ ಪಾಷ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ.

ಶ್ರೀರಾಂಪುರ ನಿವಾಸಿಯಾಗಿರುವ ಜಾವೀದ್ ಪಾಷ, ಎಂಡಿ ಬ್ಲಾಕ್‌ನ ಮಸೀದಿಯಲ್ಲಿ ನಮಾಜ್ ಮಾಡಲು ಬಂದಿದ್ದರು. ನಮಾಜ್ ಮುಗಿಸಿ ಪಕ್ಕದ ಅಂಗಡಿಯಲ್ಲಿ ಟೀ ಕುಡಿಯುತ್ತಿರುವ ವೇಳೆ, ನಾಲ್ಕೈದು ಜನ ದುಷ್ಕರ್ಮಿಗಳು ಲಾಂಗು,ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಗಾಯಗೊಂಡಿರುವ ಜಾವೀದ್ ಪಾಷ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಳೇ ದ್ವೇಷದ ಹಿನ್ನೆಲೆ ಹಲ್ಲೆ ಮಾಡಿರುವ  ಶಂಕೆ ವ್ಯಕ್ತವಾಗಿದೆ.ಈ ಸಂಬಂಧ ಮಲ್ಲೇಶ್ವರಮ್‌ ಪೊಲೀಸರು  ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ಗಲಾಟೆವೊಂದರಲ್ಲಿ ಜಾವೆದ್‌ ದೂರುದಾರನ ಪರ ಇದ್ದ ಕಾರಣ ಜಾವಿದ್ ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Exit mobile version