ತುಂಬಿದ ಕೊಡ ತುಳಿಕಿತಲೇ ಪರಾಕ್: ಭವಿಷ್ಯ ನುಡಿದ ಮೈಲಾರ ಲಿಂಗೇಶ್ವರ ಕಾರ್ಣಿಕ

ಮೈಲಾರಲಿಂಗೇಶ್ವರನ ಕಾರ್ಣಿಕ ನುಡಿ

Untitled design (93)

ಹೂವಿನಹಡಗಲಿ: ನಾಡಿನ ಜನರು ಕುತೂಹಲದಿಂದ ಕಾಯುತ್ತಿದ್ದ ಹೂವಿನಹಡಗಲಿ ತಾಲೂಕಿನ ಐತಿಹಾಸಿಕ ಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿದ ಭವಿಷ್ಯವಾಣಿ ಈ ವರ್ಷವೂ ಗಮನಸೆಳೆದಿದೆ.

ಮೈಲಾರ ಲಿಂಗೇಶ್ವರ ಜಾತ್ರೆಯ ಪ್ರಯುಕ್ತ ಡಂಕನಮರಡಿಯಲ್ಲಿ ಶುಕ್ರವಾರ ಸಂಜೆ 15 ಅಡಿ ಎತ್ತರದ ಬಿಲ್ಲು ಏರಿ ರಾಮಪ್ಪ ಗೊರವಯ್ಯ ಕಾರ್ಣಿಕ ಭವಿಷ್ಯವಾಣಿ ನುಡಿಸಿದರು. ಈ ಬಾರಿ ಅವರು, “ತುಂಬಿದ ಕೊಡ ತುಳಿಕಿತಲೇ ಪರಾಕ್” ಎಂಬ ಭವಿಷ್ಯವಾಣಿ ನೀಡಿದರು.

ADVERTISEMENT
ADVERTISEMENT

ಭವಿಷ್ಯವಾಣಿಯ ಅರ್ಥ:

ಈ ಭವಿಷ್ಯವಾಣಿ ಮುಂಬರುವ ಮುಂಗಾರು ಹಾಗೂ ಹಿಂಗಾರಿನಲ್ಲಿ ಉತ್ತಮ ಮಳೆ ಬರಲಿದೆ ಎಂಬ ಸಂಕೇತವನ್ನು ನೀಡಿದರೂ, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರುವಂತಿಲ್ಲ ಎಂಬ ಅರ್ಥವನ್ನೂ ಹೊಂದಿದೆ. ರಾಜಕೀಯವಾಗಿ ಬದಲಾವಣೆ ಸಾಧ್ಯತೆ ಮತ್ತು ಪ್ರಮುಖ ವ್ಯಕ್ತಿಗಳು ಪಕ್ಷಬದಲಾವಣೆ ಮಾಡುವ ಸುಳಿವು ನೀಡಿದಂತಿದೆ.

ಐತಿಹಾಸಿಕ ಮತ್ತು ಆಧ್ಯಾತ್ಮಿಕ ಮಹತ್ವ:

ಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿದ ಭವಿಷ್ಯವಾಣಿ ಹಿಂದಿನ ವರ್ಷಗಳಲ್ಲಿ ಕೂಡ ಸತ್ಯಸಂಧಿ ಹೊಂದಿದ ಹಿನ್ನೆಲೆ, ಕರ್ನಾಟಕ ಮಾತ್ರವಲ್ಲ, ದಕ್ಷಿಣ ಭಾರತದ ನಾನಾ ರಾಜ್ಯಗಳ ಭಕ್ತರು ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಕಾರ್ಣಿಕೋತ್ಸವಕ್ಕೂ ಮುನ್ನ ಗೊರವಯ್ಯ ರಾಮಪ್ಪ ಸತತ 9 ದಿನಗಳ ಕಾಲ ಉಪವಾಸ ಮಾಡುವುದು ವಿಶೇಷವಾಗಿದೆ.

ಭಕ್ತರ ಅಪಾರ ಪ್ರವಾಹ:

ಈ ಬಾರಿಗೆ ಕಾರ್ಣಿಕೋತ್ಸವವು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಸಂಯುಕ್ತ ಸಹಕಾರದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜನರು ಮಾತ್ರವಲ್ಲದೇ, ಅಂತಾರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಸುತ್ತಮುತ್ತಲಿನ ಗ್ರಾಮೀಣ ಭಕ್ತರು ಎತ್ತಿನ ಬಂಡಿ, ಟ್ರಾಕ್ಟರ್ ಮೂಲಕ ಮೈಲಾರ ಕ್ಷೇತ್ರಕ್ಕೆ ಆಗಮಿಸಿದ್ದು ಉತ್ಸವದ ವಿಶೇಷತೆಯಾಗಿತ್ತು.

Exit mobile version